ಆ್ಯಪ್ನಗರ

ಅವರಿಗೆ ಸ್ವಲ್ಪ ಬಿಡುವು ನೀಡಿ: ಸಚಿನ್

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ತಪ್ಪಿತ್ತಸ್ಥರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬೆನ್‌ಕ್ರಾಫ್ಟ್ ವಿರುದ್ಧ ಸರಿಯಾದ ಕ್ರಮವನ್ನು ಕೈಗೊಳಲಾಗಿದೆ ಎಂದು ಹೇಳಿರುವ ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್, ಇದೀಗ ಅವರಿಗೆ ಸ್ವಲ್ಪ ಬಿಡುವು ನೀಡುವಂತೆ ತಿಳಿಸಿದ್ದಾರೆ.

TIMESOFINDIA.COM 30 Mar 2018, 3:32 pm
ಹೊಸದಿಲ್ಲಿ: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ತಪ್ಪಿತ್ತಸ್ಥರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬೆನ್‌ಕ್ರಾಫ್ಟ್ ವಿರುದ್ಧ ಸರಿಯಾದ ಕ್ರಮವನ್ನು ಕೈಗೊಳಲಾಗಿದೆ ಎಂದು ಹೇಳಿರುವ ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್, ಇದೀಗ ಅವರಿಗೆ ಸ್ವಲ್ಪ ಬಿಡುವು ನೀಡುವಂತೆ ತಿಳಿಸಿದ್ದಾರೆ.
Vijaya Karnataka Web steve-smith-crying


ಚೆಂಡು ವಿರೂಪಗೊಳಿಸಿರುವ ಪ್ರಕರಣದಲ್ಲಿ ಸ್ಟಿತ್ ಹಾಗೂ ವಾರ್ನರ್ ಮೇಲೆ ಒಂದು ವರ್ಷ ಹಾಗೂ ಬೆನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳುಗಳ ನಿಷೇಧವನ್ನು ಕ್ರಿಕೆಟ್ ಆಸ್ಟ್ರೇಲಿಯಾ ವಿಧಿಸಿದೆ.

ಬಳಿಕ ತವರಿಗೆ ಹಿಂತಿರುಗಿರುವ ಸ್ಮಿತ್, ಕಣ್ಮೀರಧಾರೆ ಸುರಿಸುತ್ತಾ ತಪ್ಪೊಪ್ಪಿಗೆಯನ್ನು ನಡೆಸಿದ್ದರು. ಅವರಿಗೆ ವಿಷಾದುಸುತ್ತಿದ್ದಾರೆ ಹಾಗೂ ನೋವುಂಟಾಗಿದೆ. ಅವರು ಮಾಡಿರುವ ಕೃತ್ಯದ ಪರಿಣಾಮದೊಂದಿಗೆ ಜೀವಿಸಬೇಕಿದೆ. ಆಟಗಾರರ ಜತೆ ಅವರ ಕುಟುಂಬ ಸಹ ಅನುಭವಿಸಬೇಕಿದೆ. ಈ ಬಗ್ಗೆ ಚಿಂತನೆ ಮಾಡಿ. ನಾವೆಲ್ಲ ಒಂದು ಹೆಜ್ಜೆ ಹಿಂದಿಟ್ಟು ಅವರನ್ನು ಅವರಷ್ಟಕ್ಕೆ ಬಿಡುವಂತೆ ಕೋರಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಆಟಗಾರ ಕ್ಯಾಮರಾನ್ ಬೆನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿ ಸಿಕ್ಕಿ ಬಿದಿದ್ದರು. ಬಳಿಕ ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ಸ್ಮಿತ್ ತಪ್ಪೊಪ್ಪಿಗೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌