ಆ್ಯಪ್ನಗರ

ಕ್ರಿಕೆಟ್ ತವರೂರು ಲಾರ್ಡ್ಸ್‌ನಲ್ಲಿ ಆ್ಯಂಡರ್ಸನ್ 99 ವಿಕೆಟ್ ಸಾಧನೆ

ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಕಿತ್ತಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್, ಕ್ರಿಕೆಟ್ ಕಾಶಿಯಲ್ಲಿ 99 ವಿಕೆಟ್‌ಗಳನ್ನು ಕಿತ್ತ ಸಾಧನೆ ಮಾಡಿದ್ದಾರೆ.

Vijaya Karnataka Web 11 Aug 2018, 3:23 pm
ಲಂಡನ್: ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಕಿತ್ತಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್, ಕ್ರಿಕೆಟ್ ಕಾಶಿಯಲ್ಲಿ 99 ವಿಕೆಟ್‌ಗಳನ್ನು ಕಿತ್ತ ಸಾಧನೆ ಮಾಡಿದ್ದಾರೆ.
Vijaya Karnataka Web james-anderson-08


ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ ವಿಕೆಟುಗಳ ಶತಕಕ್ಕಿನ್ನು ಕೇವಲ ಒಂದು ವಿಕೆಟ್ ಮಾತ್ರ ಬೇಕಿದೆ.

ಮಳೆ ಬಾಧಿತ ಪಂದ್ಯದಲ್ಲಿ ಪಿಚ್‌ನಿಂದ ಸಂಪೂರ್ಣ ನೆರವು ಪಡೆದ ಆ್ಯಂಡರ್ಸನ್ ತಮ್ಮ ಸ್ವಿಂಗ್ ದಾಳಿಯಿಂದ ಭಾರತೀಯ ಪಾಳೇಯದಲ್ಲಿ ನಡುಕ ಸೃಷ್ಟಿಸಿದ್ದರು.

ಆ್ಯಂಡರ್ಸನ್ ದಾಳಿಗೆ ಸಿಲುಕಿದ ಭಾರತ 107 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. 13.2 ಓವರ್‌ಗಳಲ್ಲೇ ಕೇವಲ 20 ರನ್ ನೀಡಿ ಐದು ವಿಕೆಟುಗಳನ್ನು ಕಿತ್ತಿದ್ದರು. ಇದರಲ್ಲಿ ಐದು ಮೇಡನ್ ಓವರ್‌ಗಳು ಸೇರಿದ್ದವು.


ಒಂದೇ ತಾಣದಲ್ಲಿ ಅತಿ ಹೆಚ್ಚು ವಿಕೆಟುಗಳನ್ನು ಪಡೆದ ಬೌಲರ್‌ಗಳು:
ಮುತ್ತಯ್ಯ ಮರಳೀಧರನ್ (ಎಸ್‌ಎಸ್‌ಸಿ): 166
ಮುತ್ತಯ್ಯ ಮರಳೀಧರನ್ (ಕ್ಯಾಂಡಿ): 117
ಮುತ್ತಯ್ಯ ಮರಳೀಧರನ್ (ಗಾಲೆ): 111
ರಂಗನ ಹೇರತ್ (ಗಾಲೆ): 99
ಜೇಮ್ಸ್ ಆ್ಯಂಡರ್ಸನ್ (ಲಾರ್ಡ್ಸ್): 99

ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟುಗಳನ್ನು ಪಡೆದ ವೇಗಿಗಳು:
ಜೇಮ್ಸ್ ಆ್ಯಂಡರ್ಸನ್: 95
ಇಮ್ರಾನ್ ಖಾನ್: 94
ಎಂ ಮಾರ್ಶಲ್: 76
ಎ ರಾಬರ್ಟ್ಸ್: 67
ಡಬ್ಲ್ಯು ಹಾಲ್/ಆರ್ ಹಾಡ್ಲೀ/ಕಟ್ಲೀ ವಾಲ್ಶ್/ ಡೇಲ್ ಸ್ಟೈನ್: 65

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌