ಆ್ಯಪ್ನಗರ

ಭಾರತ ಎ vs ದಕ್ಷಿಣ ಆಫ್ರಿಕಾ ಎ ಎರಡನೇ ಟೆಸ್ಟ್ ನೀರಸ ಡ್ರಾ

ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡದ ನಡುವಣ ಎರಡನೇ ಅನಧಿಕೃತ ಟೆಸ್ಟ್ ಪಂದ್ಯವು ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಭಾರತ 1-0ರ ಅಂತರದಲ್ಲಿ ವಶಪಡಿಸಿಕೊಂಡಿದೆ.

Vijaya Karnataka Web 21 Sep 2019, 9:00 am
ಮೈಸೂರು: ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಣ ಎರಡನೇ ಚತುರ್ದಿನ ಟೆಸ್ಟ್ ನಿರೀಕ್ಷೆಯಂತೆ ನೀರಸ ಡ್ರಾದಲ್ಲಿ ಪರ್ಯವಸಾನಗೊಂಡಿದೆ.
Vijaya Karnataka Web priyank-panchal


ಇದರೊಂದಿಗೆ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿ 1-0 ಅಂತರದಿಂದ ವೃದ್ಧಿಮಾನ್ ಸಾಹ ಬಳಗದ ಪಾಲಾಗಿದೆ.

ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನವಾದ ಶುಕ್ರವಾರ 14/0 ಸ್ಕೋರ್‌ನಿಂದ ಎರಡನೇ ಇನ್ನಿಂಗ್ಸ್ ಮುಂದುವರಿಸಿದ ಆತಿಥೇಯ ಭಾರತ ಎ ತಂಡ ಚಹಾ ವಿರಾಮದ ವೇಳೆಗೆ 70 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿದ್ದಾಗ ನಾಯಕ ವೃದ್ಧಿಮಾನ್ ಸಾಹ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ಅಂಕಿ ಅಂಶಗಳೇ ಸಾರುತ್ತಿದೆ ರಿಷಬ್ ಪಂತ್ ಕೆಟ್ಟ ಫಾರ್ಮ್; ಇನ್ನೆಷ್ಟು ಚಾನ್ಸ್?

ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ದೊರೆತ 17 ರನ್‌ಗಳ ಮುನ್ನಡೆ ಸೇರಿ 219 ರನ್‌ಗಳ ಮುನ್ನಡೆ ದೊರೆತಂತಾಯಿತು.

ಟೀ ವಿರಾಮದ ನಂತರದ ಆಟದಲ್ಲಿ ನಿಚ್ಚಳ ಫಲಿತಾಂಶ ಸಿಗುವ ಸಾಧ್ಯತೆಗಳಿಲ್ಲದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಪ್ರಿಯಾಂಕ್ ಪಂಚಾಲ್ ಶತಕ (109) ಹಾಗೂ ಕರುಣ್ ನಾಯರ್ ಅಜೇಯ ಅರ್ಧಶತಕ (51*) ಬಾರಿಸಿದ್ದಷ್ಟೇ ಕೊನೆಯ ದಿನದಾಟದ ವಿಶೇಷ. ಈ ಮೂಲಕ ನಾಯಕ ಎರಡು ಇನ್ನಿಂಗ್ಸ್‌ಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು.

'ಅವರ ಸಮಯ ಮುಗಿದಿದೆ' ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯನ್ನು ಬಯಸಿದ ಸುನಿಲ್ ಗವಾಸ್ಕರ್

ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ (161) ಸಿಡಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಆ್ಯಡೆನ್ ಮಾರ್ಕ್ರಮ್ ಪಂದ್ಯಶ್ರೇಷ್ಠರಾಗಿ ಪುರಸ್ಕೃತರಾದರು.

ಈ ಮೊದಲು ಪ್ರಥಮ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಶುಭಮನ್ ಗಿಲ್ ಕೇವಲ ಎಂಟು ರನ್ ಅಂತರದಿಂದ ಶತಕ ಮಿಸ್ ಮಾಡಿಕೊಂಡಿದ್ದರು.

ಈ ಪಂದ್ಯದೊಂದಿಗೆ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಣ ಕ್ರಿಕೆಟ್ ಕಾರ್ಯಕ್ರಮ ಪಟ್ಟಿಗೆ ತೆರೆ ಬಿದ್ದಿದೆ.

ಸಂಕ್ಷಿಪ್ತ ಸ್ಕೋರ್:
ಭಾರತ ಎ ಮೊದಲ ಇನ್ನಿಂಗ್ಸ್: 417 (ಗಿಲ್ 92, ನಾಯರ್ 78, ಸಾಹ 60, ದುಬೆ 68)
ದ.ಆಫ್ರಿಕಾ ಎ ಮೊದಲ ಇನ್ನಿಂಗ್ಸ್: 400 (ಮಾರ್ಕ್ರಮ್ 161, ಮುಲ್ಡರ್ 131*)
ಭಾರತ ಎ ದ್ವಿತೀಯ ಇನ್ನಿಂಗ್ಸ್: 202/3 ಡಿಕ್ಲೇರ್ (ಪಂಚಾಲ್ 109, ನಾಯರ್ 51*)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌