ಆ್ಯಪ್ನಗರ

ಏಕದಿನ ಸರಣಿಗೂ ಮುನ್ನ ಟೀಮ್‌ ಇಂಡಿಯಾ ಬೌಲಿಂಗ್ ವಿಭಾಗಕ್ಕೆ ಎಚ್ಚರಿಕೆ ನೀಡಿದ ಕುಂಬ್ಳೆ!

ವಿಶ್ವದ ಯಾವುದೇ ಬೌಲಿಂಗ್ ದಾಳಿಯನ್ನು ಕೆಚ್ಚಿ ಕೆಡವಬಲ್ಲ ಪವರ್ ಹಿಟ್ಟರ್‌ಗಳನ್ನು ವೆಸ್ಟ್ ಇಂಡೀಸ್ ಹೊಂದಿದೆ ಎಂದು ಮುಂಬರುವ ಏಕದಿನ ಕ್ರಿಕೆಟ್‌ ಸರಣಿಗೂ ಮುನ್ನ ಭಾರತ ತಂಡದ ಬೌಲರ್‌ಗಳಿಗೆ ಅನಿಲ್‌ ಕುಂಬ್ಳೆ ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 13 Dec 2019, 9:52 pm
ಹೊಸದಿಲ್ಲಿ: ಯಾವುದೇ ಬೌಲಿಂಗ್ ಬೌಲಿಂಗ್ ದಾಳಿಯನ್ನು ಕೆಚ್ಚಿ ಕೆಡವಬಲ್ಲ ಪವರ್ ಹಿಟ್ಟರ್‌ಗಳನ್ನು ವೆಸ್ಟ್ ಇಂಡೀಸ್ ಹೊಂದಿದೆ. ಹಾಗಾಗಿ, ಕೆರಿಬಿಯನ್ನರ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆಯಿದೆ ಎಂದು ಸ್ಪಿನ್‌ ದಂತಕತೆ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web Anil Kumble


ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಹಣಾಹಣಿಯು ಚೆನ್ನೈನಲ್ಲಿ ಭಾನುವಾರ (ಡಿ.15ರಂದು) ನಡೆಯಲಿದೆ. ವೆಸ್ಟ್ ಇಂಡೀಸ್‌ ತಂಡದಲ್ಲಿ ಬಲಿಷ್ಟ ಹೊಡೆತಗಳನ್ನಾಡಬಲ್ಲ ಬ್ಯಾಟ್ಸ್‌ಮನ್‌ಗಳಿರುವುದರಿಂದ ಟೀಮ್‌ ಇಂಡಿಯಾ ಬೌಲರ್‌ಗಳು ಬಹಳ ಎಚ್ಚರಿಕೆಯಿಂದ ಬೌಲಿಂಗ್‌ ದಾಳಿ ನಡೆಸುವ ಅಗತ್ಯವಿದೆ ಎಂದು ಕುಂಬ್ಳೆ ಹೇಳಿದ್ದಾರೆ.

"ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್‌ ವಿಭಾಗದ ಪ್ರದರ್ಶನವನ್ನು ನೋಡಲು ಇಷ್ಟಪಡುತ್ತೇನೆ. ಏಕೆಂದರೆ, ಎದುರಾಳಿಯಲ್ಲಿ ಬಲಿಷ್ಟ ಬ್ಯಾಟಿಂಗ್‌ ವಿಭಾಗವಿದೆ. ವಿಶ್ವದ ಯಾವುದೇ ಬೌಲಿಂಗ್‌ ವಿಭಾಗವನ್ನು ದಂಡಿಸುವ ಸಾಮರ್ಥ್ಯ ಪ್ರವಾಸಿ ತಂಡಕ್ಕಿದೆ," ಎಂದು ಭಾರತ ತಂಡದ ಮಾಜಿ ಲೆಗ್ ಸ್ಪಿನ್ನರ್‌ ಕುಂಬ್ಳೆ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ ಬರೆದ ಪೊಲಾರ್ಡ್!

ಇದೇ ವೇಳೆ ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕದ ಬಗ್ಗೆ ಪ್ರತಿಕ್ರಿಯಿಸಿದ ಕಂಬೋ ಖ್ಯಾತಿಯ ಮಾಜಿ ಕ್ರಿಕೆಟಿಗ, ಶ್ರೇಯಸ್‌ ಅಯ್ಯರ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಸಲಹೆ ನೀಡಿದರು. ಮುಂಬೈ ಬ್ಯಾಟ್ಸ್‌ಮನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಕಳೆದ ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ್ದಾರೆ. ಹಾಗಾಗಿ, ಅವರು ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಎಂದು ಹೇಳಿದ್ದಾರೆ.

IPL 2020: ಹರಾಜಿನಲ್ಲಿ ಖರೀದಿಸಲಿರುವ ಬ್ಯಾಟ್ಸ್‌ಮನ್‌ಗಳ ಬಗ್ಗೆ ಸುಳಿವು ಕೊಟ್ಟ RCB!

ಶ್ರೇಯಸ್‌ ಅಯ್ಯರ್‌ ಕಳೆದ ಸೀಮಿತ ಓವರ್‌ಗಳ ಸರಣಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ವೆಸ್ಟ್ ಇಂಡೀಸ್‌ ವಿರುದ್ಧದ ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ಆಡಿ ಕ್ರಮವಾಗಿ 71 ಮತ್ತು 69 ರನ್ ಗಳಿಸಿದ್ದರು. ಈ ಮೂಲಕ ಕೆರಿಬಿಯನ್‌ ನಾಡಿನಲ್ಲಿ ಭಾರತದ ಸರಣಿ ಜಯಕ್ಕೆ ಪ್ರಧಾನ ಪಾತ್ರ ವಹಿಸಿದ್ದರು.

ಚೆನ್ನೈ ಒಡಿಐ ಕದನಕ್ಕೆ ಟೀಮ್‌ ಇಂಡಿಯಾದ ಸಂಭಾವ್ಯ 11 ಹೀಗಿದೆ!

ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಜಯ ಸಾಧಿಸಿತ್ತು. ಈ ಮೂರೂ ಪಂದ್ಯಗಳಲ್ಲಿ ಅಯ್ಯರ್‌ 22, 24* ಹಾಗೂ 62 ರನ್‌ ಬಾರಿಸಿದ್ದರು. ಕಳೆದ ವೆಸ್ಟ್ ಇಂಡೀಸ್‌ ವಿರುದ್ಧದ ಚುಟುಕು ಸರಣಿಯಲ್ಲಿ ಅಯ್ಯರ್‌ ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌