ಆ್ಯಪ್ನಗರ

ಅಂತಿಮ ಎರಡು ಟೆಸ್ಟ್‌ಗಳಿಗೆ ಪಾಂಡ್ಯ ಕಮ್‌ಬ್ಯಾಕ್?

ರಣಜಿ ಟ್ರೋಫಿಯಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮ್ಯಾಚ್ ಫಿಟ್ನೆಸ್ ಸಾಬೀತು ಮಾಡುವ ತವಕದಲ್ಲಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಕಮ್‌ಬ್ಯಾಕ್ ಗುರಿಯಿರಿಸಿದ್ದಾರೆ.

Vijaya Karnataka Web 14 Dec 2018, 2:47 pm
ಹೊಸದಿಲ್ಲಿ: ಸದ್ಯ ಪುನಶ್ಚೇತನದ ಹಂತದಲ್ಲಿರುವ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ, ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಎರಡು ಪಂದ್ಯಗಳ ವೇಳೆ ತಂಡವನ್ನು ಸೇರಿಕೊಳ್ಳುವ ಗುರಿಯಿರಿಸಿಕೊಂಡಿದ್ದಾರೆ.
Vijaya Karnataka Web hardik-pandya-09


ಕಳೆದ ಏಷ್ಯಾ ಕಪ್ ವೇಳೆ ಗಾಯಕ್ಕೊಳಗಾಗಿರುವ ಪಾಂಡ್ಯ, ಸದ್ಯ ಪುನಶ್ಚೇತನದ ಹಾದಿಯಲ್ಲಿದ್ದು, ಮುಂಬಯಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸುತ್ತಾರೆ.

ಮುಂಬಯಿ ವಿರುದ್ಧದ ರಣಜಿ ಪಂದ್ಯದಲ್ಲಿ ಸಂಪೂರ್ಣ ಮ್ಯಾಚ್ ಫಿಟ್ನೆಸ್ ಪಡೆಯುವುದು ಹಾಗೂ ಅದನ್ನು ಆಯ್ಕೆಗಾರರ ಮುಂದೆ ಸಾಬೀತು ಮಾಡುವುದು ಪಾಂಡ್ಯ ಗುರಿಯಾಗಿದೆ.

ಮೂರು ತಿಂಗಳುಗಳ ಬಳಿಕ ಅಂಗಣಕ್ಕಿಳಿದಿರುವ ಪಾಂಡ್ಯ, ಟೀಮ್ ಇಂಡಿಯಾ ಕಮ್‌ಬ್ಯಾಕ್ ಗುರಿಯಾಗಿರಿಸಿದ್ದಾರೆ. ಇದರಂತೆ ಮೈದಾನಕ್ಕಿಳಿಯಲು ಅತೀವ ಉತ್ಸುಕಗೊಂಡಿರುವುದಾಗಿ ತಿಳಿಸಿದ್ದಾರೆ.

"ನಾನು ಸರಿಯಾದ ದಿಶೆಯತ್ತ ಸಾಗುತ್ತಿದ್ದೇನೆ. ಆದಷ್ಟು ಬೇಗ ಮ್ಯಾಚ್ ಫಿಟ್ನೆಸ್ ಸಾಬೀತು ಮಾಡಲಿದ್ದೇನೆ. ಸದ್ಯ ಟೀಮ್ ಇಂಡಿಯಾ ಕಮ್ ಬ್ಯಾಕ್ ಬಗ್ಗೆ ಚಿಂತೆ ಮಾಡುತ್ತಿಲ್ಲ. ಪಂದ್ಯವನ್ನು ಆನಂದಿಸಿ ಬರೋಡಾ ಪರ ಉತ್ತಮ ನಿರ್ವಹಣೆ ನೀಡುವುದು ನನ್ನ ಗುರಿಯಾಗಿದೆ" ಎಂದರು.

ನ್ಯೂಜಿಲೆಂಡ್ ವಿರುದ್ಧದ ಭಾರತ ಎ ಸರಣಿಯನ್ನು ಕಡೆಗಣಿಸಿ ರಣಜಿ ಟ್ರೋಫಿಯಲ್ಲಿ ಆಡಲು ಪಾಂಡ್ಯ ನಿರ್ಧರಿಸಿದ್ದರು. "ಯಾಕೆಂದರೆ ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಗುರಿಯಾಗಿತ್ತು. ಹಾಗೊಂದು ವೇಳೆ ತಾನು ಉತ್ತಮ ನಿರ್ವಹಣೆ ನೀಡಿದ್ದಲ್ಲಿ ಆಸೀಸ್ ವಿರುದ್ಧದ ಅಂತಿಮ ಎರಡು ಪಂದ್ಯಗಳಿಗೆ ಆಯ್ಕೆಯಾಗುವ ಸಾಧ್ಯತೆಯಿದೆ" ಎಂದು ವಿವರಿಸಿದರು.

"ದೇ ಹೊತ್ತಿಗೆ ತನ್ನ ಮೇಲೆ ಯಾವುದೇ ರೀತಿಯ ಕೆಲಸದೊತ್ತಡವಿಲ್ಲ. ತಂಡದ ಅಗತ್ಯಕ್ಕೆ ಅನುಸಾರವಾಗಿ ಎಷ್ಟೇ ಓವರ್ ಬೇಕಾದರೂ ದಾಳಿ ಮಾಡಲು ಸಿದ್ಧವಾಗಿದ್ದೇನೆ" ಎಂದರು.

ಇನ್ನೊಂದೆಡೆ ಇದೀಗಷ್ಟೇ ಕೆರಿಯರ್ ಆರಂಭಿಸಿರುವ ತಮ್ಮ ಸಹೋದರ ಕೃುಣಾಲ್ ಪಾಂಡ್ಯ ಕಾಲೆಳೆಯಲು ಪಾಂಡ್ಯ ಮರೆಯಲಿಲ್ಲ. ಮೊದಲ ಟಿ-20 ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ನಿಂದ ಸಾಕಷ್ಟು ದಂಡಿಸಲ್ಪಟ್ಟರೂ ಬಳಿಕ ಅದೇ ಆಟಗಾರನನ್ನು ಔಟ್ ಮಾಡುವುದು ನಿಜಕ್ಕೂ ಅವರ ಧೈರ್ಯವನ್ನು ತೋರಿಸುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌