ಆ್ಯಪ್ನಗರ

ಮಿಥಾಲಿ ಪಡೆಗೆ ಸರಣಿ ಜಯದ ತವಕ

ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು ಮೊದಲ ಪಂದ್ಯದಲ್ಲಿ ಸೋಲಿಸಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದ್ದ ಮಿಥಾಲಿ ರಾಜ್‌ ಸಾರಥ್ಯದ ಭಾರತದ ವನಿತೆಯರ ತಂಡ ಮಂಗಳವಾರ ಇನ್ನೊಂದು ಉತ್ತಮ ಪ್ರದರ್ಶನ ಸಂಘಟಿಸಿ ಸರಣಿ ಕೈವಶ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದೆ.

PTI 29 Jan 2019, 5:00 am
ಮೌಂಟ್‌ ಮೌಂಗಾನುಯ್‌ : ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು ಮೊದಲ ಪಂದ್ಯದಲ್ಲಿ ಸೋಲಿಸಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದ್ದ ಮಿಥಾಲಿ ರಾಜ್‌ ಸಾರಥ್ಯದ ಭಾರತದ ವನಿತೆಯರ ತಂಡ ಮಂಗಳವಾರ ಇನ್ನೊಂದು ಉತ್ತಮ ಪ್ರದರ್ಶನ ಸಂಘಟಿಸಿ ಸರಣಿ ಕೈವಶ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದೆ.
Vijaya Karnataka Web india women aim to seal series against nz in 2nd odi
ಮಿಥಾಲಿ ಪಡೆಗೆ ಸರಣಿ ಜಯದ ತವಕ


ಇಲ್ಲಿನ ಬೇ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯ ಗೆದ್ದಲ್ಲಿ ಮಿಥಾಲಿ ಪಡೆ ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಿಂದ ಸರಣಿ ಗೆದ್ದಂತಾಗಲಿದೆ.

ಜನವರಿ 24ರಂದು ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತೀಯ ವನಿತೆಯರು ಬ್ಯಾಟಿಂಗ್‌-ಬೌಲಿಂಗ್‌-ಫೀಲ್ಡಿಂಗ್‌ ಮೂರೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ಸಂಘಟಿಸಿ 9 ವಿಕೆಟ್‌ ಜಯ ದಾಖಲಿಸಿದ್ದರು. ಅದು ನೂತನ ಕೋಚ್‌ ಡಬ್ಲ್ಯು.ವಿ.ರಾಮನ್‌ ಗರಡಿಯಲ್ಲಿ ಪಳಗಿದ ಭಾರತ ತಂಡಕ್ಕೆ ದೊರೆತ ಮೊದಲ ಜಯ. ಈ ಗೆಲುವಿನಿಂದಾಗಿ ಭಾರತ ತಂಡ 2021ರ ವರ್ಲ್ಡ್‌ ಕಪ್‌ ಅರ್ಹತೆಗೆ ಮಾನದಂಡವಾಗಿರುವ ಐಸಿಸಿ ಚಾಂಪಿಯನ್‌ಷಿಪ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.

ಇದೀಗ 2ನೇ ಪಂದ್ಯದಲ್ಲೂ ಮಿಥಾಲಿ ಪಡೆ ಗೆದ್ದರೆ ಸರಣಿ ಭಾರತದ ಪಾಲಾಗುವುದರ ಜತೆಗೆ, 2014-2016ರ ಅವಧಿಯಲ್ಲಿ ನಡೆದ ಐಸಿಸಿ ಮಹಿಳೆಯರ ಚಾಂಪಿಯನ್‌ಷಿಪ್‌ ಸರಣಿಯಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಂತೆಯೂ ಆಗಲಿದೆ. ಆ ಸರಣಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧದ ತವರಿನ ಚರಣದಲ್ಲಿ ಭಾರತ 1-2ರ ಅಂತರದಿಂದ ಸೋತಿತ್ತು.


ಭಾರತ ತಂಡ : ಮಿಥಾಲಿ ರಾಜ್‌ (ನಾಯಕಿ), ತಾನ್ಯಾ ಭಾಟಿಯಾ (ವಿಕೆಟ್‌ಕೀಪರ್‌), ಏಕ್ತಾ ಬಿಶ್ಟ್‌, ರಾಜೇಶ್ವರಿ ಗಾಯಕ್ವಾಡ್‌, ಜೂಲನ್‌ ಗೋಸ್ವಾಮಿ, ದಯಾಳನ್‌ ಹೇಮಲತಾ, ಮಾನಸಿ ಜೋಶಿ, ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂಧಾನಾ, ಮೋನಾ ಮೇಶ್‌ರಾಮ್‌, ಶಿಖಾ ಪಾಂಡೆ, ಪೂನಂ ರಾವತ್‌, ಜೆಮಿಮಾ ರೋಡ್ರಿಗಸ್‌, ದೀಪ್ತಿ ಶರ್ಮಾ, ಪೂನಂ ಯಾದವ್‌.

ಪಂದ್ಯ ಆರಂಭ: ಬೆಳಗ್ಗೆ 6.30 (ಭಾರತೀಯ ಕಾಲಮಾನ)

ತಾಣ: ಬೇ ಓವಲ್‌, ಮೌಂಟ್‌ ಮೌಂಗಾನುಯ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌