ಆ್ಯಪ್ನಗರ

ಬಾಂಗ್ಲಾ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿಶೇಷ ಹ್ಯಾಟ್ರಿಕ್‌ ಸಾಧನೆ!

ಟೀಮ್‌ ಇಂಡಿಯಾದ ವೇಗದ ಬೌಲರ್‌ಗಳು ವಿಶ್ವ ಶ್ರೇಷ್ಠ ಎಂದು ನಾಯಕ ವಿರಾಟ್‌ ಕೊಹ್ಲಿ ಗುಣಗಾನ ಮಾಡಿದ್ದ ಮರುದಿನವೇ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಅನಾವರಣ ಪಡಿಸಿದ ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ ಮತ್ತು ಉಮೇಶ್‌ ಯಾದವ್‌ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಎದುರಾಳಿಯನ್ನು 150ಕ್ಕೆ ಆಲ್‌ಔಟ್‌ ಮಾಡಿದ್ದಾರೆ.

Vijaya Karnataka Web 14 Nov 2019, 4:15 pm
ಇಂದೋರ್‌: ಟೀಮ್‌ ಇಂಡಿಯಾದ ವೇಗದ ಬೌಲರ್‌ಗಳು ವಿಶ್ವ ಶ್ರೇಷ್ಠ ಎಂದು ನಾಯಕ ವಿರಾಟ್‌ ಕೊಹ್ಲಿ ಗುಣಗಾನ ಮಾಡಿದ್ದ ಮರುದಿನವೇ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಅನಾವರಣ ಪಡಿಸಿದ ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ ಮತ್ತು ಉಮೇಶ್‌ ಯಾದವ್‌ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಎದುರಾಳಿಯನ್ನು 150ಕ್ಕೆ ಆಲ್‌ಔಟ್‌ ಮಾಡಿದ್ದಾರೆ.
Vijaya Karnataka Web Mohammed Shami team india hat trick wicket 2019


ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಗುರುವಾರ (ನ.14ರಂದು) ಆರಂಭವಾದ 2 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಆದರೆ, ಬಾಂಗ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಭಾರತ ತಂಡದ ವೇಗಿಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು.

ತವರಿನಲ್ಲಿ 250 ಟೆಸ್ಟ್‌ ವಿಕೆಟ್‌, ಕುಂಬ್ಳೆ, ಹರ್ಭಜನ್‌ ಸಾಲಿಗೆ ಸೇರಿದ ರವಿಚಂದ್ರನ್‌ ಅಶ್ವಿನ್‌

ಪ್ರಮುಖವಾಗಿ ಅನುಭವಿ ವೇಗಿಗಳಾದ ಇಶಾಂತ್‌ ಶರ್ಮಾ ಮತ್ತು ಮೊಹಮ್ಮದ್‌ ಶಮಿ ಜೊತೆಗೂಡಿ ಟೀಮ್‌ ಹ್ಯಾಟ್ರಿಕ್‌ ವಿಕೆಟ್‌ ಸಾಧನೆಯನ್ನೂ ಮಾಡಿದರು. ಚಹಾ ವಿರಾಮಕ್ಕೂ ಹಿಂದಿನ ಓವರ್‌ನ ಕೊನೆ ಎರಡು ಎಸೆತಗಳಲ್ಲಿ ಮೊಹಮ್ಮದ್‌ ಶಮಿ ಮುಷ್ಫಿಕರ್‌ ರಹೀಮ್‌ (43) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿ ಮತ್ತು ಮೆಹ್ದಿ ಹಸನ್‌ ಮಿಜಾಝ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ್ದರು.

ಭಾರತ vs ಬಾಂಗ್ಲಾದೇಶ ಪ್ರಥಮ ಟೆಸ್ಟ್‌ ಸ್ಕೋರ್‌ ಕಾರ್ಡ್‌

ಬಳಿಕ ವಿರಾಮದ ನಂತರ ಇಶಾಂತ್‌ ಶರ್ಮಾ ತಮ್ಮ ಮೊದಲ ಎಸೆತದಲ್ಲೇ ಲಿಟನ್‌ ದಾಸ್‌ (21) ಅವರ ವಿಕೆಟ್‌ ಪಡೆದರು. ಫುಲ್‌ ಲೆನ್ತ್‌ ಎಸೆತವು ಲಿಟನ್‌ ದಾಸ್‌ ಅವರ ಬ್ಯಾಟ್‌ನ ಅಂಚಿಗೆ ತಾಗಿ ಮೊದಲ ಸ್ಲಿಪ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಕೈ ಸೇರಿತ್ತು. ಇದರೊಂದಿಗೆ ಟೀಮ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಂಭ್ರಮ ಭಾರತದ ಪಾಲಾಯಿತು.

ಹ್ಯಾಟ್ರಿಕ್‌ ವಿಕೆಟ್‌ಗಳ ವಿಶ್ವ ದಾಖಲೆ
ಅಂದಹಾಗೆ ಟೀಮ್‌ ಇಂಡಿಯಾ ಈ ವರ್ಷ ಹ್ಯಾಟ್ರಿಕ್‌ ವಿಕೆಟ್‌ಗಳ ಪೈಕಿ ಅಪರೂಪದ ವಿಶ್ವ ದಾಖಲೆಯೊಂದನ್ನೂ ಬರೆದಿದೆ. ಟೆಸ್ಟ್‌, ಏಕದಿನ ಮತ್ತು ಟಿ20-ಐ ಮೂರೂ ಮಾದರಿಯಲ್ಲಿ ಭಾರತೀಯ ಬೌಲರ್‌ಗಳು ಈ ಬಾರಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಮೊದಲಿಗೆ ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ಪಡೆದರೆ, ಬಳಿಕ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅಫಘಾನಿಸ್ಥಾನ ವಿರುದ್ಧ ಮೊಹಮ್ಮದ್‌ ಶಮಿ ಸತತ 3 ವಿಕೆಟ್‌ ಕಿತ್ತಿದ್ದರು.

ಇನ್ನು ಕಳೆದ ಭಾನುವಾರಷ್ಟೇ ಅಂತ್ಯಗೊಂಡ ಬಾಂಗ್ಲಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ ಕೊನೆಯ ಪಂದ್ಯದಲ್ಲಿ ದೀಪಕ್‌ ಚಹರ್‌ ಹ್ಯಾಟ್ರಿಕ್‌ ಸಹಿತ 6 ವಿಕೆಟ್‌ ಕಿತ್ತು ವಿಶದ್ವ ದಾಖಲೆ ಬರೆದಿದ್ದರು. ಇದರೊಂದಿಗೆ ಟೀಮ್‌ ಇಂಡಿಯಾ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಒಂದೇ ವರ್ಷದದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆಮಾಡಿದ ಮೊತ್ತ ಮೊದಲ ತಂಡವಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌