ಆ್ಯಪ್ನಗರ

ಯುವ ಆಟಗಾರರಿಗೆ ಅವಕಾಶ ನೀಡಿ; ಧೋನಿಗೆ 'ಗಂಭೀರ' ಮಾತು

ಭಾವನೆಗಳಿಗೆ ಒಳಗಾಗದೆ ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳಿ. ಭವಿಷ್ಯದ ತಂಡವನ್ನು ಆರಿಸಲು ಯುವ ಆಟಗಾರರಿಗೆ ಅವಕಾಶ ನೀಡಿ ಎಂದು ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರದಲ್ಲಿ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 19 Jul 2019, 11:06 am
ಹೊಸದಿಲ್ಲಿ: ಭವಿಷ್ಯದ ತಂಡವನ್ನು ರೂಪಿಸುವ ನಿಟ್ಟಿನಲ್ಲಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವಂತೆ ಭಾರತದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮಾಜಿ ಆಟಗಾರ ಗೌತಮ್ ಗಂಭೀರ್ ಸಲಹೆ ಮಾಡಿದ್ದಾರೆ.
Vijaya Karnataka Web ms-dhoni-07


ಏಕದಿನ ವಿಶ್ವಕಪ್ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಇದಾದ ಬೆನ್ನಲ್ಲೇ ಗಂಭೀರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಭವಿಷ್ಯದತ್ತ ದೃಷ್ಟಿ ಹಾಯಿಸುವುದು ಅತಿ ಮುಖ್ಯ. ಧೋನಿ ನಾಯಕನಾಗಿದ್ದಾಗಲೂ ಭವಿಷ್ಯದತ್ತ ದೃಷ್ಟಿ ಹಾಯಿಸಿದ್ದರು. ನನಗೀಗಲೂ ನೆನಪಿದೆ ಆಸ್ಟ್ರೇಲಿಯಾ ಸರಣಿ ವೇಳೆ ಧೋನಿ ನನ್ನ ಬಳಿ ಹೇಳಿದ ಮಾತು; ಸಿಬಿ ಸಿರೀಸ್‌ನಲ್ಲಿ ಮೈದಾನ ಬೃಹತ್ತಾಗಿದ್ದರಿಂದ ಸಚಿನ್ ಹಾಗೂ ಸೆಹ್ವಾಗ್ ಒಂದೇ ಪಂದ್ಯದಲ್ಲಿ ಆಡುವಂತಿಲ್ಲ. ಅವರು ವಿಶ್ವಕಪ್‌ಗಾಗಿ ಯುವ ಆಟಗಾರರನ್ನು ಬಯಸಿದ್ದರು. ಭಾವನಾತ್ಮಕವಾಗಿರುವುದಕ್ಕಿಂತಲೂ ಮಿಗಿಲಾಗಿ ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎಂದು ಗಂಭೀರವಾದ ಮಾತುಗಳನ್ನಾಡಿದರು.

ಇದು ಯುವ ಆಟಗಾರರನ್ನು ಬೆಳೆಸುವ ಸಮಯ. ರಿಷಬ್ ಪಂತ್, ಸಂಜು ಸ್ಯಾಮ್ಸನ್, ಇಶಾನ್ ಕಿಶಾನ್ ಅಥವಾ ಇನ್ನು ಯಾವುದೇ ವಿಕೆಟ್ ಕೀಪರ್ ಆಗಲಿ, ಯಾರಿಗೆ ಸಾಮರ್ಥ್ಯವಿದ್ದಲ್ಲಿ ವಿಕೆಟ್ ಕೀಪರ್ ಆಗಿ ನೇಮಕ ಮಾಡಬೇಕು. ನೂತನ ವಿಕೆಟ್ ಕೀಪರ್‌ಗೆ ಒಂದು ವರೆ ವರ್ಷಗಳಷ್ಟು ಸಮಯ ನೀಡಿ. ಹಾಗೊಂದು ವೇಳೆ ನಿರ್ವಹಣೆ ನೀಡದಿದ್ದಲ್ಲಿ ಬದಲಾಯಿಸಿ. ಈ ಮೂಲಕ ಮುಂದಿನ ವಿಶ್ವಕಪ್‌ಗೆ ವಿಕೆಟ್ ಕೀಪರ್ ಯಾರೆಂಬುದು ಸ್ಪಷ್ಟವಾಗಿ ತಿಳಿದು ಬರಲಿದೆ ಎಂದು ವಿವರಿಸಿದರು.

ಏತನ್ಮಧ್ಯೆ ಭಾನುವಾರ ಸಭೆ ಸೇರಲಿರುವ ಆಯ್ಕೆ ಸಮತಿಯು ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌