ಆ್ಯಪ್ನಗರ

ಆರಂಭಿಕನಾಗಿಯೂ ಕಣಕ್ಕಿಳಿಯಲು ರೆಡಿ: ಗಿಲ್‌ಗೆ ದೊರಕುವುದೇ ಟೆಸ್ಟ್ ಡೆಬ್ಯು ಭಾಗ್ಯ!

ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಡೆಬ್ಯು ಮಾಡಲು ಉದಯೋನ್ಮುಖ ಶುಭಮನ್ ಗಿಲ್ ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಯಾವುದೇ ಸವಾಲನ್ನು ಎದುರಿಸಲು ತಾವು ಸಿದ್ಧ ಎಂದು ಗಿಲ್ ನುಡಿದಿದ್ದಾರೆ.

Vijaya Karnataka Web 13 Feb 2020, 2:52 pm
ಹ್ಯಾಮಿಲ್ಟನ್: ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.
Vijaya Karnataka Web ಶುಭಮನ್ ಗಿಲ್


ಗಾಯಾಳು ರೋಹಿತ್ ಶರ್ಮಾ ಟೂರ್ನಿಗೆ ಅಲಭ್ಯವಾಗಿರುವದರಿಂದ ಗಿಲ್ ಡೆಬ್ಯು ಮಾಡುವ ಸಾಧ್ಯತೆ ಹೆಚ್ಚಿದೆ. ಇನ್ನೊಂದೆಡೆ ಉದಯೋನ್ಮುಖ ಪೃಥ್ವಿ ಶಾ ಅವರಿಂದಲೂ ಪೈಪೋಟಿ ಎದುರಾಗಿದೆ. ಇವರಿಬ್ಬರು 2018ರಲ್ಲಿ ಅಂಡರ್ 19 ವಿಶ್ವಕಪ್ ವಿಜೇತ ಭಾರತ ಕಿರಿಯರ ತಂಡದ ಸದಸ್ಯರಾಗಿದ್ದರು.

ಈ ನಡುವೆ ಹೇಳಿಕೆ ನೀಡಿರುವ ಶುಭಮನ್ ಗಿಲ್, ತಾವು ಕಿವೀಸ್ ಸರಣಿಯಲ್ಲಿ ಸವಾಲುಗಳನ್ನು ಎದುರಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡಕ್ಕೆ ಪವರ್‌ಫುಲ್‌ ಪ್ಲೇಯರ್‌: ಹರ್ಭಜನ್‌ ಸಿಂಗ್

ಭಾರತ 'ಎ' ತಂಡದ ನ್ಯೂಜಿಲೆಂಡ್ ಪ್ರವಾಸದಲ್ಲೂ ಗಿಲ್, ದ್ವಿಶತಕ ಸೇರಿದಂತೆ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇದು ಟೆಸ್ಟ್ ಸರಣಿಯಲ್ಲಿ ನೆರವಿಗೆ ಬರುವ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಐದು ಪಂದ್ಯಗಳ ಅನದಿಕೃತ ಸರಣಿಯಲ್ಲಿ 204 ರನ್ ಸೇರಿದಂತೆ ಒಟ್ಟು 527 ರನ್ ಕಲೆ ಹಾಕಿದ್ದರು.

ನ್ಯೂಜಿಲೆಂಡ್ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಗಿಲ್, "ನನಗನಿಸುತ್ತದೆ ಇಲ್ಲಿ ಬೀಸುವ ಗಾಳಿಯು ಪ್ರಮುಖ ಘಟಕವೆನಿಸುತ್ತದೆ. ಇದಕ್ಕಣುಗುಣವಾಗಿ ಬೌಲರ್‌ ಹಾಗೂ ಫೀಲ್ಡರ್‌ಗಳು ಯೋಜನೆ ರೂಪಿಸುತ್ತಾರೆ. ಕಿವೀಸ್‌ಗೆ ಹೋಲಿಸಿದಾಗ ಇಂಗ್ಲೆಂಡ್‌ನಲ್ಲಿ ಚೆಂಡು ಹೆಚ್ಚು ಸ್ವಿಂಗ್ ಪಡೆಯುತ್ತದೆ. ವೇಗಿಗಳನ್ನು ಎದುರಿಸುವಾಗ ಇಂಗ್ಲೆಂಡ್‌ನಲ್ಲಿ ಆಡುವುದು ಹೆಚ್ಚು ಸವಾಲಿನಿಂದ ಕೂಡಿರುತ್ತದೆ" ಎಂದರು.

"ಆರಂಭಿಕನಾಗಿ ಕಣಕ್ಕಿಳಿದಾಗ ಹೊಸ ಚೆಂಡನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಹೊಸ ಚೆಂಡನ್ನು ಎದುರಿಸುವುದು ಸವಾಲೇ ಸರಿ. ನನ್ನ ರಾಜ್ಯ ತಂಡದ ಪರವೂ ಆರಂಭಿಕನಾಗಿ ಆಡಿದ್ದೇನೆ. ಹಾಗಾಗಿ ನನಗೆ ನೆರವಾಗಿದೆ. ಹಾಗೊಂದು ವೇಳೆ ಇನ್ನಿಂಗ್ಸ್ ಆರಂಭಿಸಲು ಹೇಳಿದರೆ ನನ್ನ ಪಾಲಿಗೆ ಹೊಸ ವಿಚಾರವೇನಲ್ಲ" ಎಂದರು.

ರಾಹುಲ್-ನೀಶಮ್ ನಡುವೆ ಜಪಾಪಟಿ ನಡೆಯಿತೇ? ಐಸಿಸಿ ಮಧ್ಯೆ ಪ್ರವೇಶ ಮಾಡಿದ್ದೇಕೆ?

"ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಆಗಲೇ ಎರಡು ವಿಕೆಟ್ ಬಿದ್ದಿರುತ್ತದೆ. ಹಾಗಾಗಿ ಸಂಪೂರ್ಣ ವಿಭಿನ್ನ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಆದರೆ ಆರಂಭಿಕನಾಗಿ ಇಡೀ ತಂಡದ ಪಾಲಿಗೆ ಭದ್ರ ಬುನಾದಿ ಹಾಕಬೇಕು. ಬಳಿಕ ಬರುವ ಬ್ಯಾಟ್ಸ್‌ಮನ್‌ಗಳಿಗೆ ಪರಿಸ್ಥಿತಿಯನ್ನು ಸುಗಮಗೊಳಿಸಬೇಕು" ಎಂದು ನುಡಿದರು.

"ಕ್ರಿಸ್ಟ್‌ಚರ್ಚ್‌ನಲ್ಲಿ ಆಡಿದಾಗ ವಿಕೆಟ್ ಬ್ಯಾಟಿಂಗ್ ಮಾಡಲು ತುಂಬಾನೇ ಉತ್ತಮವಾಗಿತ್ತು. ಬೌನ್ಸ್ ನಾವು ಎದುರಿಸಿದ ಏಕೈಕ ಸವಾಲಾಗಿತ್ತು. ಗಾಳಿಯ ವಿಚಾರವನ್ನು ಗಮನಿಸಿದಾಗ ನಿರಂತರವಾಗಿ ಬೌನ್ಸ್ ದಾಳಿಯನ್ನು ಎದುರಿಸುವುದು ಸುಲಭದ ವಿಚಾರವಲ್ಲ" ಎಂದು ಸೇರಿಸಿದರು.

ಲಾರೆಸ್ ಪ್ರಶಸ್ತಿಗಿನ್ನು 3 ದಿನ ಬಾಕಿ; ಈ ಕೂಡಲೇ ಸಚಿನ್‌ಗೆ ಮತ ಚಲಾಯಿಸಿರಿ

2018ರ ಅಂಡರ್ 19 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರೂ ಆಗಿರುವ ಶುಭಮನ್ ಗಿಲ್, ತಮ್ಮ ಫಿಟ್ನೆಸ್ ಮಟ್ಟವನ್ನು ವರ್ಧಿಸುವಲ್ಲಿ ಹೆಚ್ಚಿನ ಪರಿಶ್ರಮ ವಹಿಸಿರುವುದಾಗಿ ತಿಳಿಸಿದರು. ಅಲ್ಲದೆ ಓರ್ವ ಕ್ರಿಕೆಟಿಗನಾಗಿ ಹೆಚ್ಚಿನ ಆತ್ಮವಿಶ್ವಾಸವನ್ನು ಗಳಿಸಿರುವುದಾಗಿ ತಿಳಿಸಿದರು. ಹಾಗೆಯೇ ಕಳೆದೆರಡು ವರ್ಷಗಳಲ್ಲಿ ಅನೇಕ ಅಂಶಗಳನ್ನು ಕಲಿತಿದ್ದೇನೆ ಎಂದರು.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಫೆಬ್ರವರಿ 21ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌