ಉನಾದ್ಕಟ್ ಮಿಂಚು; 8.4 ಕೋಟಿ ರೂ.ಗಳಿಗೆ ರಾಜಸ್ಥಾನ ತೆಕ್ಕೆಗೆ
ಐಪಿಎಲ್ 2019 ಹರಾಜು ಪ್ರಕ್ರಿಯೆಯಲ್ಲಿ ಜೈದೇವ್ ಉನಾದ್ಕಟ್ ಬರೋಬ್ಬರಿ 8.4 ಕೋಟಿ ರೂ.ಗಳಿಗೆ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ. ಉನಾದ್ಕಟ್ 1.5 ಕೋಟಿ ರೂ.ಗಳ ಮೂಲ ಬೆಲೆಯನ್ನು ಹೊಂದಿದ್ದರು.
Vijaya Karnataka Web 18 Dec 2018, 4:48 pm
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ 2019ನೇ ಸಾಲಿನ ಹರಾಜು ಪ್ರಕ್ರಿಯೆಯಲ್ಲಿ ಭರವಸೆಯ ಎಡಗೈ ವೇಗಿ ಜೈದೇವ್ ಉನಾದ್ಕಟ್ 8.4 ಕೋಟಿ ರೂ.ಗಳಿಗೆ ಹರಾಜುಗೊಂಡಿದ್ದಾರೆ.
ಜೈಪುರದಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 1.5 ಕೋಟಿ ರೂ.ಗಳ ಮೂಲ ಬೆಲೆಯನ್ನು ಹೊಂದಿರುವ ಜೈದೇವ್ ಉನಾದ್ಕಟ್ ಅವರನ್ನುಮಗದೊಮ್ಮೆ ರಾಜಸ್ಥಾನ ರಾಯಲ್ಸ್ ಖರೀದಿಸಿದೆ.
ಉನಾದ್ಕಟ್ ಖರೀದಿಗಾಗಿ ನಿಕಟ ಪೈಪೋಟಿ ಕಂಡುಬಂದಿತ್ತು. ಅಂತಿಮವಾಗಿ ಈ ಎಡಗೈ ವೇಗಿಯನ್ನು ಖರೀದಿಸುವಲ್ಲಿ ರಾಜಸ್ಥಾನ ಫ್ರಾಂಚೈಸಿ ಯಶಸ್ವಿಯಾಗಿದೆ.
ಜೈದೇವ್ ಉನಾದ್ಕಟ್ ಸಹ ಐಪಿಎಲ್ನಲ್ಲಿ ಗಮನಾರ್ಹ ನಿರ್ವಹಣೆ ನೀಡುವ ಮೂಲಕ ತಂಡಕ್ಕೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಈ ಹಿಂದೆಯೂ ಬರೋಬ್ಬರಿ 11 ಕೋಟಿ ರೂ.ಗಳಿಗೆ ಹರಾಜುಗೊಳ್ಳುವ ಮೂಲಕ ಜೈದೇವ್ ಮೋಡಿ ಮಾಡಿದ್ದರು.