ಆ್ಯಪ್ನಗರ

ಕಿಂಗ್ಸ್‌ ಪಡೆಗೆ ಕನ್ನಡದ ತ್ರಿ ಮೂರ್ತಿಗಳು

ಕರ್ನಾಟಕದ ಆಟಗಾರರ ಬೆಲೆ ಹೆಚ್ಚಿಸಿದ ಪ್ರೀತಿ ಸುದರ್ಶನ್‌ ಬೆಂಗಳೂರು ಕರ್ನಾಟಕ ಪರ ರಣಜಿ ಟ್ರೋಫಿಯಲ್ಲಿ ತ್ರಿಶತಕ ವೀರರಾಗಿ ಕಂಗೊಳಿಸಿರುವ ಕೆ...

Vi.Ka. Suddiloka 28 Jan 2018, 3:00 am

ಕರ್ನಾಟಕದ ಆಟಗಾರರ ಬೆಲೆ ಹೆಚ್ಚಿಸಿದ ಪ್ರೀತಿ

ಸುದರ್ಶನ್‌

Vijaya Karnataka Web ipl auction kings xi bought karnatakas triple heores
ಕಿಂಗ್ಸ್‌ ಪಡೆಗೆ ಕನ್ನಡದ ತ್ರಿ ಮೂರ್ತಿಗಳು

ಬೆಂಗಳೂರು: ಕರ್ನಾಟಕ ಪರ ರಣಜಿ ಟ್ರೋಫಿಯಲ್ಲಿ ತ್ರಿಶತಕ ವೀರರಾಗಿ ಕಂಗೊಳಿಸಿರುವ ಕೆ.ಎಲ್‌ ರಾಹುಲ್‌, ಕರುಣ್‌ ನಾಯರ್‌ ಮತ್ತು ಮಯಾಂಕ್‌ ಅಗರ್ವಾಲ್‌ ಐಪಿಎಲ್‌ ಹರಾಜಿನಲ್ಲಿ ಒಂದೇ ತಂಡಕ್ಕೆ ಮಾರಾಟವಾಗಿದ್ದಾರೆ. ಈ ತ್ರಿಮೂರ್ತಿಗಳನ್ನು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಖರೀದಿಸಿದೆ.

ರಾಹುಲ್‌, ಕರುಣ್‌ ಮತ್ತು ಮಯಾಂಕ್‌ ಮಧ್ಯೆ ಸಾಕಷ್ಟು ಸಾಮ್ಯತೆಯಿದೆ. ಮೂವರೂ ಬಾಲ್ಯದಿಂದ ಒಟ್ಟೊಟ್ಟಿಗೇ ಆಡುತ್ತಾ ಬಂದವರು. 13ರ ವಯೋಮಿತಿಯ ಕ್ರಿಕೆಟ್‌ನಲ್ಲಿ ಮೂವರೂ ಒಂದೇ ಪಂದ್ಯದ ಮೂಲಕ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಬೆಂಗಳೂರಿನ ಇಂಡಿಯನ್‌ ಏರ್‌ಫೋರ್ಸ್‌ ಮೈದಾನದಲ್ಲಿ ಆಡುವ ಮೂಲಕ ರಾಜ್ಯ ತಂಡದೊಂದಿಗಿನ ಇವರ ಪಯಣ ಒಂದೇ ದಿನ ಆರಂಭವಾಗಿತ್ತು.

ವಿಶೇಷ ಎಂದರೆ ಮೂವರೂ ರಣಜಿ ಟ್ರೋಫಿಯಲ್ಲಿ ತ್ರಿಶತಕ ಬಾರಿಸಿದ್ದಾರೆ. ರಾಹುಲ್‌ 2014-15ನೇ ಸಾಲಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತರ ಪ್ರದೇಶ ವಿರುದ್ಧ ತ್ರಿಶತಕ (337) ಸಿಡಿಸಿದರೆ, ಮುಂಬಯಿನಲ್ಲಿ ನಡೆದ ಅದೇ ಸಾಲಿನ ಫೈನಲ್‌ನಲ್ಲಿ ಕರುಣ್‌ ತಮಿಳುನಾಡು ವಿರುದ್ಧ ತ್ರಿಶತಕ (328)ದ ಸಾಧನೆ ಮಾಡಿದ್ದರು. ಕಳೆದ ಸಾಲಿನಲ್ಲಿ (2017-18) ಮಹಾರಾಷ್ಟ್ರ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ತ್ರಿಶತಕ(304*) ಬಾರಿಸುವ ಮೂಲಕ ಮಯಾಂಕ್‌, ರಾಜ್ಯದ ರಣಜಿ 300ರ ಕ್ಲಬ್‌ಗೆ ಸೇರ್ಪಡೆಗೊಂಡಿದ್ದರು.

ಈ ತ್ರಿಶತಕವೀರರಲ್ಲಿ ರಾಹುಲ್‌ ಮತ್ತು ಕರುಣ್‌ ಈಗಾಗಲೇ ಭಾರತ ತಂಡದ ಪರ ಆಡಿದ್ದಾರೆ. ಟೆಸ್ಟ್‌, ಏಕದಿನ ಹಾಗೂ ಟಿ20 ತಂಡಗಳಲ್ಲಿ ರಾಹುಲ್‌ ಛಾಪು ಮೂಡಿಸಿದ್ದರೆ, ಕರುಣ್‌ ಟೆಸ್ಟ್‌ ಕ್ರಿಕೆಟ್‌ನಲ್ಲೂ ತ್ರಿಶತಕದ ಸಿಡಿಸಿ ಮಿಂಚಿದ್ದಾರೆ.

ಕರುಣ್‌ ಮತ್ತು ಮಯಾಂಕ್‌ ಬೆಂಗಳೂರಿನಲ್ಲೇ ಕ್ರಿಕೆಟ್‌ ಆಡಲು ಆರಂಭಿಸಿದರೆ, ಮಂಗಳೂರಿನವರಾದ ರಾಹುಲ್‌, ಕ್ರಿಕೆಟ್‌ ಭವಿಷ್ಯಕ್ಕಾಗಿ ಬೆಂಗಳೂರಿಗೆ ಬಂದವರು. ರಾಜ್ಯ ಕಿರಿಯರ ತಂಡವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಪರಿಚಯವಾಗಿ ನಂತರ ಮೂವರೂ ಆತ್ಮೀಯ ಸ್ನೇಹಿತರಾಗಿದ್ದರು. ಒಬ್ಬರ ಹಿಂದೆ ಒಬ್ಬರಂತೆ ರಾಜ್ಯ ರಣಜಿ ತಂಡವನ್ನು ಪ್ರತಿನಿಧಿಸಿ ತ್ರಿಶತಕ ಗಳಿಸುವುದರಲ್ಲೂ ಒಬ್ಬರನ್ನೊಬ್ಬರು ಹಿಂಬಾಲಿಸಿದ್ದು ವಿಶೇಷ. ಇದೀಗ ಮತ್ತೊಂದು ವಿಶೇಷ ಎಂಬಂತೆ ಈ ಬಾಲ್ಯದ ಗೆಳೆಯರು ಇದೇ ಮೊದಲ ಬಾರಿ ಒಂದೇ ಐಪಿಎಲ್‌ ತಂಡದ ಪರ ಆಡಲಿದ್ದಾರೆ.

''ನನ್ನ ರೋಲ್‌ ಮಾಡೆಲ್‌ ಸೆಹ್ವಾಗ್‌ ಅವರ ಮಾರ್ಗದರ್ಶನದಲ್ಲಿ ಗೆಳೆಯರಾದ ರಾಹುಲ್‌ ಮತ್ತು ಕರುಣ್‌ ಜತೆಗೂಡಿ ಆಡುವ ಅವಕಾಶ ಸಿಕ್ಕಿದ್ದು, ಆ ಕ್ಷ ಣವನ್ನು ಎದುರು ನೋಡುತ್ತಿದ್ದೇನೆ,'' ಎಂದು ಮಯಾಂಕ್‌ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಸೇರಿಕೊಂಡಿದ್ದಕ್ಕೆ ಖುಷಿಯಾಗಿದೆ. ವೀರೇಂದ್ರ ಸೆಹ್ವಾಗ್‌ ಅವರ ಗರಡಿಯಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ. ರಾಹುಲ್‌, ಮಯಾಂಕ್‌ ಮತ್ತು ನಾನು ಸುದೀರ್ಘ ಸಮಯದಿಂದ ಜತೆಯಾಗಿ ಆಡುತ್ತಿದ್ದು, ಕಿಂಗ್ಸ್‌ ಇಲೆವೆನ್‌ ತಂಡಕ್ಕೂ ನಾವು ಒಟ್ಟಾಗಿ ಪಂದ್ಯ ಗೆಲ್ಲಿಸಬಹುದು.

- ಕರುಣ್‌ ನಾಯರ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಆಟಗಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌