ಆ್ಯಪ್ನಗರ

ಕಾಶ್ಮೀರದಲ್ಲಿ ದೇಶ ಸೇವೆ ಸಲ್ಲಿಸಲಿರುವ ಲೆ. ಕರ್ನಲ್ ಧೋನಿ

ಸದ್ಯ ಕ್ರಿಕೆಟ್‌ನಿಂದ ಬಿಡುವಿನಲ್ಲಿರುವ ಭಾರತೀಯ ಸೇನೆಯ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಕಾಶ್ಮೀರ ಕಣಿವೆ ರಾಜ್ಯದಲ್ಲಿ ದೇಶ ಸೇವೆಯನ್ನು ಸಲ್ಲಿಸಲಿದ್ದಾರೆ.

TOI.in 25 Jul 2019, 2:34 pm
ಹೊಸದಿಲ್ಲಿ: ಸದ್ಯ ಕ್ರಿಕೆಟ್‌ನಿಂದ ಬಿಡುವಿನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.
Vijaya Karnataka Web ms-dhoni-indian-army


ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ಕಾಶ್ಮೀರ ಕಣಿವೆ ರಾಜ್ಯದಲ್ಲಿ ದೇಶದ ಸೇವೆ ಸಲ್ಲಿಸಲಿದ್ದಾರೆ.

ಟೆಸ್ಟ್‌ನಲ್ಲಿ ಧೋನಿ ನಂ.7 ಜೆರ್ಸಿ ಯಾರಿಗೆ?

106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ (ಪ್ಯಾರಾ) ವಿಭಾಗವು ಜುಲೈ 31ರಿಂದ ಆಗಸ್ಟ್ 2019ರ ವರೆಗೆ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲಿದೆ. ವಿಕ್ಟರ್ ಫೋರ್ಸ್ ಭಾಗವಾಗಿ ಪೆಟ್ರೋಲಿಂಗ್, ಗಾರ್ಡ್ ಇತ್ಯಾದಿ ಕರ್ತವ್ಯಗಳನ್ನು ಧೋನಿ ಕೂಡಾ ನಿರ್ವಹಿಸಲಿದ್ದಾರೆ.

2011ರಲ್ಲಿ ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿಯ ಪ್ಯಾರಾಚೂಟ್ ರೆಜಿಮೆಂಟ್‌ನಿಂದ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ಪಡೆದಿದ್ದರು.

ಇತ್ತೀಚೆಗಷ್ಟೇ ಸಾಗಿದ ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಸಲ್ಲಿಸುವ ಬಗ್ಗೆ ಮಾಹಿತಿಗಳು ಬಂದಿದ್ದವು. ಸದ್ಯ ಕ್ರಿಕೆಟ್‌ಗೆ ಬಿಡುವು ನೀಡಿರುವ ಧೋನಿ, ಸೇನೆಯಲ್ಲಿ ತರಬೇತಿ ಪಡೆಯುವುದರಲ್ಲಿ ತಲ್ಲೀನವಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌