ಆ್ಯಪ್ನಗರ

Shardul Thakur: ಗಾಯಾಳು ಭುವನೇಶ್ವರ್ ಕುಮಾರ್ ವಿಂಡೀಸ್ ಸರಣಿಯಿಂದ ಔಟ್; ಶಾರ್ದೂಲ್ ಠಾಕೂರ್‌ಗೆ ಬುಲಾವ್

ವೆಸ್ಟ್‌ಇಂಡೀಸ್ ವಿರುದ್ದ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಗಾಯಾಳು ಭುವನೇಶ್ವರ್ ಕುಮಾರ್ ಅಲಭ್ಯವಾಗಿದ್ದಾರೆ. ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಹೆಸರನ್ನು ಹೆಸರಿಸಲಾಗಿದೆ.

Vijaya Karnataka Web 14 Dec 2019, 11:03 am
ಚೆನ್ನೈ: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾ ಮಗದೊಂದು ಆಘಾತಕ್ಕೊಳಗಾಗಿದೆ. ಆಗಲೇ ಶಿಖರ್ ಧವನ್ ಸೇವೆಯಿಂದ ವಂಚಿತವಾಗಿರುವ ಭಾರತ ತಂಡಕ್ಕೀಗ ಗಾಯಾಳು ಭುವನೇಶ್ವರ್ ಕುಮಾರ್ ಅನುಪಸ್ಥಿತಿ ಕಾಡಲಿದೆ.
Vijaya Karnataka Web ಭುವನೇಶ್ವರ್ ಕುಮಾರ್ - ಶಾರ್ದೂಲ್ ಠಾಕೂರ್


ವಿಂಡೀಸ್ ವಿರುದ್ಧ ಮುಂಬಯಿಯಲ್ಲಿ ನಡೆದ ಕೊನೆಯ ಟ್ವೆಂಟಿ-20 ಪಂದ್ಯದ ವೇಳೆ ಭುವಿ ಬಲ ತೊಡೆಸಂದಿನಲ್ಲಿ ನೋವು ಉಲ್ಬಣಿಸಿತ್ತು. ಬಳಿಕ ಬಿಸಿಸಿಐ ವೈದ್ಯಕೀಯ ತಂಡವು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಿತ್ತು. ಇದೀಗ ಹರ್ನಿಯ ಲಕ್ಷಣಗಳು ಮತ್ತೆ ಕಾಣಿಸಿಕೊಂಡಿದೆ. ಹಾಗಾಗಿ ತಜ್ಞರ ಅಭಿಪ್ರಾಯದೊಂದಿಗೆ ಭುವಿ ಚಿಕಿತ್ಸೆಯನ್ನು ನಿರ್ಧರಿಸಲಾಗುವುದು.

ಗಾಯಾಳು ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಬಲಗೈ ವೇಗಿ ಶಾರ್ದೂರ್ ಠಾಕೂರ್ ಅವರನ್ನು ಹೆಸರಿಸಲಾಗಿದೆ. ಶಾರ್ದೂಲ್ ಆದಷ್ಟು ಬೇಗನೇ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

ಐಪಿಎಲ್‌ಗೂ ಕಾಲಿಡಲಿದೆ 'ನೋಟ್‌ಬುಕ್, ಸೆಲ್ಯೂಟ್' ಸೆಲೆಬ್ರೇಷನ್; ಕೆಸ್ರಿಕ್ ವಿಲಿಯಮ್ಸ್, ಶೆಲ್ಡನ್ ಕಾಟ್ರೆಲ್‌ಗೆ ಗಾಳ ಬೀಸಿದ ಪ್ರಮುಖ ಫ್ರಾಂಚೈಸಿಗಳು!

ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಡಿಸೆಂಬರ್ 15 ಭಾನುವಾರದಂದು ಚೆನ್ನೈನಲ್ಲಿ ನಡೆಯಲಿದೆ. ಆಗಲೇ ಮೊಣಕಾಲಿನ ಗಾಯದ ಸಮಸ್ಯೆಗೆ ಒಳಗಾಗಿರುವ ಎಡಗೈ ಆರಂಭಿಕ ಶಿಖರ್ ಧವನ್ ಸೇವೆಯಿಂದ ಭಾರತ ವಂಚಿತವಾಗಿದೆ. ಧವನ್ ಸ್ಥಾನಕ್ಕೆ ಕರ್ನಾಟಕದ ಮಯಾಂಕ್ ಅಗರ್ವಾಲ್‌ರನ್ನು ಹೆಸರಿಸಲಾಗಿದೆ. ಇದೀಗ ಭುವಿ ಕೂಡಾ ಅಲಭ್ಯವಾಗಿರುವುದು ಹಿನ್ನಡೆಗೆ ಕಾರಣವಾಗಿದೆ.

ಕಳೆದ ಕೆಲವು ಸಮಯಗಳಿಂದ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಭುವನೇಶ್ವರ್ ಕುಮಾರ್, ವಿಂಡೀಸ್ ಸರಣಿಯ ವೇಳೆ ತಂಡವನ್ನು ಸೇರಿಕೊಂಡಿದ್ದರು. ಇದೀಗ ಗಾಯದಿಂದಾಗಿ ಮತ್ತೆ ತಂಡದಿಂದ ಹೊರಗುಳಿವಂತಾಗಿದೆ. ಒಟ್ಟಿನಲ್ಲಿ ಭಾರತದ ಗಾಯಾಳುಗಳ ಪಟ್ಟಿ ಬೆಳೆಯುತ್ತಲೇ ಇದೆ. ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಪುನಶ್ಚೇತನದ ಹಂತದಲ್ಲಿದ್ದು, ಹೊಸ ವರ್ಷದ ವೇಳೆಯಷ್ಟೇ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

IPL 2020: ಆಟಗಾರರ ಹರಾಜಿಗೆ ಅಂತಿಮ ಪಟ್ಟಿ ಬಿಡುಗಡೆ!

ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ಅನುಕ್ರಮವಾಗಿ ಚೆನ್ನೈ (ಡಿ.15), ವಿಶಾಖಪಟ್ಟಣ (ಡಿ.18) ಹಾಗೂ ಕಟಕ್ (ಡಿ.22) ಮೈದಾನಗಳಲ್ಲಿ ನಡೆಯಲಿದೆ.

ಭಾರತ ತಂಡ ಇಂತಿದೆ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಕೇದರ್ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್.

IPL 2020: ಹರಾಜಿನಲ್ಲಿ ಖರೀದಿಸಲಿರುವ ಬ್ಯಾಟ್ಸ್‌ಮನ್‌ಗಳ ಬಗ್ಗೆ ಸುಳಿವು ಕೊಟ್ಟ RCB!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌