ಆ್ಯಪ್ನಗರ

ಟಿ20 ಭಾರತದ ಪಾಲು, ಏಕದಿನದಲ್ಲಿ ಕಿವೀಸ್ ಜಯಭೇರಿ: ಅಸಲಿ 'ಟೆಸ್ಟ್' ಈಗ ಶುರು!

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಭಾರತ 5-0 ಅಂತರದ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿತ್ತು. ಆದರೆ ಏಕದಿನ ಸರಣಿಯಲ್ಲಿ ವೈಟ್‌ ವಾಶ್ ಮುಖಭಂಗಕ್ಕೊಳಗಾಗಿದೆ. ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳಿಗೂ ನೈಜ ಸವಾಲು ಎದುರಾಗಲಿದೆ.

Vijaya Karnataka Web 11 Feb 2020, 5:08 pm
ಮೌಂಟ್‌ ಮಾಂಗ್ನುಯಿ: ನ್ಯೂಜಿಲೆಂಡ್ ವಿರುದ್ದ ಟ್ವೆಂಟಿ-20 ಸರಣಿಯಲ್ಲಿ ಭಾರತ 5-0 ಅಂತರದ ಭರ್ಜರಿ ಗೆಲುವು ಬಾರಿಸಿತ್ತು. ಆದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-3ರ ಅಂತರದ ಹೀನಾಯ ಸೋಲಿಗೆ ಶರಣಾಗಿದೆ. ಇದೀಗ ಇತ್ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ.
Vijaya Karnataka Web ವಿರಾಟ್ ಕೊಹ್ಲಿ


ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಜಾರಿಯಲ್ಲಿರುವುದರಿಂದ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತಕ್ಕೆ ನ್ಯೂಜಿಲೆಂಡ್ ಕಠಿಣ ಸವಾಲನ್ನು ಒಡ್ಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ತಾಯ್ನಾಡಿನಲ್ಲಿ ಕಿವೀಸ್ ಎಂದೂ ಬಲಿಷ್ಠ ತಂಡ. ಹಾಗಾಗಿ ಬ್ಲ್ಯಾಕ್ ಪಡೆಯನ್ನು ಅವರದ್ದೇ ನಾಡಿನಲ್ಲಿ ಮಣಿಸುವುದು ಭಾರತದ ಪಾಲಿಗೆ ಕಷ್ಟಕರವೆನಿಸಲಿದೆ.

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದಾಗ ಏಕದಿನ ಸರಣಿಯಲ್ಲೂ ಗೆಲುವಿನ ಓಟ ಮುಂದುವರಿಸಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಕಿವೀಸ್ ತಿರುಗೇಟು ನೀಡಿದ ರೀತಿಯಂತೂ ನಿಜಕ್ಕೂ ಶ್ಲಾಘನೀಯ. ಅದರಲ್ಲೂ ನಾಯಕ ಕೇನ್ ವಿಲಿಯಮ್ಸನ್ ಅಲಭ್ಯತೆಯಲ್ಲಿ ಟಾಮ್ ಲೇಥಮ್ ತಂಡವನ್ನು ಮುನ್ನಡೆಸಿರುವ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.

'ಬೇಡ...ಬೇಡ'; ವಿಕೆಟ್ ಮಧ್ಯೆ ಕನ್ನಡದಲ್ಲೇ ಸಂವಹನ ನಡೆಸಿದ ಕೆಎಲ್ ರಾಹುಲ್-ಮನೀಶ್ ಪಾಂಡೆ

ಅನುಭವಿ ರಾಸ್ ಟೇಲರ್ ಟಿ20 ಸರಣಿಯ ಅಮೋಘ ಫಾರ್ಮ್ ಏಕದಿನದಲ್ಲೂ ಮುಂದುವರಿಸಿದ್ದರು. ಅಷ್ಟೇ ಯಾಕೆ ಭಾರತ ವಿರುದ್ದ ಮೇಲುಗೈ ಸಾಧಿಸಲು ನೆರವಾಗಿದ್ದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನವಾಗಿದ್ದರು.

ಕಿವೀಸ್ ಸರಣಿಯಲ್ಲಿ ಇದುವರೆಗಿನ ಫಲಿತಾಂಶಗಳು ಇಂತಿದೆ:

ಟಿ20 ಸರಣಿ ಫಲಿತಾಂಶ ಇಂತಿದೆ:
ಮೊದಲ ಟಿ20: ಭಾರತಕ್ಕೆ 6 ವಿಕೆಟ್ ಜಯ
ದ್ವಿತೀಯ ಟಿ20: ಭಾರತಕ್ಕೆ 7 ವಿಕೆಟ್ ಜಯ
ತೃತೀಯ ಟಿ20: ಭಾರತಕ್ಕೆ ಸೂಪರ್ ಓವರ್ ಜಯ
ನಾಲ್ಕನೇ ಟಿ20: ಭಾರತಕ್ಕೆ ಸೂಪರ್ ಓವರ್ ಜಯ
ಅಂತಿಮ ಟಿ20: ಭಾರತಕ್ಕೆ 7 ರನ್ ಗೆಲುವು

ಏಕದಿನ ಸರಣಿ ಫಲಿತಾಂಶ ಇಂತಿದೆ:

ಮೊದಲ ಏಕದಿನ: ನ್ಯೂಜಿಲೆಂಡ್‌ಗೆ 4 ವಿಕೆಟ್ ಜಯ
ದ್ವಿತೀಯ ಏಕದಿನ: ನ್ಯೂಜಿಲೆಂಡ್‌ಗೆ 22 ರನ್ ಜಯ
ಅಂತಿಮ ಏಕದಿನ: ನ್ಯೂಜಿಲೆಂಡ್‌ಗೆ 5 ವಿಕೆಟ್ ಜಯ

ಕೊಹ್ಲಿಯನ್ನೇ ಮೀರಿಸಿ ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ:
ಮೊದಲ ಟೆಸ್ಟ್: ವೆಲ್ಲಿಂಗ್ಟನ್, ಫೆ.21ರಿಂದ 25ರ ವರೆಗೆ,
ದ್ವಿತೀಯ ಟೆಸ್ಟ್: ಕ್ರಿಸ್ಟ್‌ಚರ್ಚ್, ಫೆ.29ರಿಂದ ಮಾ.4ರ ವರೆಗೆ.

ಪಂದ್ಯಾರಂಭ: ಮುಂಜಾನೆ 4 ಗಂಟೆಗೆ (ಭಾರತೀಯ ಕಾಲಮಾನ)

ಅಭ್ಯಾಸ ಪಂದ್ಯ: ಭಾರತ vs ನ್ಯೂಜಿಲೆಂಡ್ ಇಲೆವೆನ್, ಹ್ಯಾಮಿಲ್ಟನ್ (ಫೆ.14ರಿಂದ 16ರ ವರೆಗೆ), ಬೆಳಗ್ಗೆ 3.30 (ಭಾರತೀಯ ಕಾಲಮಾನ)

103, 52, 62: ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ನೂತನ ರೈಸಿಂಗ್ ಸ್ಟಾರ್!

ಟೆಸ್ಟ್ ತಂಡ ಇಂತಿದೆ:

ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ವೃದ್ದಿಮಾನ್ ಸಹಾ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ ಮತ್ತು ಇಶಾಂತ್ ಶರ್ಮಾ (ಇನ್ನಷ್ಟೇ ದೃಢಗೊಳ್ಳಬೇಕಿದೆ).

ನ್ಯೂಜಿಲೆಂಡ್ ಟೆಸ್ಟ್ ತಂಡ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌