ಆ್ಯಪ್ನಗರ

ರಾಹುಲ್‌ ದ್ರಾವಿಡ್‌ ಅವರನ್ನು ನೋಡಿ ಹಾರ್ದಿಕ್‌ ಪಾಂಡ್ಯ ಪಾಠ ಕಲಿಯಬೇಕು! (ವೀಡಿಯೋ ನೋಡಿ)

ನಿಷೇಧದ ಭೀತಿ ಎದುರಿಸುತ್ತಿರುವ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಮತ್ತು ಕೆಎಲ್‌ ರಾಹುಲ್‌ ಅವರಿಗೆ ಭಾರತ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಮತ್ತು ಸಜ್ಜನ ರಾಹುಲ್‌ ದ್ರಾವಿಡ್‌ ಅವರನ್ನು ನೋಡಿ ಕಲಿಯಬೇಕು ಎಂದು ನೆಟ್ಟಿಗರು ಮಂಗಳಾರತಿ ಮಾಡಿದ್ದಾರೆ! ಪ್ರೊಪೋಸ್‌ ಮಾಡಿದ 20ರ ಯುವತಿಗೆ ಶಿಕ್ಷಣದ ಕಡೆಗೆ ಗಮನ ಕೊಡು ಎಂದು ಬುದ್ಧಿ ಹೇಳಿದ್ದ ರಾಹುಲ್‌ ದ್ರಾವಿಡ್‌ ವೀಡಿಯೋ ಮತ್ತೆ ವೈರಲ್‌ ಆಗಿದೆ.

Vijaya Karnataka Web 12 Jan 2019, 11:06 am
ಬೆಂಗಳೂರು: ಮಹಿಳೆಯರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಅವರಿಗೆ ಭಾರತದ ಶ್ರೇಷ್ಠ ಆಟಗಾರ ರಾಹುಲ್‌ ದ್ರಾವಿಡ್‌ ಅವರನ್ನು ನೋಡಿ ಕಲಿಯಬೇಕು ಎಂದು ನೆಟ್ಟಿಗರು ಪಾಠ ಹೇಳಿದ್ದಾರೆ.
Vijaya Karnataka Web Rahul Dravid


ಕ್ರಿಕೆಟ್‌ನ ಮೇರು ಸಾಧನೆಯೊಂದಿಗೆ ಪ್ರಖ್ಯಾತಿಗೆ ಬಂದಿದ್ದ ರಾಹುಲ್‌ ದ್ರಾವಿಡ್‌ ಅವರನ್ನು ಎಂಟಿವಿ ಬಕ್ರಾ ಕಾರ್ಯಕ್ರಮದಲ್ಲಿ ಕುರಿ ಮಾಡಲು ಯತ್ನಿಸಿದ್ದ ವೀಡಿಯೋ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಸಂದರ್ಶಕಿಯ ಅಚಾನಕ್‌ ವರ್ತನೆಯಿಂದ ವಿಚಲಿತರಾದ ದ್ರಾವಿಡ್‌ ತನ್ನ ಶ್ರೇಷ್ಠತೆಯನ್ನು ಹೇಗೆ ಉಳಿಸಿಕೊಂಡಿದ್ದಾರೆ ಎಂಬುದನ್ನು ನೋಡಿ ಪಾಂಡ್ಯ ಮತ್ತು ಕೆಎಲ್‌ ರಾಹುಲ್‌ ಕಲಿಯಬೇಕು ಎಂದಿದ್ದಾರೆ.

ಕರ್ನಾಟಕದ ಹೆಮ್ಮೆ ರಾಹುಲ್‌ ದ್ರಾವಿಡ್‌ ಬಗ್ಗೆ ನಿಮಗೆ ಗೊತ್ತಿಲ್ಲದ ಆಸಕ್ತಿಕರ ಸಂಗತಿಗಳು!

ಸಂದರ್ಶನದ ನಂತರ, ಕ್ಯಾಮೆರಾ ಮ್ಯಾನ್‌ನನ್ನು ಹೊರಗೆ ಕಳುಹಿಸಿದ ಸಂದರ್ಶಕಿ, ರಾಹುಲ್‌ ದ್ರಾವಿಡ್‌ ಪಕ್ಕದಲ್ಲಿ ಬಂದು ಕುಳಿತು ಮದುವೆಯಾಗುತ್ತೀರಾ? ಎಂದು ಪ್ರಶ್ನಿಸಿದ್ದರು. ಇದರಿಂದ ವಿಚಲಿತರಾದ ರಾಹುಲ್‌ ದ್ರಾವಿಡ್‌ ಅಲ್ಲಿಂದ ಎದ್ದು ಹೋಗಲು ಪ್ರಯತ್ನಿಸಿದ್ದರು. ಯುವತಿಯ ತಂದೆಯು ಒಳಗೆ ಬಂದು ಕನ್ವಿನ್ಸ್‌ ಮಾಡಲು ಯತ್ನಿಸಿದಾಗ, ಮಗಳಿಗೆ ಶಿಕ್ಷಣದ ಬಗ್ಗೆ ಕಾನ್ಸೆನ್ಟ್ರೇಟ್‌ ಮಾಡುವಂತೆ ಬುದ್ಧಿ ಹೇಳಿದ್ದರು. ಕಾರ್ಯಕ್ರಮ ಕುರಿ ಮಾಡುವುದಾಗಿದ್ದರೂ ರಾಹುಲ್‌ ನಡೆಯನ್ನು ರಾಷ್ಟ್ರವೇ ಮೆಚ್ಚಿಕೊಂಡಿತ್ತು.


ಕಾಫಿ ವಿತ್‌ ಕರಣ್‌ ಟಾಕ್‌ ಶೋದಲ್ಲಿ ಹಾರ್ದಿಕ್‌ ಮತ್ತು ರಾಹುಲ್‌ ಪಾಲ್ಗೊಂಡಿದ್ದರು. ಈ ಸಂದರ್ಭ ಹಾರ್ದಿಕ್‌ ತಮ್ಮ ವರ್ಜಿನಿಟಿ ಕಳೆದುಕೊಂಡ ಕುರಿತಾಗಿ ಚರ್ಚಿಸಿದ್ದರು. ಹೆಚ್ಚು ಮಹಿಳೆಯರೊಂದಿಗೆ ಚಕ್ಕಂದ ಆಡಿದ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಜತೆಗೆ ತಮ್ಮ ಚೆಲ್ಲಾಟಗಳಿಗೆ ಕುಟುಂಬ ಸದಸ್ಯರ ಬೆಂಬಲವಿದ್ದು, ಹೆಚ್ಚು ಮಹಿಳೆಯರೊಂದಿಗಿನ ಸಂಪರ್ಕವನ್ನು ಪ್ರಶಂಸಿಸಿದ್ದಾರೆ ಎಂದೂ ಹೇಳಿಕೊಂಡಿದ್ದರು. ಕ್ಲಬ್‌ಗಳಲ್ಲಿ ಮಹಿಳೆಯರ ಜತೆಗೆ ಸಂಪರ್ಕ ಬೆಸೆಯುವುದು ಅವರವರ ಪ್ರತಿಭೆಗೆ ಬಿಟ್ಟಿದ್ದು ಎಂದು ತಾನೇನೋ ಸಾಧನೆ ಮಾಡಿದ್ದೇನೆ ಎಂಬಂತೆ ಹೇಳಿಕೊಂಡಿದ್ದರು. ಮಹಿಳೆಯ ಹಾವ ಭಾವ ಮತ್ತು ಆಕೆ ಹೇಗೆ ಡ್ಯಾನ್ಸ್‌ ಮಾಡುತ್ತಾಳೆ ಎಂದು ಗಮನಿಸಿ ಡೇಟಿಂಗ್‌ಗೆ ಆಯ್ಕೆ ಮಾಡಿಕೊಳ್ಳುವುದಾಗಿ ತಮ್ಮ ಸಣ್ಣತನವನ್ನು ಪ್ರದರ್ಶಿಸಿಕೊಂಡಿದ್ದರು.
ಕಾಫಿ ವಿತ್ ಕರಣ್‌ ಕಾರ್ಯಕ್ರಮದಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ಕೆಎಲ್‌ ರಾಹುಲ್ ಮಹಿಳೆಯರ ಬಗ್ಗೆ ಅವರ ದೃಷ್ಟಿಕೋನದ ಬಗ್ಗೆ ಏನೇನು ಹೇಳಿದರು? (ಸಂಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌