ಆ್ಯಪ್ನಗರ

ಮಿಥಾಲಿ ಪಡೆ ಶುಭಾರಂಭ

ಆರಂಭಿಕ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ (48) ಮತ್ತು ನಾಯಕಿ ಮಿಥಾಲಿ ರಾಜ್‌ (44) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಏಕ್ತಾ ಬಿಶ್ಟ್‌ (25ಕ್ಕೆ4) ಅವರ ಸ್ಪಿನ್‌ ಮೋಡಿಯ ನೆರವಿನಿಂದ ಭಾರತ ವನಿತೆಯರ ತಂಡ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 66 ರನ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ.

PTI 23 Feb 2019, 5:00 am
ಇಂಗ್ಲೆಂಡ್‌ ವಿರುದ್ಧ 66 ರನ್‌ ಜಯ|3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ
Vijaya Karnataka Web indian womens team beat england by 66 runs in first odi
ಮಿಥಾಲಿ ಪಡೆ ಶುಭಾರಂಭ

ಮುಂಬಯಿ :
ಆರಂಭಿಕ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ (48) ಮತ್ತು ನಾಯಕಿ ಮಿಥಾಲಿ ರಾಜ್‌ (44) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಏಕ್ತಾ ಬಿಶ್ಟ್‌ (25ಕ್ಕೆ4) ಅವರ ಸ್ಪಿನ್‌ ಮೋಡಿಯ ನೆರವಿನಿಂದ ಭಾರತ ವನಿತೆಯರ ತಂಡ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 66 ರನ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ ತಂಡಕ್ಕೆ ಜೆಮಿಮಾ (48 ರನ್‌, 58 ಎಸೆತ, 8್ಡ4) ಮತ್ತು ಸ್ಮೃತಿ (24) ಜೋಡಿ 69 ರನ್‌ಗಳ ಗಟ್ಟಿ ತಳಪಾಯ ಹಾಕಿಕೊಟ್ಟಿತು. ಬಳಿಕ ಮಧ್ಯಮ ಸರದಿಯಲ್ಲಿ ನಾಯಕಿ ಮಿಥಾಲಿ (44 ರನ್‌, 74 ಎಸೆತ, 4್ಡ4) ಹಾಗೂ ಅಂತಿಮ ಓವರ್‌ಗಳಲ್ಲಿ ತಾನಿಯಾ ಭಾಟಿಯಾ (25) ಮತ್ತು ಜೂಲನ್‌ ಗೋಸ್ವಾಮಿ (30) ತಂಡಕ್ಕೆ ಉಪಯುಕ್ತ ಕಾಣಿಕೆ ಸಲ್ಲಿಸಿದ ಫಲವಾಗಿ ಭಾರತ 49.4 ಓವರ್‌ಗಳಲ್ಲಿ 202 ರನ್‌ ಕಲೆಹಾಕಿ ಸರ್ವಪತನ ಕಂಡಿತು.

ಬಳಿಕ ಸವಾಲಿನ ಮೊತ್ತ ಬೆನ್ನಟ್ಟಿದ ಪ್ರವಾಸಿ ಇಂಗ್ಲೆಂಡ್‌ ತಂಡ ಏಕ್ತಾ ಬಿಶ್ಟ್‌ (25ಕ್ಕೆ 4) ಸಾರಥ್ಯದ ಆತಿಥೇಯ ಬೌಲಿಂಗ್‌ ಪಡೆಯ ಕರಾರುವಾಕ್‌ ದಾಳಿಯ ಮುಂದೆ ಕ್ರೀಸಿನಲ್ಲಿ ನೆಲೆ ನಿಲ್ಲಲಾಗದೆ ಇನ್ನೂ 9 ಓವರ್‌ ಬಾಕಿ ಇರುವಾಗಲೇ 136 ರನ್‌ಗಳಿಗೆ ಆಲ್‌ಔಟಾಯಿತು.

ಸಂಕ್ಷಿಪ್ತ ಸ್ಕೋರ್‌
ಭಾರತ : 49.4 ಓವರ್‌ಗಳಲ್ಲಿ 202/10 (ಜೆಮಿಮಾ 48, ಮಿಥಾಲಿ 44; ಸೋಫಿ 27ಕ್ಕೆ 2)
ಇಂಗ್ಲೆಂಡ್‌ : 41 ಓವರ್‌ಗಳಲ್ಲಿ 136/10 (ಹೆದರ್‌ ನೈಟ್‌ 39*, ಸೈವರ್‌ 44; ಏಕ್ತಾ ಬಿಶ್ಟ್‌ 25ಕ್ಕೆ 4).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌