ಆ್ಯಪ್ನಗರ

ಟೀಮ್ ಇಂಡಿಯಾಗೆ ದಾಖಲೆಯ ಧ್ಯಾನ; 3ನೇ ಪಂದ್ಯ ಗೆದ್ದರೆ ಕಿವೀಸ್‌ನಲ್ಲಿ ಮೊದಲ ಟಿ20 ಸರಣಿ ಗೆದ್ದ ಹಿರಿಮೆ

ಪ್ರವಾಸಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟಿ20 ಪಂದ್ಯವು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ. ಆಗಲೇ 2-0 ಅಂತರದ ಮುನ್ನಡೆ ಕಾಯ್ದುಕೊಂಡಿರುವ ಟೀಮ್ ಇಂಡಿಯಾ ಸರಣಿ ಗೆಲ್ಲಲು ಇನ್ನೊಂದು ಪಂದ್ಯದಲ್ಲಿ ಗೆಲ್ಲಬೇಕಿದೆ.

Vijaya Karnataka Web 29 Jan 2020, 8:32 am
ಮಿಲ್ಟನ್: ಪ್ರಖರ ಪ್ರದರ್ಶನಗಳ ಮೂಲಕ ಎದುರಾಳಿಯ ಜಂಘಾಬಲವನ್ನೇ ಉಡುಗಿಸುತ್ತಿ ರುವ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ನ್ಯೂಜಿಲೆಂಡ್‌ ನೆಲದಲ್ಲಿ ಮೊದಲ ಟಿ20 ಸರಣಿ ವಿಜಯಕ್ಕಾಗಿ ಹಾತೊರೆಧಿಯುತ್ತಿದೆ. ಹ್ಯಾಮಿಲ್ಟನ್‌ನ ಸೆಡಾನ್‌ಪಾರ್ಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿಧಿರುವ 3ನೇ ಟಿ20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್‌ ತಂಡವನ್ನು ಮಗದೊಮ್ಮೆ ಪರಾಭವಗೊಳಿಸುವ ಮೂಲಕ ಈ ಆಸೆ ಈಡೇರಿಸಿಕೊಳ್ಳಲಿದೆ.
Vijaya Karnataka Web ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್


ಆಕ್ಲೆಂಡ್‌ನಲ್ಲಿ ನಡೆದ ಕಳೆದೆರಡು ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಕ್ರಮವಾಗಿ 6 ಮತ್ತು 7 ವಿಕೆಟ್‌ಗಳ ಅಂತರಧಿದಿಂದ ಜಯ ಸಾಧಿಸಿತ್ತು. ಹೀಗಾಗಿ ಐದು ಪಂದ್ಯಗಳ ಹಣಾಹಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಸರಣಿ ಗೆಲುವಿಗೆ ಇನ್ನೊಂದು ಜಯ ಸಾಕು. ಇದರೊಂದಿಗೆ 2008ರಲ್ಲಿ ಧೋನಿ ನೇತೃತ್ವದ ತಂಡ ಅನುಭವಿಸಿದ್ದ 0-2 ಸರಣಿ ಸೋಲು ಹಾಗೂ ಕಳೆದ ವರ್ಷದ 1-2 ಅಂತರದ ಸೋಲಿಗೆ ಸೇಡು ತೀರಿಸಿಕೊಳ್ಳಬಹು ದು. ಅತ್ತ ಆತಿಥೇಯ ತಂಡ, ಈ ಪಂದ್ಯ ಗೆದ್ದರೆ ಮಾತ್ರ ಸರಣಿ ಗೆಲುವಿನ ಆಸೆ ಇಟ್ಟುಕೊಳ್ಳಬಹುದು. ಹೀಗಾಗಿ ಮೂರನೇ ಟಿ20 ಹೆಚ್ಚು ಜಿದ್ದಾಜಿದ್ದಿನಿಂದ ಕೂಡಿರಲಿದೆ.

ರಾರ‍ಯಂಕಿಂಗ್‌ನಲ್ಲಿ ಪ್ರಗತಿ:
ಟಿ20 ರಾರ‍ಯಂಕಿಂಗ್‌ನಲ್ಲಿ ಭಾರತ ತಂಡ ಪ್ರಸ್ತುತ ಐದನೇ ಸ್ಥಾನದಲ್ಲಿದೆ. ಒಂದು ವೇಳೆ, ಹಾಲಿ ಸರಣಿಯ ಐದೂ ಪಂದ್ಯಗಳನ್ನು ಗೆದ್ದರೆ 4ನೇ ಸ್ಥಾನಕ್ಕೇರಲು ಅವಕಾಶವಿದೆ. ಹೀಗಾಗಿ ಬುಧವಾರದ ಪಂದ್ಯ ಸೇರಿದಂತೆ ಮುಂದಿನ ಎಲ್ಲ ಪಂದ್ಯಗಳೂ ಟೀಮ್‌ ಇಂಡಿಯಾದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಮುಂಬರುವ ಟಿ20 ವಿಶ್ವ ಕಪ್‌ ಹಿನ್ನೆಲೆಯಲ್ಲಿ ತಂಡದ ಸ್ಥಿರತೆ ಕಾಪಾಡಿಧಿಕೊಳ್ಳುವುದು ಟೀಮ್‌ ಮ್ಯಾನೇಜ್ಮೆಂಟ್‌ ಮುಂದಿರುವ ದೊಡ್ಡ ಸವಾಲು. ನ್ಯೂಜಿಲೆಂಡ್‌ ಸರಣಿಯಲ್ಲಿ ಬಹುತೇಕ ಸಮಸ್ಯೆಗಳಿಗೆ ಉತ್ತರ ದೊರಕಿದ್ದರೂ, ಪ್ರತಿಯೊಂದು ಪಂದ್ಯವೂ ವಿಮರ್ಶೆಗೆ ವೇದಿಕೆ ಕಲ್ಪಿಸುತ್ತಿದೆ.

ಕಿರಿಯರ ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ ಬರೆದ ಯಂಗ್‌ ಇಂಡಿಯಾ!

ಬದಲಾವಣೆ ಇಲ್ಲ:
ಕೆ.ಎಲ್‌.ರಾಹುಲ್‌ (2 ಪಂದ್ಯ, 113 ರನ್‌) ಹಾಗೂ ಶ್ರೇಯಸ್‌ ಅಯ್ಯರ್‌ (2 ಪಂದ್ಯ, 102 ರನ್‌) ದ್ವಯರ ಪ್ರಚಂಡ ಪ್ರದರ್ಶನ ತಂಡಕ್ಕೆ ವಿಶ್ವಾಸ ತುಂಬಿದೆ. ಜತೆಗೆ ಉಳಿದ ಆಟಗಾರರೂ ಸಮರ್ಥ ಪ್ರದರ್ಶನ ನೀಡುತ್ತಿಧಿ ದ್ದಾರೆ. ಹೀಗಾಗಿ ಬುಧವಾರದ ಪಂದ್ಯಕ್ಕೂ ಅದೇ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇತ್ತ ಅವಕಾಶಧಿಗಳನ್ನು ಪಡೆಯಲು ಹೊಂಚು ಹಾಕುತ್ತಿರುವ ರಿಷಭ್‌ ಪಂತ್‌, ಕುಲ್ದೀಪ್‌ ಯಾದವ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಬಗ್ಗೆಯೂ ಟೀಮ್‌ ಮ್ಯಾನೇಜ್ಮೆಂಟ್‌ಗೆ ದೊಡ್ಡ ನಿರೀಕ್ಷೆಯಿದೆ. ಅವರನ್ನೂ ವಿಶ್ವ ಕಪ್‌ಗೆ ಮೊದಲು ಸಜ್ಜುಗೊಳಿಸುವುದು ಅನಿವಾರ್ಯ. ಆದರೆ, ಸೆಡಾನ್‌ ಪಾರ್ಕ್‌ನಲ್ಲಿ ಅವರಿಗೆ ಅವಕಾಶ ದೊರೆಯುವ ಸಾಧ್ಯತೆಗಳಿಲ್ಲ. ಟೀಮ್‌ ಇಂಡಿಯಾ ಕಳೆದ ಪಂದ್ಯದ ರೀತಿಯಲ್ಲೇ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಯೋಜನೆ ರೂಪಿಸಬಹುದು.


ಆತಿಥೇಯರಿಗೆ ಕೊನೆಯ ಅವಕಾಶ:
ಸರಣಿ ಉಳಿಸಿಕೊಳ್ಳಲು ನ್ಯೂಜಿಲೆಂಡ್‌ ತಂಡಕ್ಕೆ ಇದು ಕೊನೆಯ ಅವಕಾಶ. ಹೀಗಾಗಿ ಭಾರತೀಯ ಬೌಲರ್‌ಗಳನ್ನು ಎದುರಿಸಲು ನ್ಯೂಜಿಲೆಂಡ್‌ ಬ್ಯಾಟಿಂಗ್‌ ಬಳಗ ಇನ್ನಷ್ಟು ಸಜ್ಜಾಗಿ ಮೈದಾನಕ್ಕೆ ಇಳಿಯಬಹುದು. ಅದೇ ರೀತಿ ಭಾರತದ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿ ಹಾಕಲು ಬೌಲಿಂಗ್‌ನಲ್ಲಿ ಸೂಕ್ತ ರಣತಂತ್ರ ರೂಪಿಸಬಹುದು.

ಆಸ್ಟ್ರೇಲಿಯಾ ಆಲ್‌'ಔಟ್‌': ಕಿರಿಯ ವಿಶ್ವಕಪ್‌ ಸೆಮಿಫೈನಲ್‌ಗೆ ಯಂಗ್‌ ಇಂಡಿಯಾ ರಾಯಲ್‌ ಎಂಟ್ರಿ!

ಬ್ಯಾಟಿಂಗ್‌ ಪಿಚ್‌:
ಸೆಡಾನ್‌ ಪಾರ್ಕ್‌ ದೊಡ್ಡ ಮೊತ್ತ ದಾಖಲಾಗುವ ಸ್ಟೇಡಿಯಂ. ಕಳೆದ ಐದು ಅಂತಾರಾಷ್ಟ್ರೀಯ ಟಿ20ಗಳ ಪೈಕಿ ಮೂರರಲ್ಲಿ 190ಕ್ಕಿಂತ ಅಧಿಕ ರನ್‌ ಪೇರಿಸಲಾಗಿದೆ. ಕಳೆದ ವರ್ಷ ಭಾರತದ ಎದುರು ನ್ಯೂಜಿಲೆಂಡ್‌ ತಂಡವೇ 212 ರನ್‌ ಪೇರಿಸಿ 4 ರನ್‌ಗಳಿಂದ ಗೆದ್ದಿತ್ತು. ಇಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡವೇ ಗೆಲುವು ಸಾಧಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌