ಆ್ಯಪ್ನಗರ

ತೀವ್ರ ಒತ್ತಡದಲ್ಲಿ ರಿಷಬ್ ಪಂತ್; ಅವಕಾಶಕ್ಕಾಗಿ ಹಾತೊರೆಯುತ್ತಿರುವ ಸಂಜು, ಕಿಶನ್!

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತೀವ್ರ ಒತ್ತಡವನ್ನು ಎದುರಿಸುತ್ತಿದ್ದಾರೆ. ಅಸ್ಥಿರ ಫಾರ್ಮ್‌ನಿಂದಾಗಿ ಕೆಂಗಣ್ಣಿಗೆ ಗುರಿಯಾಗಿರುವ ಪಂತ್ ಉತ್ತಮ ನಿರ್ವಹಣೆ ನೀಡಬೇಕಿದೆ.

Vijaya Karnataka Web 17 Sep 2019, 4:09 pm
ಮೊಹಾಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟ್ವೆಂಟಿ-20 ಸರಣಿಯ ದ್ವಿತೀಯ ಪಂದ್ಯವು ಬುಧವಾರ ಮೊಹಾಲಿಯಲ್ಲಿ ನಡೆಯಲಿದೆ. ಇದರಂತೆ ಟೀಮ್ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮೇಲೆ ಹೆಚ್ಚಿನ ಒತ್ತಡ ಕಂಡುಬಂದಿದೆ.
Vijaya Karnataka Web rishabh-pant-02


ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಹೇಳಿಕೆಗಳ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ನಿರ್ವಹಣೆ ನೀಡಬೇಕಾಗಿರುವ ಒತ್ತಡಕ್ಕೆ ಸಿಲುಕಿದ್ದಾರೆ.

ಅಬ್ಬಬ್ಬಾ... 867 ಓವರ್‌ಗಳ ಬಳಿಕ ಮೊದಲ ನೋ ಬಾಲ್ ಎಸೆದ ಕ್ರಿಸ್ ವೋಕ್ಸ್

ಈ ಎಲ್ಲ ಒತ್ತಡಗಳನ್ನು ಪಂತ್ ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪದೇ ಪದೇ ಕೆಟ್ಟ ಶಾಟ್‌ನಿಂದಾಗಿ ವಿಕೆಟ್ ಒಪ್ಪಿಸುತ್ತಿರುವುದರ ಬಗ್ಗೆ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅಸಮಾಧಾನವನ್ನು ತೋಡಿಕೊಂಡಿದ್ದರು.

ಯುವ ಆಟಗಾರರಿಂದ ಹೆಚ್ಚಿನ ನಿರೀಕ್ಷೆ...

ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ಯುವ ಸಂಯೋಜನೆಯ ಹುಡುಕಾಟದಲ್ಲಿದೆ. ಕಡಿಮೆ ಅವಕಾಶದಲ್ಲಿ ಉತ್ತಮ ನಿರ್ವಹಣೆಯನ್ನು ಆಟಗಾರರಿಂದ ನಿರೀಕ್ಷೆ ಮಾಡಲಾಗುತ್ತಿದೆ.

ರಿಷಬ್ ಪಂತ್ ವಿಕೆಟ್ ಕೀಪಿಂಗ್‌ನಲ್ಲಿ ಸೈ ಎನಿಸಿದ್ದಾರೆ. ಆದರೆ ಬ್ಯಾಟಿಂಗ್ ವಿಚಾರಕ್ಕೆ ಬಂದಾಗ ಪದೇ ಪದೇ ವೈಫಲ್ಯವನ್ನು ಅನುಭವಿಸುತ್ತಿರುವುದು ಚಿಂತೆಗೆ ಕಾರಣವಾಗಿದೆ.

70 ವರ್ಷದ ವೃದ್ಧನಿಗೆ ಪಿವಿ ಸಿಂಧೂ ಅಪಹರಿಸಿ ಮದುವೆಯಾಗುವ ಆಸೆಯಂತೆ!

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನವನ್ನು ತುಂಬುವುದು ಅಷ್ಟು ಸುಲಭವಲ್ಲ. ಕಳೆದೊಂದು ದಶಕದಲ್ಲಿ ಭಾರತ ಕ್ರಿಕೆಟ್‌ನ ಆಧಾರ ಸ್ತಂಭವಾಗಿರುವ ಧೋನಿ ಮಧ್ಯಮ ಕ್ರಮಾಂಕದಲ್ಲಿ ಫಿನಿಶರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.

ಪ್ರಸ್ತುತ ಧೋನಿ ವಿರಾಮ ತೆಗೆದುಕೊಂಡಿರುವ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ಯುವ ವಿಕೆಟ್ ಕೀಪರ್ ಬೆಳೆಸುವ ಪ್ರವೃತ್ತಿಯಲ್ಲಿದೆ. ಈ ನಿಟ್ಟಿನಲ್ಲಿ ರಿಷಬ್ ಪಂತ್‌ಗೆ ಹೆಚ್ಚಿನ ಅವಕಾಶ ನೀಡಲಾಗಿದೆ.

21ರ ಹರೆಯದ ಪಂತ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಹಾಗಾಗಿ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಹೇಗೆ ಒತ್ತಡವನ್ನು ನಿಭಾಯಿಲಿಸಲಿದ್ದಾರೆ ಎಂಬುದು ನಿರ್ಣಾಯಕವೆನಿಸುತ್ತದೆ.

ಯುವ ವಿಕೆಟ್ ಕೀಪರ್‌ಗಳ ನಡುವೆ ಸ್ಪರ್ಧೆ...
ರಿಷಬ್ ಪಂತ್ ಸತತ ವೈಫಲ್ಯವನ್ನು ಅನುಭವಿಸಿದರೆ ಗೇಟ್ ಪಾಸ್ ಅಂತೂ ಖಚಿತ. ಯುವ ವಿಕೆಟ್ ಕೀಪರ್‌ಗಳ ಸಾಲಿನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್‌ ಅವರಿಂದಲೂ ನಿಕಟ ಪೈಪೋಟಿ ಎದುರಾಗುತ್ತಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಯುವ ವಿಕೆಟ್ ಕೀಪರ್‌ಗಳು ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ. ಇದರಿಂದ ಆರೋಗ್ಯಕರ ಪೈಪೋಟಿ ಏರ್ಪಟ್ಟಿದೆ. ಒಟ್ಟಿನಲ್ಲಿ ತಂಡದಲ್ಲಿ ಸ್ಥಾನ ಗಟ್ಟಿ ಮಾಡಲು ರಿಷಬ್ ಪಂತ್‌ ಸ್ಥಿರ ಪ್ರದರ್ಶನ ನೀಡುವುದು ನಿರ್ಣಾಯಕವೆನಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌