ಆ್ಯಪ್ನಗರ

ಭಾರತಕ್ಕೆ 100ನೇ ಟಿ20 ಪಂದ್ಯ

ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ತಂಡದ ಅಭಿಯಾನ ಐರ್ಲೆಂಡ್‌ ವಿರುದ್ಧದ ಟಿ20 ಪಂದ್ಯದೊಂದಿಗೆ ಬುಧವಾರ ಆರಂಭವಾಗಲಿದ್ದು, ಇದು ಟೀಮ್‌ ಇಂಡಿಯಾದ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ.

Agencies 27 Jun 2018, 11:34 am
Vijaya Karnataka Web india to play 100s t20i vs ireland
ಭಾರತಕ್ಕೆ 100ನೇ ಟಿ20 ಪಂದ್ಯ
ಡಬ್ಲಿನ್‌ನಲ್ಲಿ ಐರ್ಲೆಂಡ್‌ ವಿರುದ್ಧ ಮೊದಲ ಟಿ20 ಪಂದ್ಯ ಇಂದು | ಇಂಗ್ಲೆಂಡ್‌ ಪ್ರವಾಸದಲ್ಲಿ ವಿರಾಟ್‌ ಪಡೆಗೆ ಶುಭಾರಂಭದ ತವಕ

ಡಬ್ಲಿನ್‌: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ತಂಡದ ಅಭಿಯಾನ ಐರ್ಲೆಂಡ್‌ ವಿರುದ್ಧದ ಟಿ20 ಪಂದ್ಯದೊಂದಿಗೆ ಬುಧವಾರ ಆರಂಭವಾಗಲಿದ್ದು, ಇದು ಟೀಮ್‌ ಇಂಡಿಯಾದ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ.

ಇಲ್ಲಿನ ಮೆಲಹೈಡ್‌ ಕ್ರಿಕೆಟ್‌ ಕ್ಲಬ್‌ ಮೈದಾನದಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಹಣಾಹಣಿಯಲ್ಲಿ ವಿರಾಟ್‌ ಕೊಹ್ಲಿ ಬಳಗ ಸುಲಭ ಜಯದೊಂದಿಗೆ 100ನೇ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವ ತವಕದಲ್ಲಿದೆ. ಏಕದಿನ ಕ್ರಿಕೆಟ್‌ನ ನಂ.1 ತಂಡವಾಗಿರುವ ಇಂಗ್ಲೆಂಡ್‌ ವಿರುದ್ಧ ಭಾರತ ಟಿ20, ಏಕದಿನ ಹಾಗೂ ಟೆಸ್ಟ್‌ ಪಂದ್ಯಗಳನ್ನಾಡಬೇಕಿದೆ. ಈ ಕಠಿಣ ಸರಣಿಗೆ ಸಿದ್ಧತೆ ನಡೆಸಲು ಐರ್ಲೆಂಡ್‌ ವಿರುದ್ಧದ ಟಿ20 ಸರಣಿ ವಿರಾಟ್‌ ಪಡೆಗೆ ಉತ್ತಮ ಅವಕಾಶವಾಗಿದೆ. ಭಾರತ ತಂಡ ಸೋಮವಾರ ಲಂಡನ್‌ನಲ್ಲಿ ಅಭ್ಯಾಸ ನಡೆಸಿ ಡುಬ್ಲಿನ್‌ಗೆ ತೆರಳಿದೆ.

ಐಪಿಎಲ್‌ ಟೂರ್ನಿಯ ವೇಳೆ ಕುತ್ತಿಗೆ ನೋವಿಗೊಳಗಾಗಿದ್ದ ನಾಯಕ ವಿರಾಟ್‌ ಕೊಹ್ಲಿ, ಸಂಪೂರ್ಣ ಚೇತರಿಸಿಕೊಂಡು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಹಿಂದೆ ಕೌಂಟಿ ಕ್ರಿಕೆಟ್‌ ಆಡಲು ಸಿದ್ಧರಾಗಿದ್ದ ಕೊಹ್ಲಿ, ಗಾಯದ ಕಾರಣ ತಮ್ಮ ಮೊದಲ ಕೌಂಟಿ ಅವಕಾಶವನ್ನು ತಪ್ಪಿಸಿಕೊಂಡಿದ್ದರು.

ತಂಡಗಳ ವಿವರ
ಭಾರತ: ವಿರಾಟ್‌ ಕೊಹ್ಲಿ(ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ಮನೀಶ್‌ ಪಾಂಡೆ, ಸುರೇಶ್‌ ರೈನಾ, ದಿನೇಶ್‌ ಕಾರ್ತಿಕ್‌, ಎಂ.ಎಸ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಕುಲ್‌ದೀಪ್‌ ಯಾದವ್‌, ಯುಜ್ವೇಂದ್ರ ಚಹಾಲ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ವಾಷಿಂಗ್ಟನ್‌ ಸುಂದರ್‌, ಉಮೇಶ್‌ ಯಾದವ್‌, ಸಿದ್ದಾರ್ಥ್‌ ಕೌಲ್‌.

ಐರ್ಲೆಂಡ್‌: ಗ್ಯಾರಿ ವಿಲ್ಸನ್‌(ನಾಯಕ), ಆ್ಯಂಡ್ರ್ಯೂ ಬಾಲ್ಬಿರ್ನಿ, ಪೀಟರ್‌ ಚೇಸ್‌, ಜಾರ್ಜ್‌ ಡಾಕ್‌ರೆಲ್‌, ಜೋಶ್‌ ಲಿಟಲ್‌, ಆ್ಯಂಡಿ ಮೆಕ್‌ಬ್ರಿನ್‌, ಕೆವಿನ್‌ ಓ'ಬ್ರಿಯೆನ್‌, ವಿಲಿಯಂ ಪೋರ್ಟರ್‌ಫೀಲ್ಡ್‌, ಸ್ಟುವರ್ಟ್‌ ಪೋಯ್ಟಂರ್‌, ಬಾಯ್ಡ್‌ ರಾರ‍ಯಂಕಿನ್‌, ಜೇಮ್ಸ್‌ ಶಾನನ್‌, ಸಿಮಿ ಸಿಂಗ್‌, ಪಾಲ್‌ ಸ್ಟಿರ್ಲಿಂಗ್‌, ಸ್ಟುವರ್ಟ್‌ ಥಾಂಪ್ಸನ್‌.

ಪಂದ್ಯ ಆರಂಭ: ರಾತ್ರಿ 8.30ಕ್ಕೆ
ಸ್ಥಳ: ಮೆಲಹೈಡ್‌ ಕ್ರಿಕೆಟ್‌ ಕ್ಲಬ್‌ ಮೈದಾನ, ಡುಬ್ಲಿನ್‌
ನೇರ ಪ್ರಸಾರ: ಸೋನಿ ಸಿಕ್ಸ್‌, ಸೋನಿ ಟೆನ್‌ 3

ಭಾರತ ಮತ್ತು ಐರ್ಲೆಂಡ್‌ ತಂಡಗಳು ಇದುವರೆಗೆ ಒಂದು ಟಿ20 ಪಂದ್ಯವಾಡಿದ್ದು, 2009ರಲ್ಲಿ ನಡೆದ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಗೆಲುವು ದಾಖಲಿಸಿತ್ತು.


ಟಿ20 ರ‍್ಯಾಂಕಿಂಗ್
ಭಾರತ: 03
ಐರ್ಲೆಂಡ್‌: 17


ಟಿ20 ಕ್ರಿಕೆಟ್‌ ಸಾಧನೆ
ತಂಡ ಪಂದ್ಯ ಗೆಲುವು ಸೋಲು ಟೈ ಫಲಿತಾಂಶವಿಲ್ಲ
ಭಾರತ 99 61 35 01 02
ಐರ್ಲೆಂಡ್‌ 65 27 31 01 06

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌