ಆ್ಯಪ್ನಗರ

ಐಪಿಎಲ್‌-9: ಕೋಲ್ಕೊತಾಗೆ ರೋಚಕ ಗೆಲುವು

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಾಬಿನ್‌ ಉತ್ತಪ್ಪ (70) ಮತ್ತು ಗೌತಮ್‌ ಗಂಭೀರ್‌ (54) ಅವರ ಅರ್ಧಶತಕಗಳ ಬಲದಿಂದ ಮಿಂಚಿದ ಕೋಲ್ಕೊತಾ ನೈಟ್‌ ರೈಡರ್ಸ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ 7 ರನ್‌ಗಳ ಗೆಲುವು ದಾಖಲಿಸಿದೆ.

ಏಜೆನ್ಸೀಸ್ 5 May 2016, 4:00 am

ಕೋಲ್ಕೊತಾ: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಾಬಿನ್‌ ಉತ್ತಪ್ಪ (70) ಮತ್ತು ಗೌತಮ್‌ ಗಂಭೀರ್‌ (54) ಅವರ ಅರ್ಧಶತಕಗಳ ಬಲದಿಂದ ಮಿಂಚಿದ ಕೋಲ್ಕೊತಾ ನೈಟ್‌ ರೈಡರ್ಸ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ 7 ರನ್‌ಗಳ ಗೆಲುವು ದಾಖಲಿಸಿದೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಬುಧವಾರ ನಡೆದ 32ನೇ ಲೀಗ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ನೈಟ್‌ ರೈಡರ್ಸ್‌ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 164 ರನ್‌ ಕಲೆ ಹಾಕಿತು.

ಗುರಿ ಬೆನ್ನತ್ತಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿ 6ನೇ ಸೋಲಿಗೆ ಶರಣಾಯಿತು. ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ 42 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ಗಳ ನೆರವಿನಿಂದ ಅಬ್ಬರದ 68 ರನ್‌ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಕೆಕೆಆರ್‌ 6ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು.

Vijaya Karnataka Web ipl 9 kkr defeat kings xi by 7 runs
ಐಪಿಎಲ್‌-9: ಕೋಲ್ಕೊತಾಗೆ ರೋಚಕ ಗೆಲುವು


ಶತಕದ ಜತೆಯಾಟ

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್‌ಗೆ ಯಶಸ್ವಿ ಆರಂಭಿಕ ಜೋಡಿಯಾದ ರಾಬಿನ್‌ ಉತ್ತಪ್ಪ ಮತ್ತು ನಾಯಕ ಗೌತಮ್‌ ಗಂಭೀರ್‌ ಮೊದಲ ವಿಕೆಟ್‌ಗೆ 101 ರನ್‌ ಸೇರಿಸುವ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟರು. ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದ ಗಂಭೀರ್‌ 45 ಎಸೆತಗಳಲ್ಲಿ 54 ರನ್‌ (6 ಬೌಂಡರಿ, 1 ಸಿಕ್ಸರ್‌) ಗಳಿಸಿದರೆ, ಮತ್ತೆ ಅಬ್ಬರಿಸಿದ ರಾಬಿನ್‌ ಉತ್ತಪ್ಪ 49 ಎಸೆತಗಳಲ್ಲಿ 6 ಬೌಂಡರಿ, 2 ಮನಮೋಹಕ ಸಿಕ್ಸರ್‌ಗಳನ್ನೊಳಗೊಂಡ 70 ರನ್‌ ಸಿಡಿಸಿದರು. ಅಲ್ಲದೆ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ 3ನೇ ಅರ್ಧಶತಕ ಗಳಿಸಿದ ಕನ್ನಡಿಗ ಐಪಿಎಲ್‌-9ರಲ್ಲಿ 300ರ ಗಡಿ ದಾಟಿದರು. ಕೆಕೆಆರ್‌ ಪರ ಔಟಾದ ಮೂವರೂ ಆಟಗಾರರು ರನ್‌ಔಟಾಗಿದ್ದು ವಿಶೇಷವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌