ಆ್ಯಪ್ನಗರ

ನನ್ನ ನಾಯಕತ್ವದ ವೈಫಲ್ಯ; ನನ್ನ ಕ್ಷಮಿಸಿ: ಕಣ್ಣೀರಿಟ್ಟ ಸ್ಮಿತ್

ಬಾಲ್ ಟ್ಯಾಂಪರಿಂಗ್ ಮೋಸದಾಟದಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಳಿಕ ಇದೇ ಮೊದಲ ಬಾರಿಗೆ ತವರು ದೇಶ ಆಸ್ಟ್ರೇಲಿಯಾಕ್ಕೆ ಹಿಂತಿಗಿರುವ ಸ್ಟೀವ್ ಸ್ಮಿತ್ ನಡೆಸಿರುವ ಪ್ರತಿಕಾಗೋಷ್ಠಿಯಲ್ಲಿ ತೀವ್ರ ಭಾವುಕರಾಗಿ ಕಂಡುಬಂದರು.

TIMESOFINDIA.COM 29 Mar 2018, 4:48 pm
ಹೊಸದಿಲ್ಲಿ: ಬಾಲ್ ಟ್ಯಾಂಪರಿಂಗ್ ಮೋಸದಾಟದಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಳಿಕ ಇದೇ ಮೊದಲ ಬಾರಿಗೆ ತವರು ದೇಶ ಆಸ್ಟ್ರೇಲಿಯಾಕ್ಕೆ ಹಿಂತಿಗಿರುವ ಸ್ಟೀವ್ ಸ್ಮಿತ್ ನಡೆಸಿರುವ ಪ್ರತಿಕಾಗೋಷ್ಠಿಯಲ್ಲಿ ತೀವ್ರ ಭಾವುಕರಾಗಿ ಕಂಡುಬಂದರು.
Vijaya Karnataka Web steve-smith-crying-01


ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹಲವು ಬಾರಿ ಬಿಕ್ಕಿ ಬಿಕ್ಕಿ ಅತ್ತ ಸ್ಮಿತ್, ತಾವು ಮಾಡಿರುವ ತಪ್ಪಿಗಾಗಿ ಕ್ಷಮೆಯಾಚಿಸಿದರು. ಅಲ್ಲದೆ ಇದು ತಮ್ಮ ನಾಯಕತ್ವದ ವೈಫಲ್ಯ ಎಂದು ತಪ್ಪನ್ನು ಒಪ್ಪಿಕೊಂಡರು.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಅವರಿನೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರಾನ್ ಬೆನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು.


ಬಳಿಕ ಕಠಿಣ ಕ್ರಮ ಕೈಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಸ್ಮಿತ್ ಹಾಗೂ ವಾರ್ನರ್ ಮೇಲೆ ಒಂದು ವರ್ಷ ಹಾಗೂ ಬೆನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳುಗಳ ನಿಷೇಧವನ್ನು ಹೇರಿತ್ತು.

ನಾನು ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದು, ಮಾಡಿರುವ ತಪ್ಪಿನ ಸಂಪೂರ್ಣ ಹೊಣೆ ವಹಿಸಿಕೊಳ್ಳುತ್ತೇನೆ. ಯಾರನ್ನು ದೂರಲು ಇಷ್ಟಪಡುವುದಿಲ್ಲ ಎಂದು ಸ್ಮಿತ್ ಹೇಳಿದರು.

ವಿಶ್ವದಲ್ಲೇ ಕ್ರಿಕೆಟ್ ಶ್ರೇಷ್ಠ ಕ್ರೀಡೆಯಾಗಿದೆ. ಇದು ನನ್ನ ಜೀವವಾಗಿದ್ದು, ಮತ್ತೆ ಮರಳಿ ಬರುವ ನಿರೀಕ್ಷೆಯಲ್ಲಿದ್ದೇನೆ. ನನ್ನನ್ನು ಕ್ಷಮಿಸಿ, ನಾನು ಸಂಪೂರ್ಣ ಛಿದ್ರವಾಗಿದ್ದೇನೆ ಎಂದು ಭಾವುಕರಾದರು.


ಇದು ಜೀವನ ನನಗೆ ಕಲಿಸಿಕೊಟ್ಟ ಪಾಠವಾಗಿದ್ದು, ಉಳಿದ ಜೀವನವಿಡೀ ಈ ಬಗ್ಗೆ ವಿಷಾದ ಕಾಡಲಿದೆ. ಮುಂಬರುವ ಸಮಯವೇ ಇದನ್ನೆಲ್ಲ ಮರೆತು ಬಿಡಲು ಹಾಗೂ ಕಳೆದು ಹೋಗಿರುವ ಗೌರವವನ್ನು ಮರಳಿ ಪಡೆಯಲು ನೆರವಾಗುವ ಭರವಸೆಯಿದೆ ಎಂದರು.

ತುಂಬಾನೇ ನೋವಾಗಿದೆ. ನಾನು ಕ್ಷಮೆಯಾಚಿಸುತ್ತೇನೆ. ಕ್ರಿಕೆಟ್ ನನಗೆ ತುಂಬಾ ಇಷ್ಟ. ಮಕ್ಕಳನ್ನು ಆನಂದಗೊಳಿಸಲು ನನಗಿಷ್ಟ. ಇಡೀ ಆಸ್ಟ್ರೇಲಿಯಾ ಜನತೆ, ಅಭಿಮಾನಿಗಳಿಗೆ ಹಾಗೂ ಸಾರ್ವಜನಕರಿಗೆ ನನ್ನಿಂದಾಗಿ ಆಗಿರುವ ನೋವಿಗೆ ಕ್ಷಮೆಯಾಚಿಸುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌