ಆ್ಯಪ್ನಗರ

ಟೆಸ್ಟ್ ಕ್ರಿಕೆಟ್‌ನಲ್ಲಿ 100ರ ಮೈಲುಗಲ್ಲು ತಲುಪಿದ ಶಮಿ

ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಕೇಶವ್ ಮಹಾರಾಜ್ ವಿಕೆಟ್ ಕಬಳಿಸಿರುವ ಭಾರತದ ಬಲಗೈ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟುಗಳ ಮೈಲುಗಲ್ಲನ್ನು ತಲುಪಿದ್ದಾರೆ.

TIMESOFINDIA.COM 14 Jan 2018, 5:49 pm
ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಕೇಶವ್ ಮಹಾರಾಜ್ ವಿಕೆಟ್ ಕಬಳಿಸಿರುವ ಭಾರತದ ಬಲಗೈ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟುಗಳ ಮೈಲುಗಲ್ಲನ್ನು ತಲುಪಿದ್ದಾರೆ.
Vijaya Karnataka Web india v south africa 2nd test mohammed shami reaches 100 test wickets
ಟೆಸ್ಟ್ ಕ್ರಿಕೆಟ್‌ನಲ್ಲಿ 100ರ ಮೈಲುಗಲ್ಲು ತಲುಪಿದ ಶಮಿ


ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟುಗಳನ್ನು ಕಬಳಿಸಿರುವ ಭಾರತದ ಏಳನೇ ವೇಗದ ಬೌಲರ್ ಹಾಗೂ ಒಟ್ಟಾರೆಯಾಗಿ 20ನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಶಮಿ ಈಗ ಮಾಜಿ ದಿಗ್ಗಜರಾದ ಕಪಿಲ್ ದೇವ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್, ಕರ್ಸನ್ ಘಾವ್ರಿ ಹಾಗೂ ಸಮಕಾಲೀನ ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಇರ್ಫಾನ್ ಪಠಾಣ್ ಸಾಲಿಗೆ ಸೇರಿದ್ದಾರೆ.

ತಮ್ಮ 29ನೇ ಟೆಸ್ಟ್ ಪಂದ್ಯದಲ್ಲಿ ಶಮಿ 100ನೇ ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಬಿಷನ್ ಸಿಂಗ್ ಬೇಡಿ, ದಿಲೀಪ್ ದೋಶಿ ಹಾಗೂ ಇರ್ಫಾನ್ ಪಠಾಣ್ ಸಾಧನೆಯನ್ನು ಸರಿದೂಗಿಸಿದ್ದಾರೆ.

ಭಾರತದ ಪರ ರವಿಚಂದ್ರನ್ ಅಶ್ವಿನ್ ಅತಿ ವೇಗದಲ್ಲಿ ಅಂದರೆ 18 ಪಂದ್ಯಗಳಲ್ಲೇ 100 ವಿಕೆಟುಗಳನ್ನು ಪಡೆದಿರುವುದು ದಾಖಲೆಯಾಗಿದೆ. ಈ ಪಟ್ಟಿಯಲ್ಲಿ ಎರಪಲ್ಲಿ ಪ್ರಸನ್ನ 20ನೇ ಟೆಸ್ಟ್, ಅನಿಲ್ ಕುಂಬ್ಳೆ 21, ಶುಭಾಷ್ ಗುಪ್ಟೆ, ಚಂದ್ರಶೇಖರ್ ಹಾಗೂ ಪ್ರಗ್ಯಾನ್ ಓಜಾ 22, ವಿನೂ ಮಂಕಾಡ್ 23 ಮತ್ತು ಕಪಿಲ್ ದೇವ್ ಹಾಗೂ ಹರಭಜನ್ ಸಿಂಗ್ 25 ಟೆಸ್ಟ್‌ ಪಂದ್ಯಗಳಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಿದ್ದರು.

ಅಂದ ಹಾಗೆ 2013ನೇ ಇಸವಿಯಲ್ಲಿ ತವರೂರಾದ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ಶಮಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌