ಆ್ಯಪ್ನಗರ

'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಹೊಡೆದುರುಳಿಸಿದ ದಾಖಲೆಗಳು

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಶತಕ ಸಾಧನೆ ಮಾಡಿರುವ ರೋಹಿತ್ ಶರ್ಮಾ ಅನೇಕ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಈ ಸಂಬಂಧ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

Vijaya Karnataka Web 5 Oct 2019, 6:18 pm
ವಿಶಾಖಪಟ್ಟಣ: ಇಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಇನ್ನಿಂಗ್ಸ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಾಧನೆ ಮಾಡಿದ್ದಾರೆ.
Vijaya Karnataka Web rohit-sharma-century


ಇದರೊಂದಿಗೆ ಓಪನರ್ ಆದ ಮೊದಲನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ವಿಶ್ವದ ಏಕಮಾತ್ರ ಆಟಗಾರನೆಂಬ ದಾಖಲೆಗೆ ಪಾತ್ರವಾಗಿದ್ದಾರೆ.

ಭಾರತದ ಬಿಗು ಹಿಡಿತದಲ್ಲಿ ಮೊದಲ ಟೆಸ್ಟ್; ಸಂಪೂರ್ಣ ವರದಿ ಓದಿ

ರೋಹಿತ್ ಗಳಿಸಿದ ರನ್‌ಗಳೆಷ್ಟು?
ಮೊದಲ ಇನ್ನಿಂಗ್ಸ್: 176 (ಎಸೆತ 244, ಬೌಂಡರಿ 23, ಸಿಕ್ಸರ್ 6)
ದ್ವಿತೀಯ ಇನ್ನಿಂಗ್ಸ್: 127 (ಎಸೆತ 149, ಬೌಂಡರಿ 10, ಸಿಕ್ಸರ್ 7)
ಒಟ್ಟು ಗಳಿಸಿದ ರನ್: 303

ಪುಡಿಗಟ್ಟಿದ ದಾಖಲೆಗಳೇನು?

ಟೆಸ್ಟ್ ಓಪನರ್ ಆದ ಡೆಬ್ಯು ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲೂ ಶತಕ ಸಾಧನೆ:
ಈಗಗಾಲೇ ಉಲ್ಲೇಖಿಸಿರುವಂತೆಯೇ ಟೆಸ್ಟ್ ಪಂದ್ಯದಲ್ಲಿ ಓಪನರ್ ಆಗಿ ಡೆಬ್ಯು ಮಾಡಿದ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಾಧನೆ ಮಾಡಿದ ವಿಶ್ವದ ಏಕಮಾತ್ರ ಆಟಗಾರನೆಂಬ ದಾಖಲೆಗೆ ರೋಹಿತ್ ಶರ್ಮಾ ಭಾಜನವಾಗಿದ್ದಾರೆ.

ಹಜಾರೆ, ಗವಾಸ್ಕರ್ ಸಾಲಿಗೆ ಸೇರಿದ ರೋಹಿತ್:
ಟೆಸ್ಟ್ ಪಂದ್ಯವೊಂದರ ಎರಡು ಇನ್ನಿಂಗ್ಸ್‌ಗಳಲ್ಲಿ ಶತಕ ಸಾಧನೆ ಮಾಡಿರುವ (176 ಹಾಗೂ 127) ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಮಾಜಿ ದಿಗ್ಗಜರಾದ ವಿಜಯ್ ಹಜಾರೆ ಹಾಗೂ ಸುನಿಲ್ ಗವಾಸ್ಕರ್ ಸೇರಿದಂತೆ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದೇ ಸಾಧನೆಯನ್ನು ಸುನಿಲ್ ಗವಾಸ್ಕರ್ ಮೂರು ಬಾರಿ, ರಾಹುಲ್ ದ್ರಾವಿಡ್ ಎರಡು ಬಾರಿ ಮತ್ತು ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ವಿಜಯ್ ಹಜಾರೆ ತಲಾ ಒಂದು ಬಾರಿ ಮಾಡಿದ್ದಾರೆ.

ಮಾಜಿ ದಿಗ್ಗಜರಾದ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ ಎಲೈಟ್ ಪಟ್ಟಿಗೆ ಸೇರಿದ ರೋಹಿತ್

ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಾಧನೆ ಮಾಡಿದ ಭಾರತೀಯರು:
ವಿಜಯ್ ಹಜಾರೆ (116 & 145), ಆಸ್ಟ್ರೇಲಿಯಾ ವಿರುದ್ಧ, ಆಡಿಲೇಡ್, 1948
ಸುನಿಲ್ ಗವಾಸ್ಕರ್ (124 & 220), ವೆಸ್ಟ್‌ಇಂಡೀಸ್ ವಿರುದ್ಧ, ಪೋರ್ಟ್ ಆಫ್ ಸ್ಪೇನ್, 1971
ಸುನಿಲ್ ಗವಾಸ್ಕರ್ (111 & 137), ಪಾಕಿಸ್ತಾನ ವಿರುದ್ಧ, ಕರಾಚಿ, 1978
ಸುನಿಲ್ ಗವಾಸ್ಕರ್ (107 & 182*), ವೆಸ್ಟ್‌ಇಂಡೀಸ್ ವಿರುದ್ಧ,ಕೋಲ್ಕೊತಾ, 1978
ರಾಹುಲ್ ದ್ರಾವಿಡ್ (190 & 103*), ನ್ಯೂಜಿಲೆಂಡ್ ವಿರುದ್ಧ, ಹ್ಯಾಮಿಲ್ಟನ್, 1999
ರಾಹುಲ್ ದ್ರಾವಿಡ್ (110 & 135), ಪಾಕಿಸ್ತಾನ ವಿರುದ್ಧ, ಕೋಲ್ಕೊತಾ, 2005
ವಿರಾಟ್ ಕೊಹ್ಲಿ (115 & 141), ಆಸ್ಟ್ರೇಲಿಯಾ ವಿರುದ್ಧ, ಆಡಿಲೇಡ್, 2014
ಅಜಿಂಕ್ಯ ರಹಾನೆ, (127 & 100*), ದ.ಆಫ್ರಿಕಾ ವಿರುದ್ಧ, ಹೊಸದಿಲ್ಲಿ, 2015
ರೋಹಿತ್ ಶರ್ಮಾ (176 & 127), ದ.ಆಫ್ರಿಕಾ ವಿರುದ್ಧ, ವಿಶಾಖಪಟ್ಟಣ (2019)

ರಾಹುಲ್ ದ್ರಾವಿಡ್ ದಾಖಲೆ ಮುರಿದ ರೋಹಿತ್ ಶರ್ಮಾ:
ತವರು ನೆಲದಲ್ಲಿ ಸತತವಾಗಿ ಏಳು ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಸಾಧನೆ ಮಾಡುವ ಮೂಲಕ ಮಾಜಿ ನಾಯಕ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.

ಮಾಜಿ ದಿಗ್ಗಜ ರಾಹುಲ್ ದ್ರಾವಿಡ್ ದಾಖಲೆ ಮುರಿದ ರೋಹಿತ್ ಶರ್ಮಾ

ಭಾರತದಲ್ಲಿ ರೋಹಿತ್ ಶರ್ಮಾ ಕೊನೆಯ ಏಳು ಇನ್ನಿಂಗ್ಸ್‌ಗಳು:
82, 51*, 102*, 65, 50*, 176 & 127

ಭಾರತದಲ್ಲಿ ಸತತವಾಗಿ 50+ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು:

7 ರೋಹಿತ್ ಶರ್ಮಾ (ಸೆ. 2016ರಿಂದ ಈ ವರೆಗೆ)
6 ಎವರ್ಟನ್ ವೀಕ್ಸ್ (ನ. 1948ರಿಂದ - ಫೆ. 1949)
6 ರಾಹುಲ್ ದ್ರಾವಿಡ್ (ನ. 1997 - ಮಾ. 1998)
6 ಆ್ಯಂಡಿ ಫ್ಲವರ್ (ಮಾ. 1993 - ನ. 2000)

ಟೆಸ್ಟ್ ಆರಂಭಿಕನಾದ ಡೆಬ್ಯು ಪಂದ್ಯದಲ್ಲೇ ಅತಿ ಹೆಚ್ಚು ರನ್ ಗಳಿಕೆ:
ಹಾಗೆಯೇ ಓಪನರ್ ಆಗಿ ಡೆಬ್ಯು ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹಿರಿಮೆಗೂ ರೋಹಿತ್ ಶರ್ಮಾ ಪಾತ್ರವಾಗಿದ್ದಾರೆ. ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಾಧನೆ ಮಾಡಿರುವ ರೋಹಿತ್ ಒಟ್ಟಾರೆಯಾಗಿ 303 ರನ್‌ಗಳ ಸಾಧನೆ ಮಾಡಿದ್ದಾರೆ.

'ಪೂಜಿ ಭಾಗ್ BC..'; ಅವಾಚ್ಯ ಪದ ಬಳಕೆ ಮಾಡಿದ ರೋಹಿತ್ ಶರ್ಮಾ!

ಓಪನರ್ ಆಗಿ ಡೆಬ್ಯು ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಕೆ:
303 ರೋಹಿತ್ ಶರ್ಮಾ (176 & 127), ದ.ಆಫ್ರಿಕಾ ವಿರುದ್ಧ, ವೈಝಾಗ್, 2019/20
208 ಕೆ ವೆಸೆಲ್ಸ್, (162 & 46), ಇಂಗ್ಲೆಂಡ್ ವಿರುದ್ಧ, ಬ್ರಿಸ್ಬೇನ್, 1982/83
201 ಬಿ ಕುರುಪ್ಪು (201*), ನ್ಯೂಜಿಲೆಂಡ್ ವಿರುದ್ಧ, ಕೊಲಂಬೊ, 1986/87
200 ಎ ಜಾಕ್ಸನ್, (164 & 36), ಇಂಗ್ಲೆಂಡ್ ವಿರುದ್ಧ, ಆಡಿಲೇಡ್, 1928/29
200 ಜಿ ಗ್ರೀನಿಡ್ಜ್, (93 & 107), ಭಾರತ ವಿರುದ್ಧ, ಬೆಂಗಳೂರು, 1974/75

ಸಿಕ್ಸರ್ ಶರ್ಮಾ ರೋ'ಹಿಟ್'; 25 ವರ್ಷಗಳ ದಾಖಲೆ ಮುರಿದ ವೀರ:

ಭಾರತದ ಪರ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಗೆ ರೋಹಿತ್ ಶರ್ಮಾ ಭಾಜನವಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆರು, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಏಳು ಸಿಕ್ಸರ್ ಸೇರಿದಂತೆ ಒಟ್ಟು 13 ಸಿಕ್ಸರ್‌ಗಳನ್ನು ಸಿಡಸಿದ್ದರು.

ಈ ಮೂಲಕ 25 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. 1994ನೇ ಇಸವಿಯಲ್ಲಿ ಸಿಕ್ಸರ್ ಸಿಧು ಖ್ಯಾತಿಯ ನವಜೋತ್ ಸಿಂಗ್ ಸಿಧು ಎಂಟು ಸಿಕ್ಸರ್‌ಗಳನ್ನು ಬಾರಿಸಿರುವುದು ಇದುವರೆಗಿನ ದಾಖಲೆಯಾಗಿತ್ತು.

ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್:
ಇದರೊಂದಿಗೆ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಗೆ ಪಾತ್ರವಾಗಿದ್ದಾರೆ. ಈ ಹಿಂದೆ 1996ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ವಾಸೀಂ ಅಕ್ರಂ 12 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.

ಟೆಸ್ಟ್, ಏಕದಿನ, ಟಿ20ಗಳಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್:
ಟೆಸ್ಟ್: ರೋಹಿತ್ ಶರ್ಮಾ (13)
ಏಕದಿನ : ರೋಹಿತ್ ಶರ್ಮಾ (16)
ಟಿ20 : ರೋಹಿತ್ ಶರ್ಮಾ (10)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌