ಆ್ಯಪ್ನಗರ

ಕುಲ್ದೀಪ್‌ ಶ್ರೇಷ್ಠ ಸಾಧನೆ

ಚೈನಾಮನ್‌ ಶೈಲಿಯ ಪ್ರತಿಭಾನ್ವಿತ ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಪ್ರಕಟ ಮಾಡಿರುವ ನೂತನ ಟಿ20 ರಾ0ಕಿಂಗ್ಸ್‌ನ ಬೌಲರ್‌ಗಳ ಪಟ್ಟಿಯಲ್ಲಿ ಜೀವನ ಶ್ರೇಷ್ಠ ಸಾಧನೆಯಾಗಿ 2ನೇ ರಾ0ಕ್‌ ಪಡೆದಿದ್ದಾರೆ.

PTI 12 Feb 2019, 5:00 am
ಐಸಿಸಿ ಟಿ20 ರಾ0ಕಿಂಗ್ಸ್‌: 2ನೇ ಸ್ಥಾನದಲ್ಲಿ ಭಾರತ ಭದ್ರ| ಏಳನೇ ರಾ0ಕ್‌ ಪಡೆದ ರೋಹಿತ್‌
Vijaya Karnataka Web icc t20 rankings kuldeep yadav jumps to second spot india trail pakistan in team table
ಕುಲ್ದೀಪ್‌ ಶ್ರೇಷ್ಠ ಸಾಧನೆ

ದುಬೈ: ಚೈನಾಮನ್‌ ಶೈಲಿಯ ಪ್ರತಿಭಾನ್ವಿತ ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಪ್ರಕಟ ಮಾಡಿರುವ ನೂತನ ಟಿ20 ರಾ0ಕಿಂಗ್ಸ್‌ನ ಬೌಲರ್‌ಗಳ ಪಟ್ಟಿಯಲ್ಲಿ ಜೀವನ ಶ್ರೇಷ್ಠ ಸಾಧನೆಯಾಗಿ 2ನೇ ರಾರ‍ಯಂಕ್‌ ಪಡೆದಿದ್ದಾರೆ.

ಇನ್ನು ತಂಡಗಳ ರಾ0ಕಿಂಗ್‌ ಪಟ್ಟಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಸರಣಿಯನ್ನು 1-2 ಅಂತರದಲ್ಲಿ ಕೈಚೆಲ್ಲಿ 2 ಅಂಕಗಳನ್ನು ಕಳೆದುಕೊಂಡಿರುವ ಭಾರತ ತನ್ನ 2ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಟಿ20 ಕ್ರಿಕೆಟ್‌ನಲ್ಲಿ ನಂ.1 ತಂಡವಾಗಿ ಮುಂದುವರಿದಿದೆ.

ಕಿವೀಸ್‌ ವಿರುದ್ಧದ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದ ಕುಲ್ದೀಪ್‌ 26ಕ್ಕೆ 2 ವಿಕೆಟ್‌ ಪಡೆದು ಗಮನ ಸೆಳೆದಿದ್ದರು. ಆದರೆ ಪಂದ್ಯದಲ್ಲಿ 4 ರನ್‌ಗಳ ಅಂತರದಲ್ಲಿ ಸೋತ ಭಾರತ ತಂಡ ನ್ಯೂಜಿಲೆಂಡ್‌ ನೆಲದಲ್ಲಿ ಚೊಚ್ಚಲ ಐ-ಟಿ20 ಕ್ರಿಕೆಟ್‌ ಸರಣಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಅಲ್ಲದೆ ಕಳೆದ 30 ತಿಂಗಳ ಅವಧಿಯಲ್ಲಿ ಮೊದಲ ಬಾರಿ ಟಿ20 ಸರಣಿ ಗೆಲ್ಲುವಲ್ಲಿ ಭಾರತ ತಂಡ ವಿಫಲಗೊಂಡಿತು.

24 ವರ್ಷದ ರಿಸ್ಟ್‌ ಸ್ಪಿನ್ನರ್‌ ಕುಲ್ದೀಪ್‌, ಇದೀಗ ಟಿ20 ಬೌಲಿಂಗ್‌ ರಾ0ಕಿಂಗ್ಸ್‌ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಫಘಾನಿಸ್ತಾನದ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಉಳಿದಂತೆ ಅಗ್ರ 10ರ ರಾ0ಕಿಂಗ್‌ ಪಟ್ಟಿಯಲ್ಲಿ ಭಾರತದ ಬೇರಾವ ಬೌಲರ್‌ಗಳಿಲ್ಲ. ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌, ಕಿವೀಸ್‌ ವಿರುದ್ಧದ ಟಿ20 ಸರಣಿಯಲ್ಲಿ ಯಶಸ್ಸು ಗಳಿಸದ ಕಾರಣ ರಾ0ಕಿಂಗ್‌ನಲ್ಲಿ 6 ಸ್ಥಾನ ಕುಸಿದು 17ನೇ ಸ್ಥಾನ ಪಡೆದುಕೊಂಡಿದ್ದಾರೆ. ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ 18ನೇ ರಾ0ಕ್‌ನಲ್ಲಿ ಮುಂದುವರಿದಿದ್ದಾರೆ. ಕುಣಾಲ್‌ ಪಾಂಡ್ಯ 39 ಸ್ಥಾನ ಜಿಗಿದು 58ನೇ ರಾರ‍ಯಂಕ್‌ ಗಳಿಸಿದ್ದಾರೆ.

ಆಡದಿದ್ದರೂ ರಾಹುಲ್‌ಗೆ 10ನೇ ರಾ0ಕ್‌
ಕರ್ನಾಟಕದ ಸ್ಟಾರ್‌ ಬ್ಯಾಟ್ಸ್‌ಮನ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸದ್ಯ ಯಾವುದೇ ಪಂದ್ಯಗಳನ್ನು ಆಡದೇ ಇದ್ದರೂ ಈ ಹಿಂದಿನ ಸಾಧನೆಯ ಫಲವಾಗಿ ಅಗ್ರ 10ರ ರಾ0ಕಿಂಗ್‌ನಲ್ಲಿ ಉಳಿದಿದ್ದಾರೆ. ರಾಹುಲ್‌ 7ನೇ ರಾ0ಕ್‌ನಿಂದ 10ನೇ ರಾರ‍ಯಂಕ್‌ಗೆ ಜಾರಿದರೆ, ನ್ಯೂಜಿಲೆಂಡ್‌ ವಿರುದ್ಧದ ಐ-ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ರೋಹಿತ್‌ ಶರ್ಮಾ 10ರಿಂದ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಕಿವೀಸ್‌ ವಿರುದ್ಧದ ಸರಣಿ ವೇಳೆ ರೋಹಿತ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿದರು. ಅಲ್ಲದೆ ಐ-ಟಿ20 ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವದ 3ನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಟಿ20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಬಾಬರ್‌ ಅಝಾಮ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಶಿಖರ್‌ ಧವನ್‌ 1ನೇ ರಾ0ಕ್‌ನಲ್ಲಿದ್ದರೆ, ವಿಶ್ರಾಂತಿಯಲ್ಲಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ 4 ಸ್ಥಾನ ಕಳೆದುಕೊಂಡು 19ನೇ ರಾ0ಕ್‌ ಪಡೆದಿದ್ದಾರೆ.

ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಒಂದು ಸ್ಥಾನ ಮೇಲೇರಿ 12ನೇ ರಾ0ಕ್‌ ಪಡೆದರೆ, ಸರಣಿಶ್ರೇಷ್ಠ ಆಟಗಾರ ಟಿಮ್‌ ಸೀಫರ್ಟ್‌ 87 ಸ್ಥಾನಗಳ ಭಾರಿ ನೆಗೆತ ಕಂಡು 83ನೇ ರಾ0ಕ್‌ ಸಂಪಾದಿಸಿದ್ದಾರೆ.

ಟಾಪ್‌ 5 ಬೌಲರ್‌ಗಳು (ಐ-ಟಿ20)
ಆಟಗಾರ ರೇಟಿಂಗ್‌
1. ರಶೀದ್‌ ಖಾನ್‌ (ಅಫಘಾನಿಸ್ತಾನ) 793
2. ಕುಲ್ದೀಪ್‌ ಯಾದವ್‌ (ಭಾರತ) 728
3. ಶಹದಾಬ್‌ ಖಾನ್‌ (ಪಾಕಿಸ್ತಾನ) 720
4. ಇಮಾದ್‌ ವಾಸಿಮ್‌ (ಪಾಕಿಸ್ತಾನ) 705
5. ಆದಿಲ್‌ ರಶೀದ್‌ (ಪಾಕಿಸ್ತಾನ) 676

ಟಾಪ್‌ 6 ತಂಡಗಳು (ಐ-ಟಿ20)
ತಂಡ ರೇಟಿಂಗ್‌
1. ಪಾಕಿಸ್ತಾನ 135
2. ಭಾರತ 124
3. ದಕ್ಷಿಣ ಆಫ್ರಿಕಾ 118
4. ಇಂಗ್ಲೆಂಡ್‌ 118
5. ಆಸ್ಪ್ರೇಲಿಯಾ 115
6 ನ್ಯೂಜಿಲೆಂಡ್‌ 116

ಟಾಪ್‌ 7 ಬ್ಯಾಟ್ಸ್‌ಮನ್‌ಗಳು (ಐ-ಟಿ20)
ಆಟಗಾರ ರೇಟಿಂಗ್‌
1. ಬಾಬರ್‌ ಅಝಾಮ್‌ (ಪಾಕಿಸ್ತಾನ) 885
2. ಕಾಲಿನ್‌ ಮನ್ರೊ (ನ್ಯೂಜಿಲೆಂಡ್‌) 825
3. ಆ್ಯರೊನ್‌ ಫಿಂಚ್‌ (ಆಸ್ಪ್ರೇಲಿಯಾ) 806
4. ಎವಿನ್‌ ಲೂಯಿಸ್‌ (ವೆಸ್ಟ್‌ ಇಂಡೀಸ್‌) 751
5. ಗ್ಲೆನ್‌ ಮ್ಯಾಕ್ಸ್‌ವೆಲ್‌ (ಆಸ್ಪ್ರೇಲಿಯಾ) 745
6. ಫಖರ್‌ ಝಮಾನ್‌ (ಪಾಕಿಸ್ತಾನ) 700
7. ರೋಹಿತ್‌ ಶರ್ಮಾ (ಭಾರತ) 698

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕುಲ್ದೀಪ್‌ ಸಾಧನೆ
ಪಂದ್ಯ 18
ವಿಕೆಟ್‌ 35
ಶ್ರೇಷ್ಠ 24ಕ್ಕೆ 5
ಸರಾಸರಿ 12.97

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌