ಆ್ಯಪ್ನಗರ

ಭಾರತ v/s ದ. ಆಫ್ರಿಕಾ 3ನೇ ಟಿ20: ಚಿನ್ನಸ್ವಾಮಿಯಲ್ಲಿ ಗೆಲುವಿನ ಕೇಕೆ ಹಾಕಿದ ಹರಿಣ ಪಡೆ

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಬಳಿಕ, ಮೊಹಾಲಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ 7 ವಿಕೆಟ್‌ ಜಯ ದಾಖಲಿಸಿತ್ತು. ಇದೀಗ ಬೆಂಗಳೂರಿನಲ್ಲಿ ಸರಣಿ ನಿರ್ಣಾಯಕ 3ನೇ ಪಂದ್ಯ ನಡೆಯಲಿದ್ದು, ಭಾರತ ಗೆಲ್ಲುವ ಫೇವರಿಟ್‌ ತಂಡವಾಗಿದೆ.

Vijaya Karnataka Web 22 Sep 2019, 10:15 pm
ಭಾರತ vs ದ. ಆಫ್ರಿಕಾ 3ನೇ ಟಿ20 ಸ್ಕೋರ್‌ ಕಾರ್ಡ್‌ ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ಆಲ್‌ರೌಂಡ್‌ ಆಟದ ಎದುರು ತಬ್ಬಿಬ್ಬಾದ ಟೀಮ್‌ ಇಂಡಿಯಾ, ಇಲ್ಲಿ ನಡೆದ ಟಿ20 ಕ್ರಿಕೆಟ್‌ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ 9 ವಿಕೆಟ್‌ಗಳ ಹೀನಾಯ ಸೋಲನುಭವಿಸಿತು.
Vijaya Karnataka Web India vs sa 3rd t20i 2019


ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಸೆ.22) ಟಾಸ್‌ ಗೆದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಬ್ಯಾಟಿಂಗ್‌ ಸ್ನೇಹಿ ಬೆಂಗಳೂರು ಪಿಚ್‌ನಲ್ಲಿ ಬೃಹತ್‌ ಮೊತ್ತ ದಾಖಲಿಸುವ ಲೆಕ್ಕಾಚಾರದಲ್ಲಿ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದರು.

ಭಾರತ v/s ದ. ಆಫ್ರಿಕಾ 3ನೇ ಟಿ20: ಧೋನಿ ದಾಖಲೆ ಸರಿಗಟ್ಟಿದ 'ಹಿಟ್‌ಮ್ಯಾನ್‌' ರೋಹಿತ್‌!

ಆರಂಭದಲ್ಲೇ ರೋಹಿತ್‌ ಶರ್ಮಾ ವಿಕೆಟ್‌ ಕಳೆದುಕೊಂಡರೂ ಬಳಿಕ ಶಿಖರ್‌ ಧವನ್‌ ನೀಡಿದ ಚೇತರಿಕೆಯಿಂದ ಸುಧಾರಿಸಿದ ಟೀಮ್‌ ಇಂಡಿಯಾ, ಬಳಿಕ ಸತತವಾಗಿ ವಿಕೆಟ್‌ ಕೈಚೆಲ್ಲುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 134 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ರೀಜಾ ಹೆಂಡ್ರಿಕ್ಸ್‌ (28) ವಿಕೆಟ್‌ ಮಾತ್ರವೇ ಕಳೆದುಕೊಂಡು 16.5 ಓವರ್‌ಗಳಲ್ಲಿ 140 ರನ್‌ಗಳನ್ನು ಚೆಚ್ಚಿ 9 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿತು.

ಇನ್ನೂ 2 ತಿಂಗಳು ಧೋನಿ ಕ್ರಿಕೆಟ್‌ ಆಡೋಲ್ಲ ಯಾಕೆ ಗೊತ್ತಾ?!

ದಕ್ಷಿಣ ಆಫ್ರಿಕಾ ಪರ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಕ್ಯಾಪ್ಟನ್‌ ಕ್ವಿಂಟನ್‌ ಡಿ'ಕಾಕ್‌ 62 ಎಸೆತಗಳಲ್ಲಿ 6 ಫೋರ್‌ ಮತ್ತು 5 ಸ್ಫೋಟಕ ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 79 ರನ್‌ಗಳನ್ನು ಚೆಚ್ಚಿ ಜಯದ ರೂವಾರಿ ಎನಿಸಿದರು. ಅವರ ಈ ಭರ್ಜರಿ ಪ್ರದರ್ಶನಕ್ಕೆ ಪಂದ್ಯ ಮತ್ತು ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗಳು ಒಲಿದವು. ನಾಯಕನಿಗೆ ಉತ್ತಮ ಸಾಥ್‌ ನೀಡಿದ ತೆಂಬಾ ಬವೂಮಾ 23 ಎಸೆತಗಳಲ್ಲಿ 2 ಫೋರ್‌ ಮತ್ತು 1 ಸಿಕ್ಸರ್‌ ಒಳಗೊಂಡ ಅಜೇಯ 27 ರನ್‌ಗಳನ್ನು ದಾಖಲಿಸಿ ತಂಡದ ಗೆಲುವಿಗೆ ಬಲವಾದರು.

ಭಾರತ v/s ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌: ರೋಹಿತ್‌-ವಿರಾಟ್‌ ನಡುವಣ ರೇಸ್‌ನಲ್ಲಿ ಗೆಲ್ಲೋರು ಯಾರು?

ಭಾರತ ತಂಡದ ಇದೀಗ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದ್ದು, ಮೊದಲ ಟೆಸ್ಟ್‌ ವಿಶಾಖಪಟ್ಟಣದಲ್ಲಿ ಅಕ್ಟೋಬರ್‌ 2ರಂದು ಆರಂಭವಾಗಲಿದೆ. ಹರಿಣ ಪಡೆ ಈ ಸರಣಿ ಮೂಲಕ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ಗೆ ಪದಾರ್ಪಣೆ ಮಾಡಲಿದೆ.

ಸ್ಕೋರ್‌ ವಿವರ
ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 134 (ಶಿಖರ್‌ ಧವನ್‌ 36, ರೋಹಿತ್‌ ಶರ್ಮಾ 9, ವಿರಾಟ್‌ ಕೊಹ್ಲಿ 9, ರಿಷಭ್‌ ಪಂತ್‌ 19, ಹಾರ್ದಿಕ್‌ ಪಾಂಡ್ಯ 14, ರವೀಂದ್ರ ಜಡೇಜಾ 19; ಕಗಿಸೊ ರಬಾಡ 39ಕ್ಕೆ 3, ಯೊರ್ನ್‌ ಫಾರ್ಚೂನ್‌ 19ಕ್ಕೆ 2, ಬ್ಯೂರಾನ್‌ ಹೆಂಡ್ರಿಕ್ಸ್‌ 14ಕ್ಕೆ 2, ತಬ್ರೇಝ್‌ ಶಾಮ್ಸಿ 23ಕ್ಕೆ 1 ).
ದಕ್ಷಿಣ ಆಫ್ರಿಕಾ: 16.5 ಓವರ್‌ಗಳಲ್ಲಿ 1 ವಿಕೆಟ್‌ಗೆ 140 (ರೀಝಾ ಹೆಂಡ್ರಿಕ್ಸ್‌ 28, ಕ್ವಿಂಟನ್‌ ಡಿ'ಕಾಕ್‌ ಅಜೇಯ 79, ತೆಂಬಾ ಬವೂಮಾ ಅಜೇಯ 28; ಹಾರ್ದಿಕ್‌ ಪಾಂಡ್ಯ 23ಕ್ಕೆ 1).

ಆರ್‌ಸಿಬಿ ನಾಯಕತ್ವ ಬದಲಾವಣೆ ಪ್ರಶ್ನೆಗೆ ಉತ್ತರಿಸಿದ ನೂತನ ಟೀಮ್‌ ಡೈರೆಕ್ಟರ್‌ ಮೈಕ್‌ ಹೇಸನ್‌!

ತಂಡಗಳ ವಿವರ
ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ದೀಪಕ್‌ ಚಹರ್‌, ನವದೀಪ್‌ ಸೈನಿ.
ದಕ್ಷಿಣ ಆಫ್ರಿಕಾ: ಕ್ವಿಂಟನ್‌ ಡಿ'ಕಾಕ್‌ (ನಾಯಕ/ವಿಕೆಟ್‌ಕೀಪರ್‌), ತೆಂಬಾ ಬವೂಮಾ, ರಾಸಿ ವ್ಯಾನ್ ಡೆರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಆಂಡಿಲ್‌ ಫೆಹ್ಲುಕ್ವಾಯೊ, ಡ್ವೇನ್‌ ಪ್ರೆಟೊರಿಯಸ್‌, ಯೊರ್ನ್‌ ಫಾಟ್ಯೂನ್‌, ಕಗಿಸೊ ರಬಾಡ, ಎನಮ್ರಿಚ್‌ ನೋರ್ಜೆ, ತಬ್ರೇಝ್‌ ಶಾಮ್ಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌