ಆ್ಯಪ್ನಗರ

ಯುವಿ ಪಂಜಾಬ್‌ಗೆ, ಗೌತಿ ಡೆಲ್ಲಿಗೆ, ಭಜ್ಜಿ ಚೆನ್ನೈಗೆ

ಇದರಂತೆ ಭಾರತದ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್, ಗೌತಮ್ ಗಂಭೀರ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಹರಭಜನ್ ಸಿಂಗ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳು ಖರೀದಿಸಿವೆ.

Vijaya Karnataka 27 Jan 2018, 11:33 am
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ನೇ ಸಾಲಿನ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರದಂದು ನಮ್ಮ ಬೆಂಗಳೂರಿನಲ್ಲಿ ಸಾಗುತ್ತಿದೆ.
Vijaya Karnataka Web ipl 2018 auction yuvi gambhir and harbhajan sold to punjab delhi and chennai respectively
ಯುವಿ ಪಂಜಾಬ್‌ಗೆ, ಗೌತಿ ಡೆಲ್ಲಿಗೆ, ಭಜ್ಜಿ ಚೆನ್ನೈಗೆ


ಇದರಂತೆ ಭಾರತದ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್, ಗೌತಮ್ ಗಂಭೀರ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಹರಭಜನ್ ಸಿಂಗ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳು ಖರೀದಿಸಿವೆ.

ಇದರೊಂದಿಗೆ ಯುವಿ ಹಾಗೂ ಹಾಗೂ ಗೌತಿ ತಮ್ಮ ಹಳೆಯ ಫ್ರಾಂಚೈಸಿಗಳಿಗೆ ಕಮ್‌ಬ್ಯಾಕ್ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಇಬ್ಬರು ಸ್ಥಳೀಯ ಹೀರೊಗಳು ತಮ್ಮ ಹುಟ್ಟೂರಿನ ತಂಡದ ಪರ ಆಡಲಿದ್ದಾರೆ. ಇದು ಅಭಿಮಾನಿಗಳಲ್ಲಿ ಹೆಚ್ಚಿನ ಸಂತಸವನ್ನುಂಟು ಮಾಡಿದೆ.

ಈ ನಡುವೆ ಕೆಕೆಆರ್ ಪರ ಎರಡು ಐಪಿಎಲ್ ಟ್ರೋಫಿಗಳನ್ನು ತಂದು ಕೊಟ್ಟಿರುವ ನಾಯಕ ಗಂಭೀರ್ ಅವರನ್ನು ಉಳಿಸಿಕೊಳ್ಳಲು ಶಾರೂಕ್ ಖಾನ್ ಮಾಲಿಕತ್ವದ ಕೋಲ್ಕತ್ತಾ ಆಸಕ್ತಿ ತೋರದಿರುವುದು ಹೆಚ್ಚಿನ ಅಚ್ಚರಿಯನ್ನುಂಟು ಮಾಡಿದೆ. ರೈಟ್ ಟು ಮ್ಯಾಚ್ ಕಾರ್ಡ್ ಇದ್ದರೂ ಗಂಭೀರ್ ಪರ ಕೆಕೆಆರ್ ಬಳಕೆ ಮಾಡಿರಲಿಲ್ಲ.

ಅತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡವು ಯುವಿ ಅವರನ್ನು ಬಿಟ್ಟು ಕೊಟ್ಟಿದೆ. ಇದೆರೂಂದಿಗೆ ತವರೂರಾದ ಕಿಂಗ್ಸ್ ಇಲೆವೆನ್ ಪಂಜಾಬ್ ಪಾತ್ರವಾಗಿದ್ದರೆ.

ಏತನ್ಮಧ್ಯೆ ಆರ್. ಅಶ್ವಿನ್ ಅವರನ್ನು ಬಿಟ್ಟುಕೊಡುವ ಮೂಲಕ ಅಚ್ಚರಿಯನ್ನುಂಟು ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್, ಹಿರಿಯ ಅನುಭವಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರನ್ನು ಪಡೆಯುವ ಮೂಲಕ ಹೆಚ್ಚು ಶಕ್ತಿಶಾಲಿ ತಂಡವೆನಿಸಿಕೊಂಡಿದೆ.

ಯುವರಾಜ್ ಸಿಂಗ್
ಮೂಲ ಬೆಲೆ: 2 ಕೋಟಿ ರೂ.
ಖರೀದಿ: ಕಿಂಗ್ಸ್ ಇಲೆವೆನ್ ಪಂಜಾಬ್
ಮಾರಾಟ ಬೆಲೆ: 2 ಕೋಟಿ ರೂ.

VIVO #IPLAuction - @lionsdenkxip gets #TeamIndia legend @YUVSTRONG12 for INR 2 Cr #KXIP pic.twitter.com/xWA2SG7ypv — IndianPremierLeague (@IPL) January 27, 2018 ಗೌತಮ್ ಗಂಭೀರ್
ಮೂಲ ಬೆಲೆ: 2 ಕೋಟಿ ರೂ.
ಖರೀದಿ: ಡೆಲ್ಲಿ ಡೇರ್‌ಡೆವಿಲ್ಸ್
ಮಾರಾಟ ಬೆಲೆ: 2.8 ಕೋಟಿ ರೂ.

VIVO #IPLAuction - @DelhiDaredevils get two-time #IPL winner @GautamGambhir for INR 2.8 Cr #CSK GG 2.8 Cr #DD pic.twitter.com/7FsDxzra4A — IndianPremierLeague (@IPL) January 27, 2018 ಹರಭಜನ್ ಸಿಂಗ್
ಖರೀದಿ: ಚೆನ್ನೈ ಸೂಪರ್ ಕಿಂಗ್ಸ್
ಮೂಲ ಬೆಲೆ: 2 ಕೋಟಿ ರೂ.
ಮಾರಾಟ ಬೆಲೆ: 2 ಕೋಟಿ ರೂ. VIVO #IPLAuction - @ChennaiIPL gets #TeamIndia legend @harbhajan_singh for INR 2 Cr #CSK pic.twitter.com/QHNj6vzGGS — IndianPremierLeague (@IPL) January 27, 2018

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌