ಆ್ಯಪ್ನಗರ

ಥರ್ಡ್‌ ಅಂಪೈರ್‌ ಅಂಗಳಕ್ಕೆ ನೋಬಾಲ್‌; ಭಾರತ-ವಿಂಡೀಸ್ ಸರಣಿಯಲ್ಲೇ ಆಳವಡಿಕೆ

ಭಾರತ ಮತ್ತು ವೆಸ್ಟ್‌ಇಂಡೀಸ್ ಸರಣಿಯಲ್ಲಿ ಫ್ರಂಟ್ ಫೂಟ್ ನೋಬಾಲ್ ಕುರಿತಾಗಿ ಫೀಲ್ಡ್ ಅಂಪೈರ್ ಬದಲು ಥರ್ಡ್ ಅಂಪೈರ್ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಣೆ ಹೊರಡಿಸಿದೆ.

Vijaya Karnataka Web 6 Dec 2019, 10:06 am
ದುಬೈ: ಭಾರತ ಮತ್ತು ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡಗಳ ನಡುವಣ ಟಿ20 ಮತ್ತು ಏಕದಿನ ಸರಣಿಗಳಲ್ಲಿ 'ಫ್ರಂಟ್‌ ಫೂಟ್‌' ನೋಬಾಲ್‌ ಕುರಿತು ಫೀಲ್ಡ್‌ ಅಂಪೈರ್‌ ಬದಲಿಗೆ ಥರ್ಡ್‌ ಅಂಪೈರ್‌ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಗುರುವಾರ ಪ್ರಕಟಣೆ ಹೊರಡಿಸಿದೆ.
Vijaya Karnataka Web ನೋ ಬಾಲ್


ವಿರಾಟ್‌ ಕೊಹ್ಲಿ ಮತ್ತು ಕೀರಾನ್‌ ಪೊಲಾರ್ಡ್‌ ಪಡೆಗಳ ನಡುವೆ ಡಿಸೆಂಬರ್‌ 6ರಿಂದ 22ರ ತನಕ ತಲಾ 3 ಪಂದ್ಯಗಳ ಟಿ20 ಮತ್ತು ಏಕದಿನ ಸರಣಿ ನಿಗದಿಯಾಗಿದೆ. ಶುಕ್ರವಾರ ಟಿ20 ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನಲ್ಲಿನಡೆಯಲಿದ್ದು, ಫ್ರಂಟ್‌ ಫುಟ್‌ ನೋಬಾಲ್‌ ಕುರಿತ ಐಸಿಸಿ ಆದೇಶ ಭಾರತದಲ್ಲಿ ಮೊದಲ ಬಾರಿಗೆ ಚಾಲ್ತಿಗೆ ಬರಲಿದೆ.

''ಪ್ರತಿ ಎಸೆತದ ಮೇಲೆ ನಿಗಾ ವಹಿಸುವುದು ಮೂರನೇ ಅಂಪೈರ್‌ನ ಹೊಣೆಗಾರಿಕೆಯಾಗಿರುತ್ತದೆ. ಬೌಲರ್‌ನ ಮುಂಗಾಲ ಪಾದ ಗೆರೆ ದಾಟಿದ್ದೇ ಆದರೆ, ಥರ್ಡ್‌ ಅಂಪೈರ್‌ ತಕ್ಷಣವೇ ಅದನ್ನು ಆನ್‌ಫೀಲ್ಡ್‌ ಅಂಪೈರ್‌ ಗಮನಕ್ಕೆ ತರಬೇಕು. ಪರಸ್ಪರ ಸಂವಹನದ ನಂತರ ಆನ್‌ಫೀಲ್ಡ್‌ ಅಂಪೈರ್‌ ನೋಬಾಲ್‌ ಘೋಷಿಸಬೇಕು,'' ಎಂದು ಐಸಿಸಿ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ವಿಂಡೀಸ್ ಟಿ20 ಸರಣಿಯಲ್ಲಿ ಕೊಹ್ಲಿ vs ರೋಹಿತ್ ರನ್ ವಾರ್

''ಮೂರನೇ ಅಂಪೈರ್‌ ಸೂಚನೆ ಇಲ್ಲದೆ ಯಾವುದೇ ಕಾರಣಕ್ಕೂ ಆನ್‌ಫೀಲ್ಡ್‌ ಅಂಪೈರ್‌ ನೋಬಾಲ್‌ ಕುರಿತು ನಿರ್ಧಾರ ಕೈಗೊಳ್ಳುವಂತಿಲ್ಲ,'' ಎಂದೂ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಪ್ರಕ್ರಿಯೆಯಲ್ಲಿಅನುಮಾನದ ಲಾಭ ಬೌಲರ್‌ಗೆ ಸೇರಲಿದೆ.

ಫ್ರಂಟ್‌ ಫುಟ್‌ ನೋಬಾಲ್‌ ಗುರುತಿಸುವ ಹಕ್ಕನ್ನು ಥರ್ಡ್‌ ಅಂಪೈರ್‌ಗೆ ವಹಿಸುವುದಕ್ಕೆ ಸಂಬಂಧಪಟ್ಟಂತೆ ಈ ವರ್ಷ ಆಗಸ್ಟ್‌ನಲ್ಲೇ ತೀರ್ಮಾನಿಸಲಾಗಿತ್ತು. ನೋಬಾಲ್‌ಗೆ ಸಂಬಂಧಪಟ್ಟಂತೆ ಆನ್‌ಫೀಲ್ಡ್‌ ಅಂಪೈರ್‌ ತೆಗೆದುಕೊಳ್ಳುವ ತೀರ್ಮಾನ ಇಡೀ ಪಂದ್ಯದ ಮೇಲೆ ಪರಿಣಾಮ ಬೀರಬಹುದಾದ ಕಾರಣ ಐಸಿಸಿಯ ಈ ಹೊಸ ನಿಯಮ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. 2016ರಲ್ಲಿಇಂಗ್ಲೆಂಡ್‌ ಮತ್ತು ಪಾಕಿಸ್ತಾನ ನಡುವಣ ಏಕದಿನ ಸರಣಿಯಲ್ಲಿಇದನ್ನು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು.

ಸಚಿನ್ ಕ್ಲಾಸ್‌ ಕೊಹ್ಲಿ ಹೊಂದಿಲ್ಲ; ಮತ್ತೆ ಬಾಲ ಬಿಚ್ಚಿದ ಅಬ್ದುಲ್ ರಜಾಕ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌