ಆ್ಯಪ್ನಗರ

ಮಯಾಂಕ್ ಅಗರ್ವಾಲ್ ಬಾಚಿದ ಕಿಂಗ್ಸ್ ಇಲೆವೆನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ನೇ ಸಾಲಿನ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರದಂದು ನಮ್ಮ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ.

Vijaya Karnataka Web 27 Jan 2018, 4:23 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ನೇ ಸಾಲಿನ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರದಂದು ನಮ್ಮ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ.
Vijaya Karnataka Web ipl 2018 auction mayank agarwal sold out for kings xi punjab
ಮಯಾಂಕ್ ಅಗರ್ವಾಲ್ ಬಾಚಿದ ಕಿಂಗ್ಸ್ ಇಲೆವೆನ್


ಇದರೊಂದಿಗೆ 1 ಕೋಟಿ ಅದಕ್ಕಿಂತಲೂ ಹೆಚ್ಚು ಕೋಟಿ ರೂಪಾಯಿಗಳನ್ನು ಬಾಚಿಕೊಂಡಿರುವ ಕರ್ನಾಟಕದ ಆಟಗಾರರ ಸಾಲಿಗೆ ಮಯಾಂಕ್ ಅಗರ್ವಾಲ್ ಸಹ ಸೇರಿದ್ದಾರೆ.

ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಕರ್ನಾಟಕದ ಈ ಬ್ಯಾಟ್ಸ್‌ಮನ್‌ರನ್ನು ಬರೋಬ್ಬರಿ 1 ಕೋಟಿ ರೂ.ಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದೆ.

20 ಲಕ್ಷ ರೂ. ಮೂಲ ಬೆಲೆಯ ಮಯಾಂಕ್ ಅವರಿಗೆ ಐಪಿಎಲ್ ಹರಾಜಿನಲ್ಲಿ ಉತ್ತಮ ಮನ್ನಣೆ ಸಿಕ್ಕಂತಾಗಿದೆ.

ಈ ಮೊದಲು ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ ತಲಾ 11 ಕೋಟಿ ರೂ.ಗಳಿಗೆ ಹರಾಜುಗೊಂಡಿದ್ದರು. ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಸಹ ಒಂದು ಕೋಟಿಗೂ ಹೆಚ್ಚು ರೂ.ಗಳಿಗೆ ಸೇಲ್ ಆಗಿದ್ದರು.

Mayank Agarwal is sold to @lionsdenkxip for INR 100 lacs VIVO #IPLAuction — IndianPremierLeague (@IPL) January 27, 2018 ಮಯಾಂಕ್ ಅಗರ್ವಾಲ್
ಮೂಲ ಬೆಲೆ: 20 ಲಕ್ಷ ರೂ.
ಖರೀದಿ: ಕಿಂಗ್ಸ್ ಇಲೆವೆನ್ ಪಂಜಾಬ್
ಮಾರಾಟ ಬೆಲೆ: 1 ಕೋಟಿ ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌