ಆ್ಯಪ್ನಗರ

ವಿಲಿಯಮ್ಸನ್ 'ಸ್ಮಾರ್ಟ್' ಕ್ರಿಕೆಟಿಗ; ಕಿವೀಸ್ ನಾಯಕನ ಬೆನ್ನಿಗೆ ನಿಂತ ವಿರಾಟ್

ಅತೀವ ಒತ್ತಡದಲ್ಲಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೆನ್ನಿಗೆ ನಿಂತಿರುವ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ, ನಾಯಕತ್ವವನ್ನು ಯಾವಾಗಲೂ ಫಲಿತಾಂಶಗಳಿಂದ ನಿರ್ಧರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

Vijaya Karnataka Web 23 Jan 2020, 12:30 pm
ಆಕ್ಲೆಂಡ್: ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ನ್ಯೂಜಿಲೆಂಡ್ ಕಳಪೆ ಮಟ್ಟದ ಪ್ರದರ್ಶನವನ್ನು ನೀಡಿತ್ತು. ಇದರಿಂದಾಗಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅತೀವ ಒತ್ತಡಕ್ಕೊಳಗಾಗಿದ್ದರು. ಈ ಮಧ್ಯೆ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಬೆನ್ನಿಗೆ ನಿಂತಿರುವ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ, 'ಸ್ಮಾರ್ಟ್ ಕ್ರಿಕೆಟಿಗ' ಎಂದು ಹೊಗಳಿದ್ದಾರೆ.
Vijaya Karnataka Web ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್


'ತಂಡದ ನಾಯಕರಾಗಿ ಫಲಿತಾಂಶಗಳ ಬಗ್ಗೆ ಚಿಂತೆ ಮಾಡದೆ ತಂಡವನ್ನು ಮುಂದಕ್ಕೆ ಕೊಂಡೊಯ್ಯುುವುದರತ್ತ ಗಮನ ಹರಿಸಿದ್ದಾರೆ. ನಾಯಕತ್ವವನ್ನು ಯಾವಾಗಲೂ ಫಲಿತಾಂಶಗಳಿಂದ ನಿರ್ಧರಿಸಲಾಗುವುದಿಲ್ಲ' ಎಂದು ಕೊಹ್ಲಿ ಬೊಟ್ಟು ಮಾಡಿದರು.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ಸರಣಿಯ ಮೊದಲ ಪಂದ್ಯವು ಜನವರಿ 24 ಶುಕ್ರವಾರದಂದು ಆಕ್ಲೆಂಡ್‌ನಲ್ಲಿ ನಡೆಯಲಿದೆ. ಅತೀವ ಒತ್ತಡದಲ್ಲಿರುವ ಕಿವೀಸ್ ತಂಡವು ತವರು ನೆಲದಲ್ಲಿ ಭಾರತದ ವಿರುದ್ಧ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.

ವಿರಾಟ್ 'ವಿಸ್ಮಯ'; ಇನ್ನು ಅನೇಕ ದಾಖಲೆಗಳನ್ನು ಮುರಿಯಬಲ್ಲರು: ಸ್ಟೀವ್ ಸ್ಮಿತ್

''ನಾನು ಮಾಡಿದ ಒಂದು ವಿಷಯ ಏನೆಂದರೆ ತಂಡಕ್ಕಾಗಿ ಏನು ಮಾಡಬಹುದು ಮತ್ತು ತಂಡವನ್ನು ಮುಂದಕ್ಕೆ ಕೊಂಡೊಯ್ಯುವ ದೃಷ್ಟಿಯತ್ತ ಗಮನ ಹರಿಸುತ್ತೇನೆ'' ಎಂದು ಸ್ವತ: ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದ ಕಾರಣ ಟೀಕೆಗಳನ್ನು ಎದುರಿಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿವರಿಸಿದರು.

"ನಾಯಕತ್ವವನ್ನು ಯಾವಾಗಲೂ ಫಲಿತಾಂಶಗಳಿಂದ ನಿರ್ಧರಿಸಬಹುದು ಎಂದು ನಾನು ಭಾವಿಸುವುದಿಲ್ಲ. ನೀವು ತಂಡವನ್ನು ಹೇಗೆ ಒಟ್ಟುಗೂಡಿಸಬಹುದು ಮತ್ತು ನಿಮ್ಮ ಅಡಿಯಲ್ಲಿ ಹುಡುಗರನ್ನು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬುದರಲ್ಲೂ ಅಡಗಿರುತ್ತದೆ. ಕೇನ್ ವಿಲಿಯಮ್ಸನ್ ಅದ್ಭುತವಾಗಿ ತಂಡವನ್ನು ಮುನ್ನಡೆಸಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ನುಡಿದರು.

ಟಿ20 ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳ ವಿಶೇಷ ದಾಖಲೆಯ ಹೊಸ್ತಿಲಲ್ಲಿ ವಿರಾಟ್‌ ಕೊಹ್ಲಿ!

"ಕೇನ್ ವಿಲಿಯಮ್ಸನ್ ತಂಡದ ಸಹ ಸದಸ್ಯರ ಗೌರವ ಹಾಗೂ ನಂಬಿಕೆಯನ್ನು ಪಡೆದಿದ್ದಾರೆ. ನಾನಿದನ್ನು ನೋಡಬಲ್ಲೆ. ಕೇನ್ ವಿಲಿಯಮ್ಸನ್ ತುಂಬಾ ತುಂಬಾನೇ ಸ್ಮಾರ್ಟ್ ಕ್ರಿಕೆಟಿಗ" ಎಂದು ಹೊಗಲಿದರು.

"ಎದುರಾಳಿ ತಂಡವು ನಿಮಗಿಂತಲೂ ಉತ್ತಮ ಕ್ರಿಕೆಟ್ ಆಡಿದಾಗ ಸಮಗ್ರ ವೈಫಲ್ಯವನ್ನು ಒಪ್ಪಿಕೊಂಡು ಭವಿಷ್ಯದಲ್ಲಿ ಸುಧಾರಿಸಲು ಪ್ರಯತ್ನಿಸಬೇಕು. ಇದು ನಾಯಕತ್ವದ ವೈಫಲ್ಯವಲ್ಲ ಎಂಬುದು ನನ್ನ ಅನಿಸಿಕೆಯಾಗಿದೆ" ಎಂದು ವಿರಾಟ್ ಅಭಿಪ್ರಾಯಪಟ್ಟರು.

ಭಾರತ vs ನ್ಯೂಜಿಲೆಂಡ್: ನಿಮಗೆ ಗೊತ್ತಿರದ 6 ಸತ್ಯಗಳು!

ಜನರು ಬೇಗನೆ ನಿರ್ಧರಿಸುತ್ತಾರೆ. ಕೆಲವೊಮ್ಮೆ ವ್ಯಕ್ತಿಯು ತನ್ನನ್ನು ತಾನೇ ನಿರ್ಧರಿಸಲು ಅವಕಾಶ ನೀಡುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ನೀವು ಅವನಿಗೆ ಜವಾಬ್ದಾರಿ ನೀಡಿದರೆ, ಅದನ್ನು ನಿರ್ವಹಿಸಲು ಸಮರ್ಥರೇ ಅಲ್ಲವೇ ಎಂಬುದನ್ನ ನಿರ್ಧರಿಸುವ ಶಕ್ತಿ ಆತನಿಗಿದೆ ಎಂಬುದನ್ನು ಸೇರಿಸಿದರು.

ಕಿವೀಸ್ ನೆಲದಲ್ಲಿ ಕಳೆದ ಸಾಲಿನಲ್ಲಿ ಟಿ20 ಸರಣಿಯಲ್ಲಿ 2-1ರ ಅಂತರದ ಸೋಲು ಅನುಭವಿಸಿದರೂ ಏಕದಿನ ಸರಣಿಯನ್ನು ಭಾರತ 1-4ರ ಅಂತರದಲ್ಲಿ ವಶಪಡಿಸಿಕೊಂಡಿತ್ತು.

ಕಿವೀಸ್ ಪ್ರವಾಸದಲ್ಲಿ ಭಾರತಕ್ಕೆ ಎದುರಾಗಲಿರುವ 5 ಅಗ್ನಿ ಪರೀಕ್ಷೆಗಳು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌