ಆ್ಯಪ್ನಗರ

ಪಾಂಡ್ಯ ಚೊಚ್ಚಲ ಶತಕ; ಒಂದೇ ಓವರ್‌ನಲ್ಲಿ 26 ರನ್ ಚಚ್ಚಿದ ವೀರ!

ಶ್ರೀಲಂಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಸಾಧನೆ ಮಾಡಿದ್ದಾರೆ.

ವಿಕ ಸುದ್ದಿಲೋಕ 13 Aug 2017, 3:29 pm
ಪಲ್ಲೆಕಲೆ: ಶ್ರೀಲಂಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಸಾಧನೆ ಮಾಡಿದ್ದಾರೆ.
Vijaya Karnataka Web hardik pandya hits maiden test century
ಪಾಂಡ್ಯ ಚೊಚ್ಚಲ ಶತಕ; ಒಂದೇ ಓವರ್‌ನಲ್ಲಿ 26 ರನ್ ಚಚ್ಚಿದ ವೀರ!


ಇದು ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಂಡ್ಯ ಬಾರಿಸಿರುವ ಮೊದಲ ಶತಕವೂ ಹೌದು. ಹಾಗಾಗಿ ಪಾಂಡ್ಯ ಪಾಲಿಗಿದು ಅತ್ಯಂತ ಸ್ಮರಣೀಯವೆನಿಸಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಪಾದಾರ್ಪಣಾ ಪಂದ್ಯದಲ್ಲೇ ಅರ್ಧಶತಕ ಸಾಧನೆ ಮಾಡಿದ್ದ ಪಾಂಡ್ಯ ಇದೀಗ ಮೂರನೇ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ.

ಹಾರ್ದಿಕ್ ಶತಕ ಕೇವಲ 86 ಎಸೆತಗಳಲ್ಲಿ ದಾಖಲಾಗಿತ್ತು. ಈ ಪೈಕಿ ಲಂಕಾ ಸ್ಪಿನ್ನರ್ ಮಲಿಂಡ ಪುಶ್ಪಕುಮಾರ ಅವರ ಓವರ್‌ವೊಂದರಲ್ಲಿ 26 ರನ್ ಚಚ್ಚುವ ಮೂಲಕ ದಾಖಲೆ ಬರೆದಿದ್ದಾರೆ.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಓವರ್‌ವೊಂದರಲ್ಲಿ ದಾಖಲಿಸಿರುವ ಗರಿಷ್ಠ ರನ್ ಆಗಿದೆ. ಹಾರ್ದಿಕ್ ಅಬ್ಬರ ಹೀಗಿತ್ತು - 4,4,6,6,6,0

ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯುವ ಮೂಲಕ ಅತಿ ವೇಗದಲ್ಲಿ ಶತಕ ಬಾರಿಸಿರುವುದು ಹಾರ್ದಿಕ್ ಮಗದೊಂದು ಸಾಧನೆಯಾಗಿದೆ. ಅಂತಿಮವಾಗಿ 96 ಎಸೆತಗಳನ್ನು ಎದುರಿಸಿದ್ದ ಪಾಂಡ್ಯ 108 ರನ್ ಗಳಿಸಿದ್ದರು. ಇದರಲ್ಲಿ ಎಂಟು ಬೌಂಡರಿ ಹಾಗೂ ಏಳು ಅಮೋಘ ಸಿಕ್ಸರ್‌ಗಳು ಸೇರಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌