ಆ್ಯಪ್ನಗರ

ಫುಟ್ಬಾಲ್ ಆಟಗಾರರ ಫಿಟ್ನೆಸ್ ಹಾಗೂ ಶಿಸ್ತುಗಳಿಂದ ಪಾಠಗಳನ್ನು ಕಲಿಯಬೇಕು: ವಿರಾಟ್ ಕೊಹ್ಲಿ

ಫುಟ್ಬಾಲಿಗರ ಶಿಸ್ತು ಹಾಗೂ ಫಿಟ್ನೆಸ್‌ನಿಂದ ಕ್ರಿಕೆಟಿಗರು ಕಲಿತುಕೊಳ್ಳಬೇಕಾದ ಪಾಠಗಳ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿವರಿಸಿದ್ದಾರೆ. ಈ ಬಗ್ಗೆ ಎಕ್ಸ್‌ಕ್ಲೂಸಿವ್ ಸಂದರ್ಶನದ ವಿವರಗಳು ಇಲ್ಲಿದೆ.

Vijaya Karnataka Web 25 Sep 2019, 10:24 am
ಹೊಸದಿಲ್ಲಿ: ಹಾಗೊಂದು ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‌ನ್ನು ವೃತ್ತಿ ಜೀವನವಾಗಿ ಆರಿಸದೇ ಇರುತ್ತಿದ್ದರೆ ಫುಟ್ಬಾಲ್ ಅವರ ಪ್ರಮುಖ ಆಯ್ಕೆಯಾಗಿರುತ್ತಿತ್ತು. ಫುಟ್ಬಾಲ್‌ನ ಅದೇ ಮಾನದಂಡಗಳನ್ನು ಭಾರತ ತಂಡದಲ್ಲೂ ಆಳವಡಿಸಿಕೊಂಡಿರುವ ವಿರಾಟ್ ಕೊಹ್ಲಿ, ಫಿಟ್ನೆಸ್ ಮಟ್ಟವನ್ನು ಹೆಚ್ಚಿಸಿದ್ದಾರೆ.
Vijaya Karnataka Web virat-kohli-fc-goa


ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಎಫ್ ಗೋವಾ ತಂಡದ ಮಾಲಿಕರೂ ಆಗಿರುವ ವಿರಾಟ್ ಕೊಹ್ಲಿ ಕಾಲ್ಚೆಂಡಿನ ಆಟದ ಮೇಲಿನ ತಮ್ಮ ಪ್ರೀತಿಯನ್ನು ಸಾರಿದ್ದಾರೆ. ಈ ಬಗ್ಗೆ ವಿಜಯ ಕರ್ನಾಟಕ ಸೋದರ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಫುಟ್ಬಾಲ್ ಆಟಗಾರರ ರೀತಿಯಲ್ಲಿಯೇ ಫಿಟ್ನೆಸ್ ಮಟ್ಟವನ್ನು ಕಾಯ್ದುಕೊಳ್ಳುವುದರ ಬಗ್ಗೆ ಮಹತ್ವವನ್ನು ವಿವರಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಯುವರಾಜ್ ಸಿಂಗ್

ನಿವೃತ್ತಿಯ ಬಳಿಕ ಫುಟ್ಬಾಲ್‌ನಲ್ಲಿ ಹೆಚ್ಚು ಭಾಗಿಯಾಗುವೀರಾ?

ಇದನ್ನು ಈಗಿನಿಂದಲೇ ಮಾಡುತ್ತಿದ್ದು, ನನ್ನ ಸಹಾಯಾರ್ಥ ಸಂಸ್ಥೆಯು ಕ್ರೀಡಾಳುಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಎಫ್‌ಸಿ ಗೋವಾ ಭವಿಷ್ಯದ ಯೋಜನೆಗಳಲ್ಲಿ ಇದು ಒಂದಾಗಿದೆ. ಎಫ್‌ಸಿ ಗೋವಾ ಹಾಗೂ ರಾಷ್ಟ್ರೀಯ ತಂಡಕ್ಕಾಗಿ ಆಟಗಾರರನ್ನು ರೂಪಿಸಲು ಬಯಸುತ್ತಿದ್ದೇನೆ. ಇವೆಲ್ಲವೂ ನನ್ನ ಉತ್ಸಾಹಕ್ಕೆ ಕಾರಣವಾಗಿದೆ. ಈ ರೀತಿಯಾಗಿ ಪರಿಣಾಮ ಬೀರಲು ಬಯಸುತ್ತೇನೆ. ಕ್ರೀಡೆಗೆ ಉತ್ತೇಜನ ನೀಡುವುದು ನಿವೃತ್ತಿ ಬಳಿಕಕ ನನ್ನ ಮೊದಲ ಆಯ್ಕೆಯಾಗಿದೆ. ಫುಟ್ಬಾಲ್ ಕಡೆಯೂ ನನ್ನ ಗಮನವಿದ್ದರೂ ಒಟ್ಟಾರೆ ಕ್ರೀಡೆಯಲ್ಲಿ ಕೆಲ ಸ್ತರದಿಂದಲೂ ಕ್ರೀಡಾಳುಗಳಿಗೆ ನೆರವು ಮಾಡಲು ಇಚ್ಛಿಸುತ್ತೇನೆ ಎಂದರು.

ಕ್ರಿಕೆಟಿಗರು ಫುಟ್ಬಾಲ್‌ಗರಿಂದ ಕಲಿತುಕೊಳ್ಳಲು ಪಾಠಗಳೇನು?

ಫುಟ್ಬಾಲಿಗರು ಶಿಸ್ತಿಗಾಗಿ ಹೆಸರುವಾಸಿಯಾಗಿದ್ದಾರೆ. ಮೈದಾನದಲ್ಲಿ ತಮ್ಮ ಬೆಸ್ಟ್ ಪ್ರದರ್ಶನ ನೀಡಬೇಕಾಗಿರುವುದು ಅವಶ್ಯಕ. ವೃತ್ತಿಪರ ಫುಟ್ಬಾಲ್ ಆಟಗಾರರು ದೈಹಿಕ ಸಿದ್ದತೆ, ಪೋಷಣೆ ಹೀಗೆ ಹಲವು ವಿಚಾರಗಳಲ್ಲಿ ಬಹಳಷ್ಟು ಶಿಸ್ತು ಕಾಪಾಡಿಕೊಂಡಿರುತ್ತಾರೆ ಎಂದರು.

ಯುವರಾಜ್ ಸಿಂಗ್‌ ಗೌರವ ಸೂಚಕವಾಗಿ ಜೆರ್ಸಿ 'ನಂ 12' ನಿವೃತ್ತಿ ನೀಡಬೇಕೇ?

ಕ್ರಿಕೆಟಿಗರಿಗೆ ಫಿಟ್ನೆಸ್ ಬಗ್ಗೆ ನಿಮ್ಮದೇ ಆದ ಮಾನದಂಡವನ್ನು ರೂಪಿಸಿದ್ದೀರಿ. ಇದನ್ನು ಫುಟ್ಬಾಲಿಗರ ಜತೆಗೆ ಹೇಗೆ ಹೋಲಿಕೆ ಮಾಡುವಿರಿ?
ಹೋಲಿಸಲೇಬಾರದು. ಬೇಕಿದ್ದರೆ ವೇಗಿಗಳನ್ನು ಹೋಲಿಕೆ ಮಾಡಬಹುದು. ಗರಿಷ್ಠ ದೈಹಿಕ ಸಾಮರ್ಥ್ಯ ಹೊಂದಿರಬೇಕಾದ ಕ್ರೀಡೆ ಕ್ರಿಕೆಟ್ ಅಲ್ಲ. ಫುಟ್ಬಾಲ್ ಶಿಪ್ರವಾಗಿದ್ದು, 90 ನಿಮಿಷದೊಳಗೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಬಯಸುವೀರಿ. ಫುಟ್ಬಾಲ್‌ಗೆ ಹೋಲಿಸಿದರೆ ಕ್ರಿಕೆಟ್‌ಗೆ ಅಷ್ಟೊಂದು ಫಿಟ್ನೆಸ್ ಅಗತ್ಯವಿರುವುದಿಲ್ಲ. ಆದರೆ ನೀವು ಫುಟ್ಬಾಲ್ ಆಟಗಾರರಂತೆ ಫಿಟ್ ಆಗಲು ಪ್ರಯತ್ನಿಸಿದರೆ ಕ್ರಿಕೆಟ್‌ನಲ್ಲಿ ವಿಭಿನ್ನ ಹಂತವನ್ನು ತಲುಪಬಹುದು. ನಾವದನ್ನೇ ಮಾಡಲು ಬಯಸುತ್ತಿದ್ದೇವೆ. ಹೆಚ್ಚು ಫಿಟ್ನೆಸ್ ಮಟ್ಟವನ್ನು ಕಾಯ್ದುಕೊಂಡರೆ ಇನ್ನೊಂದು ಹಂತದ ಪ್ರದರ್ಶನವನ್ನು ನೀಡಬಹುದು. ಕ್ರಿಕೆಟಿಗರಿಗಿಂತಲೂ ಫುಟ್ಬಾಲಿಗರು ಹೆಚ್ಚು ಫಿಟ್ ಆಗಿರುತ್ತಾರೆ ಎಂದು ವಿವರಿಸಿದರು.

ಎಲ್ಲ ಪ್ರಕಾರದ ಕ್ರಿಕೆಟ್‌ನಿಂದಲೂ ಅವಕಾಶ ವಂಚಿತರಾದ ಕನ್ನಡಿಗ ಕೆಎಲ್ ರಾಹುಲ್

ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ದಿಗ್ಗಜ ರೊನಾಲ್ಡೊ ನಡುವೆ ಯಾರು ಬೆಸ್ಟ್?
ಕಠಿಣ ಪ್ರಶ್ನೆ. ಆದರೆ ನನ್ನ ಪ್ರಕಾರ ಕ್ರಿಸ್ಟಿಯಾನೋ ಪರಿಪೂರ್ಣ ಆಟಗಾರನಾಗಿದ್ದಾರೆ. ಎಡಗಾಲು, ಬಲಗಾಲು, ವೇಗ ಅಥವಾ ಡ್ರಿಬ್ಲಿಂಗ್ ಆಗಿರಬಹುದು ರೊನಾಲ್ಡೊ ಅದ್ಭುತ. ಅವರಂತಹ ಅತ್ಯುತ್ತಮ ಗೋಲ್ ಸ್ಕೋರರ್ ಅನ್ನು ಬೇರೆ ನೋಡಿಲ್ಲ. ಇನ್ನು ದಿಗ್ಗಜ ರೊನಾಲ್ಡೊ ವಿಚಾರಕ್ಕೆ ಬಂದಾಗ ಕ್ರೀಡೆಯನ್ನು ಕ್ರಾಂತಿಕಾರಿಗೊಳಿಸಿದರು. ಅಲ್ಲದೆ ಎಲ್ಲರೂ ಹಿಂಬಾಲಿಸುವಂತೆ ಮಾಡಿದರು ಎಂದರು.

ಲಿಯೋನೆಲ್ ಮೆಸ್ಸಿ ಕೂಡಾ ಅತ್ಯುತ್ತಮ ಆಟಗಾರ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಂತೆ ಕ್ರಿಸ್ಟಿಯಾನೋ ರೊನಾಲ್ಡೊ ಅವರಲ್ಲಿ ಪಂದ್ಯದ ಪ್ರತಿ ಕ್ಷಣದಲ್ಲೂ ಗೆಲುವಿನ ಹಂಬಲವಿರುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌