ಆ್ಯಪ್ನಗರ

ರಿಷಭ್‌ ಪಂತ್‌ ಬದಲಿಗೆ ಟೀಮ್‌ ಇಂಡಿಯಾ ಸೇರಿದ ಯುವ ವಿಕೆಟ್‌ಕೀಪರ್‌!

ರಿಷಭ್‌ ಪಂತ್‌ ತಲೆಗೆ ಪೆಟ್ಟು ತಿಂದು ವೈದ್ಯಕೀಯ ನೆರವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾಗೆ ಹೆಚ್ಚುವರಿ ವಿಕೆಟ್‌ಕೀಪರ್‌ ಆಗಿ ಆಂಧ್ರ ಪ್ರದೇಶದ ಯುವ ಪ್ರತಿಭೆಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿದೆ.

Vijaya Karnataka Web 17 Jan 2020, 1:17 pm
ರಾಜ್‌ಕೋಟ್‌: ವಾಂಖೆಡೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ತಲೆಗೆ ಬ್ಯಾಟಿಂಗ್‌ ವೇಳೆ ಚೆಂಡು ಬಡಿದ ಕಾರಣ ವೈದ್ಯಕೀಯ ತಪಾಸಣೆ ಸಲುವಾಗಿ ಅವರನ್ನು ಆಟದಿಂದ ಹೊರಗಿಡಲಾಗಿತ್ತು.
Vijaya Karnataka Web KS Bharat 2020


ಪರಿಣಾಮ ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಮೊದಲ ಪಂದ್ಯದಲ್ಲಿ ಭಾರತದ ಪರ ವಿಕೆಟ್‌ಕೀಪಿಂಗ್‌ ಜವಾಬ್ದಾರಿ ನಿಭಾಯಿಸಿದ್ದರು. ಅಂದಹಾಗೆ ಟೀಮ್‌ ಇಂಡಿಯಾದ ಹೆಚ್ಚುವರಿ ವಿಕೆಟ್‌ಕೀಪರ್‌ ಸಂಜು ಸ್ಯಾಮ್ಸನ್‌ ಭಾರತ 'ಎ' ತಂಡದೊಂದಿಗೆ ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಕಾರಣ ಹೊಸ ವಿಕೆಟ್‌ಕೀಪರ್‌ ಆಯ್ಕೆಗೆ ಬಿಸಿಸಿಐ ಕೊಂಚ ಸಮಯ ತೆಗೆದುಕೊಂಡಿದೆ.

ಇದೀಗ ಕೊನೆಗೂ ಬದಲಿ ವಿಕೆಟ್‌ಕೀಪರ್‌ನ ಹೆಸರಿಸಿರುವ ಬಿಸಿಸಿಐ ಆಯ್ಕೆ ಸಮಿತಿ, ಆಂಧ್ರ ಪ್ರದೇಶದ ಯುವ ಹಾಗೂ ಪ್ರತಿಭಾನ್ವಿತ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕೆಎಸ್‌ ಭರತ್‌ಗೆ ಬುಲಾವ್‌ ನೀಡಿದೆ. ಗಮನಾರ್ಹ ವಿಚಾರವೆಂದರೆ ಇಲ್ಲಿ ಅನುಭವಿ ವಿಕೆಟ್‌ಕೀಪರ್‌ ತಮಿಳುನಾಡು ತಂಡದ ದಿನೇಶ್‌ ಕಾರ್ತಿಕ್‌ ಅವರನ್ನು ಹೆಸರಿಸಲಾಗಿಲ್ಲ.

ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿಯಿಂದ ಧೋನಿಗೆ ಕೊಕ್‌!

ಮುಂಬೈ ಒಡಿಐನಲ್ಲಿ ಆಸ್ಟ್ರೇಲಿಯಾ ತಂಡ ಟೀಮ್‌ ಇಂಡಿಯಾಗೆ 10 ವಿಕೆಟ್‌ಗಳ ಸೋಲಿನ ಆಘಾತ ನೀಡಿತ್ತು. ಈ ಮಧ್ಯೆ ರಿಷಭ್‌ ಪಂತ್‌ 2ನೇ ಒಡಿಐಗೆ ಮಾತ್ರವೇ ಅಲಭ್ಯರಾಗಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಚೇತರಿಸುತ್ತಿದ್ದಾರೆ. 3ನೇ ಹಾಗೂ ಅಂತಿಮ ಒಡಿಐ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಈ ಪಂದ್ಯಕ್ಕೆ ಪಂತ್‌ ಲಭ್ಯವಾಗಲಿದ್ದಾರೆ.

ಟೀಮ್‌ ಇಂಡಿಯಾ ವಿರುದ್ಧದ 5 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ

"ಪಂತ್‌ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಎನ್‌ಸಿಎದಲ್ಲಿ ಅವರು ಪುನರ್‌ವಸತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ," ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆದರೆ, ರಾಜ್‌ಕೋಟ್‌ ಪಂದ್ಯದಲ್ಲೂ ಕೆಎಲ್‌ ರಾಹುಲ್‌ ವಿಕೆಟ್‌ಕೀಪಿಂಗ್‌ ಜವಾಬ್ದಾರಿ ನಿಭಾಯಿಸಲಿದ್ದು, ಪಂತ್‌ ಸ್ಥಾನದಲ್ಲಿ ಕನ್ನಡಿಗ ಮನೀಶ್‌ ಪಾಂಡೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌