ಆ್ಯಪ್ನಗರ

ಗಾಯಾಳು ಪ್ಲೆಸಿಸ್ ಸರಣಿಯಿಂದಲೇ ಔಟ್

ಭಾರತ ವಿರುದ್ಧ ಸಾಗುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಆತಿಥೇಯ ದಕ್ಷಿಣ ಆಫ್ರಿಕಾ ಮಗದೊಂದು ಆಘಾತಕ್ಕೊಳಗಾಗಿದೆ.

TIMESOFINDIA.COM 3 Feb 2018, 9:08 am
ಹೊಸದಿಲ್ಲಿ: ಭಾರತ ವಿರುದ್ಧ ಸಾಗುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಆತಿಥೇಯ ದಕ್ಷಿಣ ಆಫ್ರಿಕಾ ಮಗದೊಂದು ಆಘಾತಕ್ಕೊಳಗಾಗಿದೆ.
Vijaya Karnataka Web injured faf du plessis ruled out of india odis t20is
ಗಾಯಾಳು ಪ್ಲೆಸಿಸ್ ಸರಣಿಯಿಂದಲೇ ಔಟ್


ಮೊದಲ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿರುವ ಹರಿಣಗಳ ನಾಯಕ ಫಾಫ್ ಡು ಪ್ಲೆಸಿಸ್ ಸಂಪೂರ್ಣ ಸರಣಿಯಿಂದಲೇ ನಿರ್ಗಮಿಸಿದ್ದಾರೆ.

ಡರ್ಬನ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ಲೆಸಿಸ್ ಬೆರಳಿಗೆ ಗಾಯಮಾಡಿಕೊಂಡಿದ್ದರು. ಇದೀಗ ಆರು ಪಂದ್ಯಗಳ ಏಕದಿನ ಸೇರಿದಂತೆ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೂ ಅಲಭ್ಯವಾಗಿದ್ದಾರೆ.

ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಲೂ ಡು ಪ್ಲೆಸಿಸ್‌ಗೆ ಮೂರರಿಂದ ಆರು ವಾರಗಳಷ್ಟು ಕಾಲ ವಿಶ್ರಾಂತಿ ಸೂಚಿಸಲಾಗಿದೆ.

ಡು ಪ್ಲೆಸಿಸ್ ಅಲಭ್ಯತೆಯಲ್ಲಿ ಫರ್ಹಾನ್ ಬೆಹಾರ್ಡಿನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹಾಗೆಯೇ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಹೆನ್‌ರಿಚ್ ಕ್ಲಾಸೆನ್ ಅವರಿಗೂ ಬುಲಾವ್ ನೀಡಲಾಗಿದೆ.

ಅಂದ ಹಾಗೆ ಭಾರತ ವಿರುದ್ಧ ಸರಣಿಯಲ್ಲಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಬಹಳಷ್ಟು ಕುತೂಹಲವೆನಿಸಿದೆ. ಈ ಸಂಬಂಧ ಕ್ರಿಕೆಟ್ ದಕ್ಷಿಣ ಆಫ್ರಿಕಾ ಶನಿವಾರದಂದು ಘೋಷಣೆ ಮಾಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌