ಆ್ಯಪ್ನಗರ

RP Singh: ಭಾರತದ ಟಿ-20 ವಿಶ್ವಕಪ್ ವಿಜೇತ ತಂಡದ ಹೀರೊ ಆರ್‌ಪಿ ಸಿಂಗ್ ನಿವೃತ್ತಿ

2007ನೇ ಇಸವಿಯಲ್ಲಿ ಟೀಮ್ ಇಂಡಿಯಾ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಗೆಲ್ಲಲು ಮಹತ್ವದ ಪಾತ್ರ ವಹಿಸಿರುವ ಎಡಗೈ ವೇಗಿ ರುದ್ರ ಪ್ರತಾಪ್ ಸಿಂಗ್ ಎಲ್ಲ ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. 32ರ ಹರೆಯದ ಆರ್‌ಪಿ ಸಿಂಗ್, ಈ ವಿವರಗಳನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

TOI.in 5 Sep 2018, 11:22 am
ಮುಂಬಯಿ: 2007ನೇ ಇಸವಿಯಲ್ಲಿ ಟೀಮ್ ಇಂಡಿಯಾ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಗೆಲ್ಲಲು ಮಹತ್ವದ ಪಾತ್ರ ವಹಿಸಿರುವ ಎಡಗೈ ವೇಗಿ ರುದ್ರ ಪ್ರತಾಪ್ ಸಿಂಗ್ ಎಲ್ಲ ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. 32ರ ಹರೆಯದ ಆರ್‌ಪಿ ಸಿಂಗ್, ಈ ವಿವರಗಳನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Vijaya Karnataka Web rp-singh


13 ವರ್ಷಗಳ ಹಿಂದೆ 2005 ಸೆಪ್ಟೆಂಬರ್ 5ರಂದು ಆರ್‌ಪಿ ಸಿಂಗ್ ಮೊತ್ತ ಮೊದಲ ಬಾರಿಗೆ ಟೀಮ್ ಇಂಡಿಯಾ ಜೆರ್ಸಿ ಧರಿಸಿದ್ದರು. ಇದು ಜೀವನದ ಅತಿ ಹೆಚ್ಚು ಆನಂದದಾಯಕ ಕ್ಷಣ ಎಂದಿದ್ದಾರೆ.

ತಮ್ಮ ಈ ಕ್ರಿಕೆಟ್ ಜೀವನ ನನಸಾಗಿಸಲು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಲು ಆರ್‌ಪಿ ಸಿಂಗ್ ಮರೆಯಲಿಲ್ಲ. ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20ಗಳಲ್ಲಾಗಿ 82 ಪಂದ್ಯಗಳನ್ನು ಆಡಿರುವ ಆರ್‌ಪಿ ಸಿಂಗ್ 100ಕ್ಕೂ ಹೆಚ್ಚು ವಿಕೆಟುಗಳನ್ನು ಪಡೆದಿದ್ದಾರೆ.

"ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದ ನಾನು ನನ್ನ ಕನಸಿನಲ್ಲಿ ಜೀವಿಸಲಿದ್ದೇನೆ ಎಂದು ಅಂದುಕೊಂಡಿರಲಿಲ್ಲ. ಇದನ್ನು ನನಸಾಗಿಸಿದ ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಲಿಚ್ಛಿಸುತ್ತೇನೆ. ನನ್ನ ಸಾಮರ್ಥ್ಯದಲ್ಲಿ ನಂಬಿಕೆಯಿಟ್ಟಿದ್ದಕ್ಕಾಗಿ, ವಿಮರ್ಶೆ ಮಾಡಿದ್ದಕ್ಕಾಗಿ, ಇವೆಲ್ಲದಕ್ಕೂ ಮಿಗಿಲಾಗಿ ನನ್ನ ಜೊತೆ ಇದ್ದಿದ್ದಕ್ಕಾಗಿ" ಎಂದು ಸೇರಿಸಿದರು.

ಆರ್‌ಪಿ ಸಿಂಗ್ ವೃತ್ತಿ ಜೀವನ:

ಟೆಸ್ಟ್: ಪಂದ್ಯ: 14, ಇನ್ನಿಂಗ್ಸ್: 19, ರನ್: 116, ಗರಿಷ್ಠ: 30, ಸರಾಸರಿ: 7.25, ಕ್ಯಾಚ್: 6, ವಿಕೆಟ್: 40, ಶ್ರೇಷ್ಠ ಬೌಲಿಂಗ್: 5/59, ಬೌಲಿಂಗ್ ಸರಾಸರಿ: 42.05, ಎಕಾನಮಿ: 3.98, 5 ವಿಕೆಟ್: 1

ಏಕದಿನ: ಪಂದ್ಯ: 58, ಇನ್ನಿಂಗ್ಸ್: 20, ರನ್: 104, ಗರಿಷ್ಠ: 23, ಸರಾಸರಿ: 10.40, ಕ್ಯಾಚ್: 13, ವಿಕೆಟ್: 69, ಶ್ರೇಷ್ಠ ಬೌಲಿಂಗ್: 4/35, ಬೌಲಿಂಗ್ ಸರಾಸರಿ: 33.95, ಎಕಾನಮಿ: 5.48, 4 ವಿಕೆಟ್: 2

ಟ್ವೆಂಟಿ-20: ಪಂದ್ಯ: 10, ಇನ್ನಿಂಗ್ಸ್: 2, ರನ್: 2, ಗರಿಷ್ಠ: 2*, ಕ್ಯಾಚ್: 2, ವಿಕೆಟ್: 15, ಶ್ರೇಷ್ಠ ಬೌಲಿಂಗ್: 4/13, ಬೌಲಿಂಗ್ ಸರಾಸರಿ: 15.00, ಎಕಾನಮಿ: 6.81, 4 ವಿಕೆಟ್: 1

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌