ಆ್ಯಪ್ನಗರ

ಮತ್ತೆ ಧೋನಿ ಬಗ್ಗೆ ಹರ್ಷ್ ಗೋಯೆಂಕಾ ಟ್ವೀಟ್ ಮಾಡಿದ್ದೇನು?

ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ನಿರ್ಣಾಯಕ ಕ್ವಾಲಿಫೈಯರ್ 1 ಪಂದ್ಯದಲ್ಲಿ ಪ್ರಬಲ ಮುಂಬೈ ಇಂಡಿಯನ್ಸ್ ತಂಡವನ್ನು 20 ರನ್ ಅಂತರದಲ್ಲಿ ಮಣಿಸಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವು ಫೈನಲ್‌ಗೆ ಪ್ರವೇಶಿಸಿದೆ.

ಏಜೆನ್ಸೀಸ್ 17 May 2017, 3:16 pm
ಮುಂಬೈ: ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ನಿರ್ಣಾಯಕ ಕ್ವಾಲಿಫೈಯರ್ 1 ಪಂದ್ಯದಲ್ಲಿ ಪ್ರಬಲ ಮುಂಬೈ ಇಂಡಿಯನ್ಸ್ ತಂಡವನ್ನು 20 ರನ್ ಅಂತರದಲ್ಲಿ ಮಣಿಸಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವು ಫೈನಲ್‌ಗೆ ಪ್ರವೇಶಿಸಿದೆ.
Vijaya Karnataka Web harsh goenka tweets again about ms dhoni
ಮತ್ತೆ ಧೋನಿ ಬಗ್ಗೆ ಹರ್ಷ್ ಗೋಯೆಂಕಾ ಟ್ವೀಟ್ ಮಾಡಿದ್ದೇನು?


ಈ ಪಂದ್ಯದಲ್ಲಿ ಮಹತ್ವದ ಇನ್ನಿಂಗ್ಸ್ ಕಟ್ಟಿರುವ ಮಹೇಂದ್ರ ಸಿಂಗ್ ಧೋನಿ ಕೇವಲ 26 ಎಸೆತಗಳಲ್ಲಿ ಐದು ಸಿಕ್ಸರ್‌ಗಳ ನೆರವಿನಿಂದ 40 ರನ್ ಬಾರಿಸಿ ಪುಣೆ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ನೆರವಾಗಿದ್ದರು.

ಐಪಿಎಲ್ 10 ಟೂರ್ನಿಯ ಪ್ರಾರಂಭಿಕ ಘಟ್ಟದಲ್ಲಿ ಧೋನಿ ಬಗ್ಗೆ ಟೀಕೆಗಳನ್ನು ಮಾಡಿದ್ದ ಆರ್‌ಪಿಎಸ್ ತಂಡದ ಮಾಲಕ ಸಂಜಯ್ ಗೋಯೆಂಕಾ ಸಹೋದರ ಹರ್ಷ್ ಗೋಯೆಂಕಾ ಕೊನೆಗೂ ಧೋನಿ ಅಮೋಘ ಬ್ಯಾಟಿಂಗ್‌ಗೆ ಮನಸೋತಿದ್ದಾರೆ.

Explosive batting by Dhoni, deceitful bowling by Sundar and great captaincy by Smith takes #RPS to the #IPL finals. pic.twitter.com/TFCZfC0YrH — Harsh Goenka (@hvgoenka) May 16, 2017 ಇದರಂತೆ ಧೋನಿ ಸ್ಫೋಟಕ ಬ್ಯಾಟಿಂಗ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಮೂಲಕ ವಿವಾದಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಸ್ಟೀವ್ ಸ್ಮಿತ್ ನಾಯಕತ್ವ ಹಾಗೂ ವಾಷಿಂಗ್ಟನ್ ಸುಂದರ್ ಬೌಲಿಂಗ್ ಪ್ರದರ್ಶನವನ್ನು ಗೋಯೆಂಕಾ ಪ್ರಂಶಸೆ ಮಾಡಿದ್ದಾರೆ.

ಈ ಹಿಂದೆ ಟೂರ್ನಿ ಆರಂಭಕ್ಕೂ ಮುನ್ನ ಧೋನಿ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಸ್ಮಿತ್ ಅವರಿಗೆ ಕಪ್ತಾನಗಿರಿ ನೀಡಲಾಗಿತ್ತು. ತದಾ ಬೆನ್ನಲ್ಲೇ ಗೋಯೆಂಕಾ ಅವರಿಂದ ಸತತವಾಗಿ ಧೋನಿ ಮೇಲೆ ಟೀಕೆಗಳು ಬಂದಿದ್ದವು. ಆದರೆ ಧೋನಿ ಅಭಿಮಾನಿ ಬಳಗದಿಂದ ತಕ್ಕ ಶಾಸ್ತಿಯೇ ಎದುರಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌