ಆ್ಯಪ್ನಗರ

ವಾಂಖೆಡೆ ಮೈದಾನದಲ್ಲಿ ಪ್ರತಿಧ್ವನಿಸಿದ ಸಿಎಎ-ಎನ್‌‌ಆರ್‌ಸಿ ಪ್ರತಿಭಟನೆಯ ಕಾವು

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯದ ನಡುವೆ ಒಂದು ಗುಂಪಿನ ಅಭಿಮಾನಿಗಳು, ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಘೋಷಣೆಯನ್ನು ಕೂಗುವ ಮೂಲಕ ಗಮನ ಸೆಳೆದಿದ್ದಾರೆ.

Vijaya Karnataka Web 15 Jan 2020, 11:36 am
ಮುಂಬಯಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮುಂಬಯಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯಕ್ಕೂ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರತಿಭಟನೆಯ ಕಾವು ತಟ್ಟಿದೆ.
Vijaya Karnataka Web ಪೌರತ್ವ ತಿದ್ದುಪಡಿ ಕಾಯಿದೆ


ಗ್ಯಾಲರಿಯಲ್ಲಿದ್ದ ಒಂದು ಗುಂಪಿನ ಅಭಿಮಾನಿಗಳು ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಘೋಷಣೆ ಕೂಗಿದರು. ವಿಶೇಷ ಜೆರ್ಸಿಯೊಂದಿಗೆ ಬಂದ ಅಭಿಮಾನಿಗಳು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದರು.

'ನೊ ಸಿಎಎ', 'ನೊ ಎನ್‌ಪಿಆರ್' ಮತ್ತು 'ನೊ ಎನ್‌ಆರ್‌ಸಿ' ಆಂಗ್ಲ ಭಾಷೆಯಲ್ಲಿ ಮುದ್ರಿತ ಶ್ವೇತ ವರ್ಣದ ಟೀ ಶರ್ಟ್‌ ಧರಿಸಿದ್ಧ ಅಭಿಮಾನಿಗಳು ಭಾರತದ ಇನ್ನಿಂಗ್ಸ್ ಆದ ಕೂಡಲೇ ಮೈದಾನವನ್ನು ಬಿಟ್ಟು ತೆರಳಿದರು.

2020ರ ಮೊದಲ ಬಲವಾದ ಹೊಡೆತ; 15 ವರ್ಷದಲ್ಲೇ ಹೀನಾಯ ಸೋಲಿಗಿರುವ 5 ಪ್ರಮುಖ ಕಾರಣಗಳು

ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ದೇಶದ್ಯಾಂತ ಪ್ರತಿಭಟನೆಯ ಕಾವು ಜೋರಾಗುತ್ತಿದೆ. ಮುಂಬಯಿನಲ್ಲೂ ವಿವಿಧ ಸಂಘ ಸಂಸ್ಥೆಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಬಲ್ಲ ಮೂಲಗಳ ಪ್ರಕಾರ 26ರಷ್ಟು ಮಂದಿ ಗುಂಪಿನಲ್ಲಿ ಕಾಣಿಸಿದ್ದರು.

ಸಿಎಎ ಪ್ರತಿಭಟನೆಯ ಭೀತಿ ಹಿನ್ನೆಲೆಯಲ್ಲಿ ಕಪ್ಪು ಬಣ್ಣದ ಉಡುಪು ಧರಿಸಿದವರಿಗೆ ಮೈದಾನದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇಂತಹ ವಾರ್ತೆಯನ್ನು ಮುಂಬಯಿ ಕ್ರಿಕೆಟ್ ಸಂಸ್ಥೆ (ಎಂಸಿಎ) ನಿರಾಕರಿಸಿದೆ. ಯಾವುದೇ ಬಣ್ಣಕ್ಕೆ ತೊಂದರೆ ಇರಲಿಲ್ಲ. ಆದರೆ ಸ್ಥಳೀಯ ಪೊಲೀಸ್ ಸೂಚನೆಯ ಮರೆಗೆ ಕ್ರೀಡಾಂಗಣದೊಳಗೆ ಯಾವುದೇ ಪೋಸ್ಟರ್‌ಗಳನ್ನು ಅನುಮತಿ ನೀಡಿರಲಿಲ್ಲ ಎಂದು ವಿವರಣೆ ನೀಡಿದೆ.

18ನೇ ಒಡಿಐ ಶತಕದೊಂದಿಗೆ ಕೊಹ್ಲಿ ಜೊತೆಗಿನ ಎಲೈಟ್‌ ಪಟ್ಟಿ ಸೇರಿದ ಡೇವಿಡ್‌ ವಾರ್ನರ್‌

ಏತನ್ಮಧ್ಯೆ ಆಸ್ಟ್ರೇಲಿಯಾ ವಿರುದ್ಧ ಕಳೆದ 15 ವರ್ಷದಲ್ಲೇ ಭಾರತ ಅತಿ ಹೀನಾಯ ಸೋಲಿಗೆ ಗುರಿಯಾಗಿದೆ. ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಶತಕದ ನೆರವಿನಿಂದ ಆಸೀಸ್ 10 ವಿಕೆಟ್ ಅಂತರದ ನೋಲಾಸ್ ಗೆಲುವು ಬಾರಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌