ಆ್ಯಪ್ನಗರ

ಪದಾರ್ಪಣೆ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆದ ಮಯಾಂಕ್ ಅಗರ್ವಾಲ್, ಪೃಥ್ವಿ ಶಾ

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಭಾರತದ ಮಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ ವಿಶಿಷ್ಟ ದಾಖಲೆ ಬರೆದಿದ್ದಾರೆ. ಒಂದೇ ಪಂದ್ಯದಲ್ಲಿ ಡೆಬ್ಯು ಮಾಡುತ್ತಿರುವ ಭಾರತದ ನಾಲ್ಕನೇ ಆರಂಭಿಕ ಜೋಡಿ ಎಂಬ ದಾಖಲೆಗೆ ಭಾಜನವಾದರು.

Vijaya Karnataka Web 5 Feb 2020, 7:43 am
ಹ್ಯಾಮಿಲ್ಟನ್: ಭಾರತದ ಯುವ ಭರವಸೆಯ ಬ್ಯಾಟ್ಸ್‌ಮನ್‌ಗಳಾದ ಕರ್ನಾಟಕದ ಮಯಾಂಕ್ ಅಗರ್ವಾಲ್ ಮತ್ತು ಮುಂಬಯಿಯ ಪೃಥ್ವಿ ಶಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ದ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮಯಾಂಕ್ ಹಾಗೂ ಪೃಥ್ವಿಗೆ ಡೆಬ್ಯು ಭಾಗ್ಯ ದೊರಕಿದೆ.
Vijaya Karnataka Web ಮಯಾಂಕ್ ಅಗರ್ವಾಲ್, ಪೃಥ್ವಿ ಶಾ


ಈ ಮೂಲಕ ಮಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ ವಿಶಿಷ್ಟ ದಾಖಲೆ ಬರೆದಿದ್ದಾರೆ. ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಇವರಿಬ್ಬರು ಇದೀಗ ಏಕದಿನದಲ್ಲೂ ತಮ್ಮ ಛಾಪು ಮೂಡಿಸುವ ಇರಾದೆಯಲ್ಲಿದೆ.

ಇದು ನಾಲ್ಕನೇ ಬಾರಿಗೆ ಭಾರತೀಯ ಆರಂಭಿಕ ಬ್ಯಾಟ್ಸ್ಮನ್‌ಗಳು ಒಂದೇ ಪಂದ್ಯದಲ್ಲಿ ಡೆಬ್ಯು ಮಾಡುತ್ತಿದ್ದಾರೆ. ಈ ಹಿಂದೆ 2016ರಲ್ಲಿ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ ಮತ್ತು ಕರುಣ್‌ ನಾಯರ್‌ ಆರಂಭಿಕರಾಗಿ ಪದಾರ್ಪಣೆ ಮಾಡಿದ್ದರು. ಅದಕ್ಕೂ ಮೊದಲು, 1976ರಲ್ಲಿ ಪಾರ್ಥಸಾರಥಿ ಶರ್ಮ ಮತ್ತು ದಿಲಿಪ್‌ ವೆಂಗ್‌ಸರ್ಕರ್‌ ನ್ಯೂಜಿಲೆಂಡ್‌ ವಿರುದ್ದ ಹಾಗೂ 1974ರಲ್ಲಿ ಸುನಿಲ್‌ ಗವಾಸ್ಕರ್‌ ಮತ್ತು ಸುಧೀರ್‌ ನಾಯಕ್‌ ಇಂಗ್ಲೆಂಡ್‌ ವಿರುದ್ಧ ಭಾರತ ತಂಡದ ಪರ ಆರಂಭಿಕರಾಗಿ ಪದಾರ್ಪಣೆಗೈದಿದ್ದರು.

ಭಾರತ vs ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ ಲೈವ್ ಅಪ್‌ಡೇಟ್ಸ್

ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಮಯಾಂಕ್ ಹಾಗೂ ಪೃಥ್ವಿಗೆ ಅವಕಾಶ ಹುಡುಕಿಕೊಂಡು ಬಂದಿತ್ತು. ಕಿವೀಸ್ ಸರಣಿಗೂ ಮುನ್ನವೇ ಗಾಯಾಳು ಶಿಖರ್ ಧವನ್ ಅಲಭ್ಯರಾದ ಹಿನ್ನೆಲೆಯಲ್ಲಿ ಪೃಥ್ವಿ ಶಾ ಅವಕಾಶ ಪಡೆದಿದ್ದರು. ಇನ್ನೊಂದೆಡೆ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಗಾಯಗೊಂಡ ಪರಿಣಾಮ ಮಯಾಂಕ್ ಅವಕಾಶ ಗಿಟ್ಟಿಸಿದ್ದಾರೆ. ಇದರೊಂದಿಗೆ ಕರ್ನಾಟಕದ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಇನ್ನೊಂದೆಡೆ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವಕಾಶ ವಂಚಿತವಾಗಿದ್ದಾರೆ.

ಅಂದ ಹಾಗೆ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಶತಕ ಸಾಧನೆ ಮಾಡಿದ್ದರು. ಇನ್ನೊಂದೆಡೆ ಡೆಬ್ಯು ಟೆಸ್ಟ್‌ನಲ್ಲಿ ಫಿಫ್ಟಿ ಸಾಧನೆ ಮಾಡಿರುವ ಮಯಾಂಕ್ ಅಗರ್ವಾಲ್, ಕಳೆದೊಂದು ಸಾಲಿನಲ್ಲಿ ಅತಿ ದೀರ್ಘವಾದ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಭಾಜನವಾಗಿದ್ದರು.

ಪಾಕಿಸ್ತಾನವನ್ನು ಬಗ್ಗುಬಡಿದ ಬಳಿಕ ಭಾರತ ಯುವ ಪಡೆಯ ನಾಯಕ ಗಾರ್ಗ್ ಹೇಳಿದ್ದಿದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌