ಆಕ್ಲೆಂಡ್ : ಜೆಮಿಮಾ ರೋಡ್ರಿಗಸ್ (72ರನ್, 53 ಎಸೆತ, 6ಗಿ4, 1ಗಿ6) ಮತ್ತು ಸ್ಮೃತಿ ಮಂಧಾನಾ (36 ರನ್, 27 ಎಸೆತ, 3ಗಿ4, 1ಗಿ6) ಹೊರತುಪಡಿಸಿ ಉಳಿದ ಆಟಗಾರ್ತಿಯರು ಮತ್ತೊಮ್ಮೆ ವಿಫಲವಾಗುವುದರೊಂದಿಗೆ ಭಾರತ ಮಹಿಳಾ ತಂಡ ಶುಕ್ರವಾರ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್ಗಳಿಂದ ಸೋತು ಒಂದು ಪಂದ್ಯ ಬಾಕಿ ಇರುವಾಗಲೇ 0-2 ಅಂತರದಿಂದ ಸರಣಿ ಕಳೆದುಕೊಂಡಿದೆ.
ಹರ್ಮನ್ಪ್ರೀತ್ ಪಡೆ ಇದಕ್ಕೂ ಮೊದಲು ವೆಲ್ಲಿಂಗ್ಟನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 23 ರನ್ಗಳಿಂದ ಸೋತಿತ್ತು. ಹೀಗಾಗಿ ಭಾನುವಾರ ಹ್ಯಾಮಿಲ್ಟನ್ನಲ್ಲಿ ನಡೆಯಲಿರುವ 3ನೇ ಪಂದ್ಯ ಮಹತ್ವ ಕಳೆದುಕೊಂಡಿದೆ.
ಇದು ಭಾರತ ತಂಡದ 100ನೇ ಟಿ20 ಪಂದ್ಯವಾಗಿತ್ತು. ಈ ಪೈಕಿ, 53 ಪಂದ್ಯಗಳಲ್ಲಿ ಗೆದ್ದು 45ರಲ್ಲಿ ಸೋತಿದೆ. 2 ಪಂದ್ಯಗಳಲ್ಲಿ ಫಲಿತಾಂಶ ಸಿಕ್ಕಿಲ್ಲ.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಬಳಿಕ, ಆತಿಥೇಯರು 6 ವಿಕೆಟ್ ಕಳೆದುಕೊಂಡು ಕೊನೆಯ ಎಸೆತದಲ್ಲಿ ಗುರಿ ಭೇದಿಸುವುದರೊಂದಿಗೆ ಪಂದ್ಯ ರೋಚಕ ಅಂತ್ಯ ಕಂಡಿತು.
ಸಂಕ್ಷಿಪ್ತ ಸ್ಕೋರ್
ಭಾರತ : 135/6 (ಸ್ಮೃತಿ 36, ಜೆಮಿಮಾ 72; ರೋಸ್ಮೇರಿ 17ಕ್ಕೆ 2).
ನ್ಯೂಜಿಲೆಂಡ್ : 136/6 (ಸೂಝಿ ಬೇಟ್ಸ್ 62, ಏಮಿ ಸ್ಯಾಟರ್ತ್ವೇಟ್ 23; ರಾಧಾ ಯಾದವ್ 23ಕ್ಕೆ 2, ಅರುಂಧತಿ ರೆಡ್ಡಿ 22ಕ್ಕೆ 2).