ಆ್ಯಪ್ನಗರ

ಮತ್ತಷ್ಟು ವೇಗ ಹಾಗೂ ಪ್ರಬಲವಾಗಿ ತಿರುಗಿ ಬರುವೆ: ಪೃಥ್ವಿ ಶಾ

ಬಿಸಿಸಿಐ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಯುವ ಪ್ರತಿಭಾವಂತ ಕ್ರಿಕೆಟಿಗ ಪೃಥ್ವಿ ಶಾ, ಪ್ರಾಮಾಣಿಕವಾಗಿ ತಪ್ಪೊಪ್ಪಿಗೆ ನಡೆಸಿದ್ದು, ಮತ್ತಷ್ಟು ವೇಗ ಹಾಗೂ ಪ್ರಬಲವಾಗಿ ತಿರುಗಿ ಬರುವ ಭರವಸೆ ನೀಡಿದ್ದಾರೆ.

Vijaya Karnataka Web 31 Jul 2019, 3:00 pm
ಹೊಸದಿಲ್ಲಿ: ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಎಂಟು ತಿಂಗಳುಗಳ ನಿಷೇಧ ಶಿಕ್ಷೆಯನ್ನು ಎದುರಿಸಿರುವ ಉದಯೋನ್ಮುಖ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮತ್ತಷ್ಟು ವೇಗ ಹಾಗೂ ಪ್ರಬಲವಾಗಿ ತಿರುಗಿ ಬರುವ ಭರವಸೆ ನೀಡಿದ್ದಾರೆ.
Vijaya Karnataka Web prithvi-shaw-01


ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಾ, ಪ್ರಾಮಾಣಿಕವಾಗಿ ತಪ್ಪೊಪ್ಪಿಗೆ ನಡೆಸಿದ್ದಾರೆ. ತಮ್ಮ ತಿಳುವಳಿಕೆ ಇಲ್ಲದೆ ಅಶ್ರದ್ಧೆಯಿಂದ ಸಿರಪ್ ತೆಗೆದುಕೊಂಡಿದ್ದು ಬಿಸಿಸಿಐ ಉದ್ದೀಪನ ಮದ್ದು ನಿಯಮವನ್ನು ಉಲ್ಲಂಘಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕ್ರಿಕೆಟ್ ತನ್ನ ಜೀವನವಾಗಿದ್ದು, ದೇಶವನ್ನು ಪ್ರತಿನಿಧಿಸುವುದು ನನ್ನ ಧ್ಯೇಯವಾಗಿದೆ ಎಂದು ಉಲ್ಲೇಖಿಸಿರುವ ಪೃಥ್ವಿ ಶಾ, ಬಿಸಿಸಿಐ ಸೇರಿದಂತೆ ಎಲ್ಲರ ಬೆಂಬಲಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಪೃಥ್ವಿ ಶಾ ಮೇಲೆ 2019ರ ಮಾರ್ಚ್‌ 16ರಿಂದ ಆರಂಭಗೊಂಡು ನವೆಂಬರ್‌ 15ರವರೆಗೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿಷೇಧ ಹೇರಲಾಗಿದೆ.

ಫೆಬ್ರವರಿ 22ರಂದು ನಡೆದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯ ಟೂರ್ನಿಯ ವೇಳೆ ಪೃಥ್ವಿ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಅವರ ದೇಹದಲ್ಲಿ 'ಟಬ್ರ್ಯುಟಲೈನ್‌' ಎನ್ನುವ ನಿಷೇಧಿತ ವಸ್ತು ಪತ್ತೆಯಾಗಿತ್ತು. (ಈ ರಾಸಾಯನಿಕ ಕೆಮ್ಮಿನ ಚಿಕಿತ್ಸೆಗೆ ಕೊಡುವ ಸಿರಪ್‌ಗಳಲ್ಲಿ ಸಾಮಾನ್ಯವಾಗಿರುತ್ತದೆ). ಬಳಿಕ ಪೃಥ್ವಿ ಶಾ ಅವರನ್ನು ವಿಚಾರಣೆ ನಡೆಸಿ, ಸೂಕ್ತ ಸಮಜಾಯಿಷಿಗಳನ್ನು ಪಡೆದ ಬಿಸಿಸಿಐ ನಿಷೇಧ ಶಿಕ್ಷೆ ಪ್ರಕಟಿಸಿದೆ.

ಇದರಿಂದಾಗಿ ಪೃಥ್ವಿ, ತವರಿನಲ್ಲಿ ನಡೆಯುವ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಇವರ ಜತೆಗೆ ಅಕ್ಷಯ್‌ ದುಲ್ಲರ್‌ವಾರ್‌ ಹಾಗೂ ರಾಜಸ್ಥಾನದ ದಿವ್ಯ ಗಜರಾಜ್‌ಗೂ ನಿಷೇಧ ಹೇರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌