ಆ್ಯಪ್ನಗರ

ಜಡೇಜಾ ಘಟನೆ ಬಗ್ಗೆ ಕೊನೆಗೂ ಮನಬಿಚ್ಚಿದ ಪಾಂಡ್ಯ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ಮುಗ್ಗರಿಸಿದ ಟೀಮ್ ಇಂಡಿಯಾ ಭಾರಿ ಮುಖಭಂಗಕ್ಕೊಳಗಾಗಿತ್ತು.

ವಿಕ ಸುದ್ದಿಲೋಕ 8 Jul 2017, 11:02 pm
ಹೊಸದಿಲ್ಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ಮುಗ್ಗರಿಸಿದ ಟೀಮ್ ಇಂಡಿಯಾ ಭಾರಿ ಮುಖಭಂಗಕ್ಕೊಳಗಾಗಿತ್ತು.
Vijaya Karnataka Web hardik pandya reveals ravindra jadeja running him out in ct 2017 final against pakistan
ಜಡೇಜಾ ಘಟನೆ ಬಗ್ಗೆ ಕೊನೆಗೂ ಮನಬಿಚ್ಚಿದ ಪಾಂಡ್ಯ


338 ರನ್‌ಗಳ ಬೃಹತ್ ಗೆಲುವಿನ ಮೊತ್ತ ಬೆನ್ನತ್ತಿದ ಭಾರತಕ್ಕೆ ಹಾರ್ದಿಕ್ ಪಾಂಡ್ಯ ಹೊರತಾಗಿ ಇತರೆ ಯಾವ ಬ್ಯಾಟ್ಸ್‌ಮನ್ ಹೋರಾಟದ ಮನೋಬಲ ತೋರಿರಲಿಲ್ಲ.

ಆದರೆ ಪಂದ್ಯದ ವೇಳೆ ಅತ್ಯುತ್ತಮವಾಗಿ ಆಡುತ್ತಿದ್ದ ಪಾಂಡ್ಯ ಅವರನ್ನು ಹೊಂದಾಣಿಕೆ ಕೊರತೆಯಿಂದಾಗಿ ರವೀಂದ್ರ ಜಡೇಜಾ ರನೌಟ್ ಮಾಡಿದ್ದರು.

ಈ ಅನಿರೀಕ್ಷಿತ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಪಾಂಡ್ಯ ಮೈದಾನದಲ್ಲೇ ತಮ್ಮ ಕೋಪವನ್ನು ತೋರಿಸಿಕೊಂಡಿದ್ದರು.

ಈ ಸಂಬಂಧ ಮೊದಲ ಬಾರಿಗೆ ಹಾರ್ದಿಕ್ ಮನ ಬಿಚ್ಚಿ ಮಾತನಾಡಿದ್ದಾರೆ. ಅದನ್ನು ಮರೆತುಕೊಳ್ಳಲು ಕೆಲವು ನಿಮಿಷಗಳೇ ಬೇಕಾಯಿತು. ನನ್ನ ಪ್ರಕೋಪ ಸ್ಫೋಟಗೊಂಡಿದ್ದವು.

ನಾನು ಬೇಗನೆ ಹೈಪರ್ ಆಗುತ್ತೇನೆ. ಕೆಲವು ನಿಮಿಷಗಳ ನಂತರ ಡ್ರೆಸ್ಸಿಂಗ್ ರೂಂನಲ್ಲಿ ನಾನೇ ನಗುತ್ತಿದ್ದೆ. ನನ್ನನ್ನು ನೋಡಿದ ಸಹ ಆಟಗಾರರು ನಗುತ್ತಿದ್ದರು ಎಂದು ವಿವರಿಸಿದರು.


ಕೇವಲ 43 ಎಸೆತಗಳನ್ನು ಎದುರಿಸಿದ ಪಾಂಡ್ಯ 76 ರನ್ ಗಳಿಸಿ ಟೀಮ್ ಇಂಡಿಯಾಗೆ ಕೊನೆಯ ಆಸರೆಯಾಗಿದ್ದರು. ಆದರೆ ಪಾಂಡ್ಯ ರನೌಟ್ ಆಗುವುದರೊಂದಿಗೆ ಭಾರತದ ಆಸೆಯು ಕಮರಿತ್ತು. ಪರಿಣಾಮ 180 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು.

ಮಾತು ಮುಂದುವರಿಸಿದ ಪಾಂಡ್ಯ ಓರ್ವ ಪರಿಪೂರ್ಣ ಆಲ್‌ರೌಂಡರ್ ಎಂದು ಹೆಸರಿಸಿಕೊಳ್ಳಲು ಇಷ್ಟಪಡುವುದಾಗಿ ತಿಳಿಸಿದ್ದು, ಧೋನಿ ತರಹನೇ ಜವಾಬ್ದಾರಿ ವಹಿಸಿಕೊಂಡು ಫಿನಿಶಿಂಗ್ ಮಾಡುವುದು ತಮ್ಮ ಗುರಿಯಾಗಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌