ಆ್ಯಪ್ನಗರ

ಚಂದ್ರನ ಮೇಲೆ ಮಾತ್ರವಲ್ಲ, ದೂರದ ಗ್ಯಾಲಕ್ಸಿ ವರೆಗೂ ನಮ್ಮನ್ನು ತಲುಪಿಸಲಿದೆ: ಇಸ್ರೋಗೆ ಸಚಿನ್ ಸೆಲ್ಯೂಟ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬಹುನಿರೀಕ್ಷಿತ ಚಂದ್ರಯಾನ 2 ಯೋಜನೆಗೆ ಕೊನೆ ಕ್ಷಣದಲ್ಲಿ ಹಿನ್ನಡೆಯುಂಟಾಗಿದೆ. ಆದರೂ ಭಾರತೀಯ ವಿಜ್ಞಾನಿಗಳ ಸಾಧನೆಗೆ ಮಾಜಿ ಕ್ರಿಕೆಟ್ ದಿಗ್ಗಜ ಹ್ಯಾಟ್ಸಪ್ ಹೇಳಿದ್ದಾರೆ.

Vijaya Karnataka Web 8 Sep 2019, 4:07 pm
ಮುಂಬಯಿ: ಚಂದ್ರನ ಅಂಗಣದಲ್ಲಿ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಶಸ್ವಿಯಾಗುವದರೊಂದಿಗೆ ಬಹುನಿರೀಕ್ಷಿತ ಚಂದ್ರಯಾನ 2 ಕನಸು ಮತ್ತೆ ಚಿಗುರೊಡೆದಿದೆ.
Vijaya Karnataka Web sachin-isro


ಅರ್ಬಿಟರ್ ವಿಕ್ರಂ ಲ್ಯಾಂಡರ್ ಬಗ್ಗೆ ಖಚಿತ ಮಾಹಿತಿ ದೊರಕಿದ್ದು, ಥರ್ಮಲ್ ಚಿತ್ರವನ್ನು ರವಾನಿಸಿದೆ. ಹಾಗಾಗಿ ವಿಕ್ರಂ ಲ್ಯಾಂಡರ್ ಅನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ.

2.1 ಅಂತರದಲ್ಲಿ ಕಮರಿದ ಭಾರತದ ಮಹತ್ವದ ಕನಸುಗಳು!

ಈ ಮೊದಲು ಲ್ಯಾಂಡರ್ ವಿಕ್ರಂ ಇನ್ನೇನು ಚಂದ್ರನಲ್ಲಿ ಇಳಿಯಬೇಕು ಎನ್ನುವಷ್ಟರಲ್ಲಿ 2.1 ಕೀ.ಮೀ. ದೂರದಲ್ಲಿದ್ದಾಗ ಕೊನೆ ಕ್ಷಣದಲ್ಲಿ ಸಂಪರ್ಕವನ್ನು ಕಡಿದುಕೊಂಡಿತು. ಆದರೂ ಇಸ್ರೋ ಪ್ರಯತ್ನಕ್ಕೆ ಎಲ್ಲೆಡೆಗಳಿಂದ ಬೆಂಬಲ ವ್ಯಕ್ತವಾಗಿದೆ.

ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ಇಸ್ರೋ ಬೆನ್ನಿಗೆ ನಿಂತಿದ್ದಾರೆ. ಅಂತರಿಕ್ಷಯಾನ ಮಾಡಿದ ಭಾರತದ ಮೊದಲ ಯಾತ್ರಿಕ ರಾಕೇಶ್ ಶರ್ಮಾ ಗನನದಲ್ಲಿದ್ದುಕೊಂಡು ಭಾರತವನ್ನು ವೀಕ್ಷಿಸುತ್ತಾ 'ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ' ಎಂದು ಹೇಳಿದ್ದರು. ಕೇವಲ ಚಂದ್ರನಷ್ಟೇ ಅಲ್ಲದೆ ಮುಂದೊಂದು ದಿನ ಗ್ಯಾಲಕ್ಸಿ ವರೆಗೂ ಇಸ್ರೊ ನಮ್ಮನ್ನು ಕೊಂಡೊಯ್ಯಲಿದೆ ಎಂದು ಉಲ್ಲೇಖಿಸಿದ್ದಾರೆ.

ಅಪ್ಪನ ಅಗಲಿಕೆಯು ಮಾನಸಿಕವಾಗಿ ಮತ್ತಷ್ಟು ಗಟ್ಟಿಯಾಗಲು ನೆರವಾಯಿತು: ವಿರಾಟ್ ಕೊಹ್ಲಿ

ಈ ಸಂದರ್ಭದಲ್ಲಿ ನಾವೆಲ್ಲರೂ ಹೆಮ್ಮೆಯಿಂದ 'ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ' ಘೋಷಣೆಯನ್ನು ಕೂಗಲಿದ್ದೇವೆ. ನಿಮ್ಮ ಪ್ರಯತ್ನಕ್ಕೆ ನಮ್ಮ ಸಲಾಂ ಎಂದು ಸಚಿನ್ ತೆಂಡೂಲ್ಕರ್ ಜೈಕಾರ ಹಾಡಿದ್ದಾರೆ.

ಒಟ್ಟಾರೆಯಾಗಿ ಇಸ್ರೊ ಪ್ರಯತ್ನಕ್ಕೆ ನಾಸಾ ಸೇರಿದಂತೆ ವಿಶ್ವದೆಲ್ಲೆಡೆಯಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌