ಆ್ಯಪ್ನಗರ

ಮತ್ತೆ ಡಿಆರ್‌ಎಸ್ ಎಡವಟ್ಟು; ಎಬಿಡಿ ಬಚಾವ್!

ಇಲ್ಲಿನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಸಾಗುತ್ತಿರುವ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡವು ಮತ್ತೆ ಡಿಆರ್‌ಎಸ್ ಎಡವಟ್ಟು ಮಾಡಿದೆ.

Vijaya Karnataka Web 25 Jan 2018, 4:48 pm
ಜೋಹಾನ್ಸ್ಬರ್ಗ್: ಇಲ್ಲಿನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಸಾಗುತ್ತಿರುವ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡವು ಮತ್ತೆ ಡಿಆರ್ಎಸ್ ಎಡವಟ್ಟು ಮಾಡಿದೆ.
Vijaya Karnataka Web ab-de-villiers-drive


ಭಾರತದ 187 ರನ್ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ದ್ವಿತೀಯ ದಿನದಾಟದ ಊಟದ ವಿರಾಮದ ಹೊತ್ತಿಗೆ ಮೂರು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿತ್ತು.

ಲಂಚ್ ವಿರಾಮದ ಬಳಿಕ 31.4ನೇ ಓವರ್ನಲ್ಲಿ ಎಬಿಡಿ ವಿಲಿಯರ್ಸ್ ಅವರನ್ನು ಬಲಗೈ ವೇಗಿ ಇಶಾಂತ್ ಶರ್ಮಾ ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸಿದ್ದರು.

ಆದರೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ಘೋಷಿಸಿದ್ದರು. ಈ ವೇಳೆಯಲ್ಲಿ ಡಿಆರ್ಎಸ್ ಮೊರೆ ಹೋಗುವ ಅವಕಾಶವಿತ್ತಾದರೂ ನಾಯಕ ವಿರಾಟ್ ಕೊಹ್ಲಿ ಆಸಕ್ತಿ ತೋರಲಿಲ್ಲ.

ಬಳಿಕ ರಿಪ್ಲೇನಲ್ಲಿ ಚೆಂಡು ನೇರವಾಗಿ ವಿಕೆಟ್ ಬಡಿಯುತ್ತಿರುವುದು ಕಂಡಬಂದಿತ್ತು. ಇದರಿಂದಾಗಿ ಮಹತ್ವದ ವಿಕೆಟ್ ನಷ್ಟವಾಗಿತು.

ಆದರೆ ಎಬಿಡಿ ಅವರನ್ನು ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲು ಭುವನೇಶ್ವರ್ ಕುಮಾರ್ ಬಿಡಲಿಲ್ಲ. 5 ರನ್ ಗಳಿಸಿದ ಎಬಿಡಿ ಅವರನ್ನು ಭುವಿ ಕ್ಲೀನ್ ಬೌಲ್ಡ್ ಮಾಡಿದರು.

ಈ ನಡುವೆ ಹಾಶೀಮ್ ಆಮ್ಲಾ ಅವರನ್ನು ಹೊರಗಟ್ಟಲು ಡಿಆರ್ಎಸ್ ಮೊರೆ ಹೋದರೂ 'ಅಂಪೈರ್ಸ್ ಕಾಲ್' ನಿರ್ಣಯದಿಂದಾಗಿ ವಿಕೆಟ್ ನಷ್ಟವಾಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌