ಆ್ಯಪ್ನಗರ

ಟೆಸ್ಟ್‌ ಸಮರಕ್ಕೆ ಭಾರತದ ಪೂರ್ವಾಭ್ಯಾಸ ಇಂದಿನಿಂದ

ಆಸ್ಪ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆಲುವಿನ ಗುರಿ ಹೊಂದಿರುವ ಪ್ರವಾಸಿ ಭಾರತ ತಂಡ, ಪೂರ್ವಾಭ್ಯಾಸ ಸಲುವಾಗಿ ಕ್ರಿಕೆಟ್‌ ಆಸ್ಪ್ರೇಲಿಯಾ ಇಲೆವೆನ್‌ ವಿರುದ್ಧದ ಏಕಮಾತ್ರ ಅಭ್ಯಾಸ ಪಂದ್ಯದಲ್ಲಿ ಬುಧವಾರ ಕಣಕ್ಕಿಳಿಯಲಿದೆ.

PTI 28 Nov 2018, 5:00 am
ಸಿಡ್ನಿ : ಆಸ್ಪ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆಲುವಿನ ಗುರಿ ಹೊಂದಿರುವ ಪ್ರವಾಸಿ ಭಾರತ ತಂಡ, ಪೂರ್ವಾಭ್ಯಾಸ ಸಲುವಾಗಿ ಕ್ರಿಕೆಟ್‌ ಆಸ್ಪ್ರೇಲಿಯಾ ಇಲೆವೆನ್‌ ವಿರುದ್ಧದ ಏಕಮಾತ್ರ ಅಭ್ಯಾಸ ಪಂದ್ಯದಲ್ಲಿ ಬುಧವಾರ ಕಣಕ್ಕಿಳಿಯಲಿದೆ.
Vijaya Karnataka Web india prepare for tests against inconsequential tour game opposition
ಟೆಸ್ಟ್‌ ಸಮರಕ್ಕೆ ಭಾರತದ ಪೂರ್ವಾಭ್ಯಾಸ ಇಂದಿನಿಂದ


4 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಅಡಿಲೇಡ್‌ನಲ್ಲಿ ಡಿ.6ರಿಂದ 10ರವರೆಗೆ ನಡೆಯಲಿದೆ. ಪ್ರವಾಸಿ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೂ ಈ ಪಂದ್ಯದಲ್ಲಿ ಬ್ಯಾಟ್‌ ಮಾಡುವ ಅವಕಾಶ ನೀಡಲಾಗಿರುವುದರಿಂದ ಈ ಪಂದ್ಯವನ್ನು ಅಧಿಕೃತ ಪ್ರಥಮದರ್ಜೆ ಪಂದ್ಯವನ್ನಾಗಿ ಪರಿಗಣಿಸಲಾಗಿಲ್ಲ.

ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರ ಅನುಪಸ್ಥಿತಿಯಲ್ಲಿ ಆಸ್ಪ್ರೇಲಿಯಾ ತಂಡ ತನ್ನ ಎಂದಿನ ಛಾಪನ್ನು ಕಳೆದುಕೊಂಡಿದ್ದು ಸತತ ವೈಫಲ್ಯ ಅನುಭವಿಸಿದೆ. ಹೀಗಾಗಿ ಭಾರತ ತಂಡಕ್ಕೆ ಕಾಂಗರೂಗಳ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಜಯ ದಾಖಲಿಸುವ ಉತ್ತಮ ಅವಕಾಶ ಲಭ್ಯವಾಗಿದೆ.

ಹೀಗಾಗಿ ಕ್ರಿಕೆಟ್‌ ಆಸ್ಪ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ತನ್ನ ಬ್ಯಾಟಿಂಗ್‌ ಸಂಯೋಜನೆಯನ್ನು ರಚಿಸಿಕೊಳ್ಳುವ ಕಡೆಗೆ ಹೆಚ್ಚಿನ ಒತ್ತು ನೀಡಲಿದೆ. ಮುರಳಿ ವಿಜಯ್‌ ಮತ್ತು ಕೆ.ಎಲ್‌ ರಾಹುಲ್‌ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮರಳಿ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಹೆಚ್ಚಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌