ಆ್ಯಪ್ನಗರ

ನಿಶ್ಚಿತಾರ್ಥದ ವಿಷಯ ಅಪ್ಪ-ಅಮ್ಮನಿಗೆ ಹೇಳಿರಲಿಲ್ಲವಂತೆ ಹಾರ್ದಿಕ್‌ ಪಾಂಡ್ಯ!

"ನತಾಶಾ ಸ್ಟ್ಯಾನ್‌ಕೊವಿಚ್‌ ಅವರೊಂದಿಗೆ ನಾನು ನಿಶ್ಚಿತಾರ್ಥ ಮಾಡಿಕೊಳ್ಳುವ ವಿಚಾರ ನನ್ನ ತಂದೆ ಹಾಗೂ ತಾಯಿಗೆ ಗೊತ್ತಿರಲಿಲ್ಲ. ಆದರೆ, ಎರಡು ದಿನ ಮುಂಚಿತವಾಗಿ ಸಹೋದರ ಕೃನಾಲ್‌ಗೆ ತಿಳಿಸಿದ್ದೆ," ಎಂದು ಹಾರ್ದಿಕ್‌ ಹೇಳಿಕೊಂಡಿದ್ದಾರೆ.

Vijaya Karnataka Web 4 Jun 2020, 4:34 pm

ಹೈಲೈಟ್ಸ್‌:

  • ನತಾಶಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ ಹಾರ್ದಿಕ್‌
  • ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆ ಅಪ್ಪ-ಅಮ್ಮನಿಗೂ ಹೇಳಿರಲಿಲ್ಲ
  • ಭಾನುವಾರ ತಂದೆಯಾಗುತ್ತಿರುವ ವಿಷಯ ಹೇಳಿದ್ದ ಆಲ್‌ರೌಂಡರ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Hardik pandya
ಹೊಸದಿಲ್ಲಿ: ಕನ್ನಡದ 'ದನಕಾಯೋನು' ಚಿತ್ರದಲ್ಲಿ ನಟಿಸಿದ್ದ ಸರ್ಬಿಯಾ ಮೂಲದ ನಟಿ ನತಾಶಾ ಸ್ಟ್ಯಾನ್‌ಕೊವಿಚ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟೀಮ್‌ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ ಮದುವೆಗೂ ಮೊದಲೇ ತಂದೆಯಾಗುತ್ತಿರುವ ಸುದ್ದಿ ಬಹಿರಂಗಪಡಿಸುವ ಮೂಲಕ ಇತ್ತೀಚೆಗೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.
ಕ್ರಿಕ್‌ಬಜ್‌ನ ಹರ್ಷ್‌ಬೋಗ್ಲೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್‌ ಆಟಗಾರ, ನತಾಶಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ವಿಷಯ ನನ್ನ ಪೋಷಕರಿಗೂ ತಿಳಿಸಿರಲಿಲ್ಲ ಎಂಬುದನ್ನು ರಿವೀಲ್‌ ಮಾಡಿದ್ದಾರೆ. "ನಾನು ನಿಶ್ಚಿತಾರ್ಥ ಮಾಡಿಕೊಳ್ಳುವ ವಿಚಾರ ನನ್ನ ತಂದೆ ಹಾಗೂ ತಾಯಿಗೆ ಗೊತ್ತಿರಲಿಲ್ಲ. ಆದರೆ, ಎರಡು ದಿನ ಮುಂಚಿತವಾಗಿ ಸಹೋದರ ಕೃನಾಲ್‌ಗೆ ತಿಳಿಸಿದ್ದೆ," ಎಂದು ಹಾರ್ದಿಕ್‌ ಹೇಳಿಕೊಂಡಿದ್ದಾರೆ.

"ನನಗೆ ಯಾರು ಸಿಕ್ಕಿದ್ದಾರೆ, ನಾನು ಯಾರನ್ನು ಪ್ರೀತಿಸಿದ್ದೆ ಎನ್ನುವುದಕ್ಕಿಂತ ನಾನು ಇನ್ನೂ ಜೀವನದಲ್ಲಿ ಕಲಿಯುತ್ತಿದ್ದೇನೆ. ನಾನು ಉತ್ತಮ ಮನುಷ್ಯನಾಗುತ್ತಿದ್ದೇನೆ ಎಂದು ಭಾವಿಸುತ್ತೇನೆ. ನಾನು ನನ್ನನ್ನು ಮೀರಿ ಹೋಗಲು ಪ್ರಯತ್ನಿಸುತ್ತಿದ್ದೇನೆ. ನನ್ನನ್ನು ಪಕ್ಕಕ್ಕೆ ಇಟ್ಟು, ನಾನು ಬೇರೊಬ್ಬರನ್ನು ಆದ್ಯತೆಯಾಗಿ ಇಟ್ಟುಕೊಂಡಿದ್ದೇನೆ," ಎಂದು ತಿಳಿಸಿದರು.

ಜಾತಿ ನಿಂದನೆ ಗೈದ ಯುವರಾಜ್‌ ಸಿಂಗ್‌ ವಿರುದ್ಧ ಪೊಲೀಸ್‌ ಕಂಪ್ಲೇಂಟ್!

ತಮ್ಮ ಪತ್ನಿಯ ಸಂಬಂಧದ ಬಗ್ಗೆ ಮಾತನಾಡಿದ ಹಾರ್ದಿಕ್‌, " ನತಾಶಾರನ್ನು ಮೊದಲ ಬಾರಿ ಭೇಟಿಯಾದಾಗ ಅವರಿಗೆ ನಾನು ಯಾರೆಂದು ಗೊತ್ತಿರಲಿಲ್ಲ. ಅವರ ಜತೆ ಮಾತನಾಡಿದ ಬಳಿಕ ನನ್ನ ಬಗ್ಗೆ ಅವರಿಗೆ ತಿಳಿಯಿತು.," ಎಂದು ಹೇಳಿದರು.

ಕಳೆದ ಭಾನುವಾರ 26ರ ಪ್ರಾಯದ ಆಟಗಾರ ತಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಆಗಮನ ಕುರಿತು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸರಣಿ ಫೋಟೊಗಳನ್ನು ಶೇರ್ ಮಾಡುವ ಮೂಲಕ ಪ್ರಕಟಿಸಿದ್ದರು. "ನತಾಶಾ ಹಾಗೂ ನಾನು ಅದ್ಭುತ ಜೀವನದ ಪಯಣವನ್ನು ಅನುಭವಿಸಿದ್ದೇವೆ ಹಾಗೂ ಮುಂದೆ ಇದು ಇನ್ನಷ್ಟು ಅತ್ಯುತ್ತಮವಾಗಿರಲಿದೆ," ಎಂದು ಫೋಟೊಗಳಿಗೆ ಹಾರ್ದಿಕ್‌ ಶೀರ್ಷಿಕೆ ನೀಡಿದ್ದರು.

ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಆಲೋಚಿಸಿದ್ದ ರಾಬಿನ್‌ ಉತ್ತಪ್ಪ!

"ನಾವು ಶೀಘ್ರದಲ್ಲೇ ನಮ್ಮ ಬದುಕಿನಲ್ಲಿ ಹೊಸ ಜೀವನವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ನಾವು ರೋಮಾಂಚನಗೊಂಡಿದ್ದೇವೆ ಮತ್ತು ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಬಯಸುತ್ತೇವೆ,"ಎಂದು ಅವರು ಹೇಳಿದ್ದರು.

ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ ಸ್ಟ್ಯಾನ್‌ಕೋವಿಚ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದ ಬಗ್ಗೆ ಜನವರಿ 1 ರಂದು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌