ಆ್ಯಪ್ನಗರ

ಆಸೀಸ್ ವಿರುದ್ಧ ಏಕದಿನ ಸರಣಿ ವೇಳೆಗೆ ಪಾಂಡ್ಯ ಕಮ್‌ಬ್ಯಾಕ್?

ಅಭ್ಯಾಸವನ್ನು ಆರಂಭಿಸಿದ ಪಾಂಡ್ಯ

Vijaya Karnataka Web 22 Nov 2018, 2:42 pm
ಹೊಸದಿಲ್ಲಿ: ಸದ್ಯ ಪುನಶ್ಚೇತನದ ಹಂತದಲ್ಲಿರುವ ಭಾರತೀಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಮುಂಬರುವ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಸರಣಿ ವೇಳೆ ಪುನರಾಗಮನವನ್ನು ಎದುರು ನೋಡುತ್ತಿದ್ದಾರೆ.
Vijaya Karnataka Web hardik-pandya-26


ಕಳೆದ ಏಷ್ಯಾ ಕಪ್ ವೇಳೆ ಪಾಂಡ್ಯ ಗಾಯಕ್ಕೊಳಗಾಗಿದ್ದರು. ತದಾ ಬಳಿಕ ವಿಶ್ರಾಂತಿಯಲ್ಲಿದ್ದಾರೆ. ಇದರಿಂದಾಗಿ ಕಳೆದ ವೆಸ್ಟ್‌ಇಂಡೀಸ್ ಹಾಗೂ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಟ್ವೆಂಟಿ-20 ಹಾಗೂ ಟೆಸ್ಟ್ ಸರಣಿಗಳ ಆಯ್ಕೆಗೆ ಪಾಂಡ್ಯ ಹೆಸರನ್ನು ಪರಿಗಣಿಸಲಾಗಿಲ್ಲ.

ಟಿ-20, ಏಕದಿನ ಹಾಗೂ ಟೆಸ್ಟ್ ಸೇರಿದಂತೆ ಎಲ್ಲ ಪ್ರಕಾರದ ಆಟದಲ್ಲೂ ಪಾಂಡ್ಯ ಪ್ರಮುಖ ಅಸ್ತ್ರವಾಗಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಕೋನದಲ್ಲಿ ಪಾಂಡ್ಯ ಆದಷ್ಟು ಬೇಗ ಗುಣಮುಖರಾಗಿ ಲಯಕ್ಕೆ ಮರಳಬೇಕಾಗಿರುವುದು ಟೀಮ್ ಇಂಡಿಯಾ ಪಾಲಿಗೆ ಅತಿ ಅಗತ್ಯವಾಗಿದೆ.

"2019 ಜನವರಿ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಏಕದಿನ ಸರಣಿ ವೇಳೆಗೆ ಸಂಪೂರ್ಣ ಫಿಟ್ನೆಸ್ ಸಾಧಿಸುವುದು ನನ್ನ ಗುರಿಯಾಗಿದೆ. ನಾನೀಗ ಮುಂಬಯಿಯಲ್ಲಿ ಕಠಿಣ ತರಬೇತಿಯಲ್ಲಿ ಮುಂದುವರಿದಿದ್ದೇನೆ. ಎರಡು ತಿಂಗಳುಗಳ ಬಳಿಕ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿದ್ದೇನೆ. ಏಕದಿನದಲ್ಲೂ ಕೆಲವು ಓವರ್ ದಾಳಿ ನಡೆಸಿದರೆ ನಾನು ಟ್ರ್ಯಾಕ್‌ಗೆ ಮರಳಲಿದ್ದೇನೆ" ಎಂದು ಪಾಂಡ್ಯ ವಿವರಿಸಿದರು.

ಆಸೀಸ್ ಸರಣಿ ಬಗ್ಗೆ ಮಾತನಾಡಿದ ಪಾಂಡ್ಯ, "ಆಸೀಸ್ ಅವರದ್ದೇ ನೆಲದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದು, ಆದರೆ ಸರಣಿ ಗೆಲ್ಲುವ ಸಾಮರ್ಥ್ಯ ಟೀಮ್ ಇಂಡಿಯಾಗಿದೆ" ಎಂಬುದನ್ನು ಹೇಳಿದರು.

2016ರಲ್ಲಿ ಡೆಬ್ಯು ಮಾಡಿರುವ ಪಾಂಡ್ಯ ಅಲ್ಲಿಂದ ಬಳಿಕ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಸದ್ಯ ಪಾಂಡ್ಯ ಅಲಭ್ಯತೆಯಲ್ಲಿ ಅವರ ಸಹೋದರ ಕೃುಣಾಲ್ ಪಾಂಡ್ಯ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌