ಆ್ಯಪ್ನಗರ

ಗಣಿತದಲ್ಲಿ 3 ಮಾರ್ಕ್ ಪಡೆದ ವಿರಾಟ್ ಕೊಹ್ಲಿ ಟಾಪ್ ಕ್ರಿಕೆಟರ್ ಹೇಗಾದ ಗೊತ್ತಾ?

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಶಾಲಾ ಜೀವನದ ದಿನಗಳನ್ನು ನೆನಪಿಸುತ್ತಾ, ಗಣಿತ ಕಲಿಕೆಯು ತಮ್ಮ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

Vijaya Karnataka Web 10 Sep 2019, 12:23 pm
ಹೊಸದಿಲ್ಲಿ: ಸಮಕಾಲೀನ ಕ್ರಿಕೆಟ್ ಜಗತ್ತಿನ ಮುಂಚೂಣಿಯ ಬ್ಯಾಟ್ಸ್‌ಮನ್ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಶಾಲಾ ಜೀವನದ ಕೆಲವೊಂದು ಕುತೂಹಲಕಾರಿ ವಿಚಾರಗಳನ್ನು ಬಹಿರಂಗಪಡಸಿದ್ದಾರೆ.
Vijaya Karnataka Web virat-kohli


ಗ್ರಾಹಾಂ ಬೆನ್‌ಸಿಂಗರ್ ನಡೆಸಿಕೊಟ್ಟ 'ಇನ್ ಡೆಪ್ತ್' ಸ್ಪೋರ್ಟ್ಸ್ ವೆಬ್ ಶೋನಲ್ಲಿ ವಿರಾಟ್ ಕೊಹ್ಲಿ, ತಾವು ಗಣಿತಶಾಸ್ತ್ರದಲ್ಲಿ ಹಿಂದುಳಿದ ವಿದ್ಯಾರ್ಥಿಯಾಗಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಚಿತ್ರವನ್ನು ಎಡಿಟ್ ಮಾಡಿದ ಅಭಿಮಾನಿ; ಮುಂದೇನಾಯ್ತು?

ತರಗತಿಯಲ್ಲಿ ಗಣಿತ ಪರೀಕ್ಷೆಗಳು ನಡೆಯುತ್ತಿದ್ದವು. ಲೆಕ್ಕದಲ್ಲಿ ಪಡೆಯಬಹುದಾದ ಗರಿಷ್ಠ ಅಂಕಗಳು 100 ಸರಿಯಲ್ಲವೇ? ಆದರೆ ನಾನು ಮೂರು ಅಂಕಗಳನ್ನು ಮಾತ್ರ ಪಡೆಯುತ್ತಿದ್ದೆ. ನಾನು ಅಷ್ಟೊಂದು ಉತ್ತಮನಾಗಿದ್ದೆ. ನನಗೆ ಅರ್ಥವಾಗುತ್ತಿಲ್ಲ. ಯಾರಾದರೂ ಗಣಿತವನ್ನು ಏಕೆ ಕಲಿಯಲು ಬಯಸುತ್ತಾರೆ? ಎಂದು ಜಿಜ್ಞಾಸೆಯಿಂದ ಪ್ರಶ್ನಿಸಿದರು.

ಲೆಕ್ಕದ ಹಿಂದಿರುವ ತೊಡಕುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಜೀವನದಲ್ಲಿ ಗಣಿತ ಸೂತ್ರಗಳನ್ನು ಎಂದಿಗೂ ಬಳಸಲಿಲ್ಲ ಎಂದರು.

ರಾಹುಲ್ ಫಾರ್ಮ್ ಕಳವಳಕಾರಿ; ಟೆಸ್ಟ್‌ನಲ್ಲೂ ರೋಹಿತ್‌ಗೆ ಓಪನರ್ ಸ್ಥಾನ ನೀಡಲಿರುವ ಆಯ್ಕೆ ಸಮಿತಿ?

ಮಾತು ಮುಂದುವರಿಸಿದ ವಿರಾಟ್ ಕೊಹ್ಲಿ, ಲೆಕ್ಕ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಲು ಕ್ರಿಕೆಟ್‌ಗಿಂತಲೂ ಹೆಚ್ಚು ಪರಿಶ್ರಮ ವಹಿಸಿರುವುದಾಗಿ ತಿಳಿಸಿದರು.

10ನೇ ತರಗತಿಯಲ್ಲಿ ತೇರ್ಗಡೆ ಹೊಂದಲು ಬಯಸಿದ್ದೆ. ಏಕೆಂದರೆ ಅವು ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದವು. ಅಲ್ಲಿಂದ ಬಳಿಕ ಗಣಿತದಲ್ಲಿ ಮುಂದುವರಿಸಲು ಬಯಸುತ್ತೀರೋ ಇಲ್ಲವೋ ಎಂಬುದನ್ನು ನಾವೇ ನಿರ್ಧರಿಸಬಹುದು. ನಾನು ನಿಮಗೆ ಹೇಳುತ್ತಿದ್ದೇನೆ, ಗಣಿತಯಲ್ಲಿ ಉತ್ತೀರ್ಣನಾಗಲು ನಾನು ವಹಿಸಿದ ಪರಿಶ್ರಮವನ್ನು ಕ್ರಿಕೆಟ್‌ನಲ್ಲೂ ಎಂದಿಗೂ ವಹಿಸಿಲ್ಲ ಎಂದು ವಿವರಿಸಿದರು.

ಶಾಲೆಯಲ್ಲಿ ನಾನು ಅತ್ಯಂತ ಬುದ್ಧಿವಂತ ಹುಡುಗ ಆಗಿರಲಿಲ್ಲ. ಆದರೂ ವಿಷಗಳನ್ನು ತ್ವರಿತವಾಗಿ ಗ್ರಹಿಸುವಷ್ಟು ಚಾಣಾಕ್ಷತೆಯನ್ನು ಹೊಂದಿದ್ದೆ ಎಂದು ಸೇರಿಸಿದರು.

ಅಂದ ಹಾಗೆ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ದ ತವರಿನಲ್ಲಿ ನಡೆಯಲಿರುವ ಟಿ20 ಹಾಗೂ ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌