ಆ್ಯಪ್ನಗರ

ಟೆಸ್ಟ್‌ ಸರಣಿ ಭಾರತ ‘ಎ’ ಕೈವಶ

ನಾಯಕ ಕರುಣ್‌ ನಾಯರ್‌(55), ಹನುಮ ವಿಹಾರಿ(68) ಮತ್ತು ರಿಷಭ್‌ ಪಂತ್‌(67*) ಅವರ ಜವಾಬ್ದಾರಿಯುತ ಅರ್ಧಶತಕಗಳ ನೆರವಿನಿಂದ ಭಾರತ 'ಎ' ತಂಡ, 2ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 'ಎ' ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

Agencies 13 Jul 2018, 9:09 pm
ಟೌಂಟನ್‌: ನಾಯಕ ಕರುಣ್‌ ನಾಯರ್‌(55), ಹನುಮ ವಿಹಾರಿ(68) ಮತ್ತು ರಿಷಭ್‌ ಪಂತ್‌(67*) ಅವರ ಜವಾಬ್ದಾರಿಯುತ ಅರ್ಧಶತಕಗಳ ನೆರವಿನಿಂದ ಭಾರತ 'ಎ' ತಂಡ, 2ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 'ಎ' ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
Vijaya Karnataka Web india a beat west indies a in 2nd unofficial test match and clinched 2 match series by 1 0
ಟೆಸ್ಟ್‌ ಸರಣಿ ಭಾರತ ‘ಎ’ ಕೈವಶ


ಇಲ್ಲಿನ ದಿ ಕೂಪರ್‌ ಅಸೋಸಿಯೇಟ್ಸ್‌ ಕೌಂಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಅಂತ್ಯಗೊಂಡ ಪಂದ್ಯದಲ್ಲಿ ಪಾರಮ್ಯ ಮೆರೆದ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದ ಭಾರತ 'ಎ' ತಂಡ 2 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು. ಪ್ರಥಮ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.

ಗೆಲ್ಲಲು 321 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಕರುಣ್‌ ನಾಯರ್‌ ಬಳಗ 67.1 ಓವರ್‌ಗಳಲ್ಲಿ 5 ವಿಕೆಟ್‌ ಒಪ್ಪಿಸಿ ಜಯಭೇರಿ ಬಾರಿಸಿತು. ಪ್ರಥಮ ಇನಿಂಗ್ಸ್‌ನಲ್ಲಿ 110 ರನ್‌ಗಳ ದೊಡ್ಡ ಹಿನ್ನಡೆ ಅನುಭವಿಸಿದರೂ, ದ್ವಿತೀಯ ಇನಿಂಗ್ಸ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಉತ್ತಮ ಆಟದ ಬಲದಿಂದ ಭಾರತ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಸೋಮವಾರ ವಾರ್ಸೆಸ್ಟರ್‌ನಲ್ಲಿ ಆರಂಭವಾಗಲಿರುವ ಏಕೈಕ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ 'ಎ' ತಂಡ ಆತಿಥೇಯ ಇಂಗ್ಲೆಂಡ್‌ ಲಯನ್ಸ್‌ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌

ವೆಸ್ಟ್‌ ಇಂಡೀಸ್‌ 'ಎ': 302 ಮತ್ತು 2ನೇ ಇನಿಂಗ್ಸ್‌ 57.3 ಓವರ್‌ಗಳಲ್ಲಿ 210

ಭಾರತ 'ಎ': 192 ಮತ್ತು 2ನೇ ಇನಿಂಗ್ಸ್‌ 67.1 ಓವರ್‌ಗಳಲ್ಲಿ 321/5 (ಕರುಣ್‌ ನಾಯರ್‌ 55, ಹನುಮ ವಿಹಾರಿ 68, ರಿಷಭ್‌ ಪಂತ್‌ 67*; ಜೋಮೆಲ್‌ ವಾರಿಕನ್‌ 36ಕ್ಕೆ1).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌