ಆ್ಯಪ್ನಗರ

ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ

ವಿಕ ಸುದ್ದಿಲೋಕ ಬೆಂಗಳೂರು ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್‌ ಭಾರತ ತಂಡ ...

Vi.Ka. Suddiloka 21 Jan 2018, 2:00 am

ಬೆಂಗಳೂರು: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್‌ ಭಾರತ ತಂಡ ಬಾಂಗ್ಲಾದೇಶದ ಸವಾಲು ಪಡೆದಿದೆ.

ಈ ಕ್ವಾರ್ಟರ್‌ ಫೈನಲ್‌ ಹಣಾಹಣಿ ಜ.26ರಂದು ಕ್ವೀನ್ಸ್‌ಟೌನ್‌ ಮೈದಾನದಲ್ಲಿ ನಡೆಯಲಿದೆ. ಪೃಥ್ವಿ ಶಾ ನಾಯಕತ್ವದ ಭಾರತ ತಂಡ ಲೀಗ್‌ ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದೆ. ಹೀಗಾಗಿ 'ಸಿ' ಗುಂಪಿನ ದ್ವಿತೀಯ ಸ್ಥಾನಿ ಬಾಂಗ್ಲಾದೇಶ ತಂಡ 8ರ ಘಟ್ಟದಲ್ಲಿ ಭಾರತಕ್ಕೆ ಎದುರಾಳಿಯಾಗಿದೆ. ಕಿರಿಯರ ವಿಶ್ವಕಪ್‌ನಲ್ಲಿ 5 ಬಾರಿ ಫೈನಲ್‌ ತಲುಪಿ 3 ಬಾರಿ ಚಾಂಪಿಯನ್‌ ಪಟ್ಟಕ್ಕೇರಿರುವ ಭಾರತ, ಈ ಬಾರಿಯೂ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಇನ್ನುಳಿದ ಕ್ವಾರ್ಟರ್‌ ಫೈನಲ್‌ಗಳಲ್ಲಿ ಆಸ್ಪ್ರೇಲಿಯಾ ತಂಡ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದ್ದರೆ, ಪಾಕಿಸ್ತಾನಕ್ಕೆ ದಕ್ಷಿಣ ಆಫ್ರಿಕಾ ಎದುರಾಳಿಯಾಗಿದೆ. ಆತಿಥೇಯ ನ್ಯೂಜಿಲೆಂಡ್‌ ತಂಡ ಅಪಾಯಕಾರಿ ಅಫಘಾನಿಸ್ತಾನ ವಿರುದ್ಧ ಸೆಣಸಲಿದೆ.

ಕ್ವಾರ್ಟರ್‌ ಫೈನಲ್ಸ್‌

ಆಸ್ಪ್ರೇಲಿಯಾ - ಇಂಗ್ಲೆಂಡ್‌ (ಜ.23)

ದಕ್ಷಿಣ ಆಫ್ರಿಕಾ - ಪಾಕಿಸ್ತಾನ (ಜ.24)

ನ್ಯೂಜಿಲೆಂಡ್‌ - ಅಫಘಾನಿಸ್ತಾನ (ಜ.25)

ಭಾರತ - ಬಾಂಗ್ಲಾದೇಶ (ಜ.26)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌