Please enable javascript.Shardul Thakur,'ಅಲ್ಲಲ್ಲಿ ಪಿಚ್‌ ಬಿರುಕು ಬಿಟ್ಟಿತ್ತು' 7 ವಿಕೆಟ್‌ ಪಡೆದಿದ್ದೇಗೆಂದು ವಿವರಿಸಿದ ಶಾರ್ದುಲ್‌! - ind vs sa 2nd test: all i did was to try to hit that spot and hit that crack’ shardul thakur reveals strategy after record-breaking performance at wanderers - Vijay Karnataka

'ಅಲ್ಲಲ್ಲಿ ಪಿಚ್‌ ಬಿರುಕು ಬಿಟ್ಟಿತ್ತು' 7 ವಿಕೆಟ್‌ ಪಡೆದಿದ್ದೇಗೆಂದು ವಿವರಿಸಿದ ಶಾರ್ದುಲ್‌!

Vijaya Karnataka Web 5 Jan 2022, 12:57 pm
Subscribe

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಸಾಧನೆ ಮಾಡಿದ ಮಧ್ಯಮ ಕ್ರಮಾಂಕದ ವೇಗಿ ಶಾರ್ದುಲ್‌ ಠಾಕೂರ್‌ ಎರಡನೇ ದಿನದಾಟದ ಬಳಿಕ ತಮ್ಮ ತಂತ್ರವನ್ನು ಬಹಿರಂಗಪಡಿಸಿದ್ದಾರೆ.

ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ.
  • ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ ಕಿತ್ತ ಶಾರ್ದುಲ್‌.
  • ಶಾರ್ದುಲ್‌ ಬೌಲಿಂಗ್ ಸಹಾಯದಿಂದ ಎರಡನೇ ದಿನ ಮೇಲುಗೈ ಸಾಧಿಸಿರುವ ಭಾರತ.
shardul
ಶಾರ್ದುಲ್ ಠಾಕೂರ್‌ (ಚಿತ್ರ: ಬಿಸಿಸಿಐ ಟ್ವಿಟರ್)
ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಶಾರ್ದುಲ್‌ ಠಾಕೂರ್‌(61ಕ್ಕೆ 7) ತಮ್ಮ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರಿದ್ದಾರೆ. ಆ ಮೂಲಕ ಎದುರಾಳಿ ತಂಡ 229 ರನ್‌ಗಳಿಗೆ ಆಲ್‌ಔಟ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮಂಗಳವಾರ ಬೆಳಗ್ಗೆ ಇಲ್ಲಿನ ದಿ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 35 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಬ್ಯಾಟಿಂಗ್‌ಗೆ ಇಳಿದ ಡೀನ್‌ ಎಲ್ಗರ್‌ ಹಾಗೂ ಕೀಗನ್‌ ಪೀಟರ್ಸನ್‌ ಜೋಡಿ 74 ರನ್‌ಗಳ ಜೊತೆಯಾಟವಾಡಿತ್ತು. ಆ ಮೂಲಕ ಆತಿಥೇಯರಿಗೆ ಭರ್ಜರಿ ಆರಂಭ ತಂದುಕೊಟ್ಟಿದ್ದರು.

ಒಂದು ಹಂತದಲ್ಲಿ ಈ ಜೋಡಿಯನ್ನು ಬೇರ್ಪಡಿಸಲು ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ ಹಾಗೂ ಮೊಹಮ್ಮದ್‌ ಸಿರಾಜ್‌ ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಈ ವೇಳೆ ಚೆಂಡು ಕೈಗೆತ್ತಿಕೊಂಡ ಶಾರ್ದುಲ್‌ ಠಾಕೂರ್‌, ಡೀನ್‌ ಎಲ್ಗರ್‌(28), ಕೀಗನ್‌ ಪೀಟರ್ಸನ್‌(62) ಹಾಗೂ ರಾಸಿ ವ್ಯಾನ್‌ ಡೆರ್‌ ಡುಸೆನ್‌(1) ಅವರ ವಿಕೆಟ್‌ಗಳನ್ನು ಉರುಳಿಸುವಲ್ಲಿ ಸಫಲರಾದರು. ಆ ಮೂಲಕ ಭಾರತದ ಕಮ್‌ಬ್ಯಾಕ್ ನೆರವಾದರು.

ಭಾರತ Vs ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್‌ ಸ್ಕೋರ್‌ಕಾರ್ಡ್

ನಂತರ ಅದೇ ಬೌಲಿಂಗ್ ಪ್ರದರ್ಶನ ಮುಂದುವರಿಸಿದ ಶಾರ್ದುಲ್‌ ಠಾಕೂರ್‌, ಕೈಲ್ ವೆರ್ರೆನ್(21), ತೆಂಬಾ ಬವೂಮ(51), ಮಾರ್ಕೊ ಯೆನ್ಸನ್‌(21), ಲುಂಗಿ ಎನ್ಗಿಡಿ(0) ಅವರನ್ನು ಔಟ್‌ ಮಾಡಿದರು. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಮೊದಲ ಭಾರತೀಯ ಬೌಲರ್‌ ಎನಿಸಿಕೊಂಡರು.

ಇದರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರಿದ ಭಾರತದ ಮೊದಲ ಬೌಲರ್‌ ಎಂಬ ಸಾಧನೆಗೆ ಶಾರ್ದುಲ್‌ ಠಾಕೂರ್‌(61ಕ್ಕೆ 7) ಭಾಜನರಾದರು. ಆ ಮೂಲಕ ಹಿರಿಯ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌(66ಕ್ಕೆ 7) ಅವರ ದಾಖಲೆಯನ್ನು ಪುಡಿ-ಪುಡಿ ಮಾಡಿದರು.



ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ರೂಪಿಸಿದ್ದ ತಂತ್ರವನ್ನು ಎರಡನೇ ದಿನದಾಟದ ಅಂತ್ಯಕ್ಕೆ ಶಾರ್ದುಲ್‌ ಠಾಕೂರ್‌ ಬಹಿರಂಗಪಡಿಸಿದರು.

"22 ಅಡಿ ಪಿಚ್‌ನ ಕೆಲ ಭಾಗದಲ್ಲಿ ಚೆಂಡು ಹೆಚ್ಚು ಪುಟಿದೇಳುತ್ತಿತ್ತು ಹಾಗೂ ಇನ್ನೂ ಕೆಲವು ಕಡೆ ಚೆಂಡು ಹೆಚ್ಚು ಪುಟಿದೇಳುತ್ತಿರಲಿಲ್ಲ. ಹಾಗಾಗಿ ನಿಯಮಿತವಾಗಿ ಒಂದು ಲೈನ್‌ನಲ್ಲಿ ಬೌಲ್‌ ಮಾಡಲು ನಿರ್ಧರಿಸಿದೆ. ಬಿರುಕು ಬಿಟ್ಟಿರುವ ಜಾಗದಲ್ಲಿ ಪಿಚ್‌ ಮಾಡಲು ಪ್ರಯತ್ನಿಸಿದೆ. ಅದರಂತೆ ಇದು ನನಗೆ ವರ್ಕ್‌ಔಟ್‌ ಆಯಿತು," ಎಂದು ಹೇಳಿದರು.

'ಇವರು ನನಗೆ ಎರಡನೇ ಪೋಷಕರು' ಬಾಲ್ಯದ ಕೋಚ್‌ ಸಹಾಯ ನೆನೆದ ಶಾರ್ದುಲ್!

"ನಾವು ಆಡಿದ ಸೆಂಚೂರಿಯನ್‌ ಹಾಗೂ ಇಲ್ಲಿನ ವಾಂಡರರ್ಸ್‌ ಪಿಚ್‌ಗಳು ಬೌಲರ್‌ಗಳಿಗೆ ಸಹಾಯಕವಾಗಿವೆ. ಹಾಗಾಗಿ ಇಲ್ಲಿ ಪಿಚ್‌ಗೆ ತಕ್ಕಂತೆ ಬೌಲ್‌ ಮಾಡಬೇಕಾಗುತ್ತದೆ. ಸರಿಯಾದ ಜಾಗದಲ್ಲಿ ಚೆಂಡನ್ನು ಪಿಚ್‌ ಮಾಡುವ ಮೂಲಕ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಬೇಕಾಗುತ್ತದೆ. ಇದನ್ನೇ ನಾನು ಪ್ರಯತ್ನಿಸಿದ್ದೇನೆ," ಎಂದು ಶಾರ್ದುಲ್‌ ಠಾಕೂರ್‌ ತಮ್ಮ ಯಶಸ್ಸಿಗೆ ಕಾರಣವಾದ ಅಂಶವನ್ನು ರಿವೀಲ್‌ ಮಾಡಿದರು.

ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 85 ರನ್‌ ಗಳಿಸಿದ್ದು 58 ರನ್‌ ಮುನ್ನಡೆ ಗಳಿಸಿದೆ. ಚೇತೇಶ್ವರ್‌ ಪೂಜಾರ (35*) ಹಾಗೂ ಅಜಿಂಕ್ಯ ರಹಾನೆ(11*) ಮೂರನೇ ದಿನ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

ಪೆವಿಲಿಯನ್‌ಗೆ ತೆರಳುತ್ತಿದ್ದ ರಾಹುಲ್‌ ಜೊತೆ ಎಲ್ಗರ್‌ ಕಿರಿಕ್‌! ವಿಡಿಯೋ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ