ಆ್ಯಪ್ನಗರ

ತಿಂಗಳಿಗೆ 10 ಲಕ್ಷ ರೂ. ಪರಿಹಾರ ಕೇಳಿದ ಶಮಿ ಪತ್ನಿ

ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪತ್ನಿ ಹಸೀನ್ ಜಾಹನ್, ಇದೀಗ ಮಾಸಿಕ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಕೇಳಿಕೊಂಡಿದ್ದಾರೆ.

TIMESOFINDIA.COM 11 Apr 2018, 5:09 pm
ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪತ್ನಿ ಹಸೀನ್ ಜಾಹನ್, ಇದೀಗ ಮಾಸಿಕ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಕೇಳಿಕೊಂಡಿದ್ದಾರೆ.
Vijaya Karnataka Web mohammed-shami-hasin-jahan-01


ಅಲಿಪೋರ್ ನ್ಯಾಯಾಲಯದಲ್ಲಿ ಕೇಸಿನ ವಿಚಾರಣೆ ಪ್ರಗತಿಯಲ್ಲಿದ್ದು, ತನಗೆ ಹಾಗೂ ಮಗುವಿಗಾಗಿ ತಿಂಗಳಲ್ಲಿ 10 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಪ್ರಸ್ತುತ ಪ್ರಕರಣದ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಲಾಗಿದೆ. ಪತಿ ಮೊಹಮ್ಮದ್ ಶಮಿ ಜತೆಗೆ ಆತನ ತಾಯಿ, ಹಿರಿಯ ಸದೋದರ, ಸಹೋದರಿ ಹಾಗೂ ನಾದಿನಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರನ್ನು ದಾಖಲಿಸಿಕೊಂಡಿದ್ದರು.

ವಾದ ಮಂಡಿಸಿರುವ ಜಹಾನ್ ವಕೀಲ, ಕ್ರಿಕೆಟಿಗ ಶಮಿ ವರ್ಷದಲ್ಲಿ 100 ಕೋಟಿ ರೂ.ಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದು, ಹಾಗಾಗಿ ಮಾಸಿಕ ಖರ್ಚಿಗಾಗಿ ಪತ್ನಿಗೆ ಏಳು ಲಕ್ಷ ರೂ. ಹಾಗೂ ಮಗಳಿಗೆ 3 ಲಕ್ಷ ರೂ. ನೀಡಲು ಕಷ್ಟಕರವಾಗದು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌